ನ್ಯೂಸ್

ಕೋಲಾರ ಕೆನರಾ ಬ್ಯಾಂಕಿನಲ್ಲಿ ಸಂಸ್ಥಾಪಕರ ದಿನಾಚರಣೆ / ೧೦ಸಾವಿರ ಶಾಖೆ, ೧೬ ಲಕ್ಷ ಕೋ. ಹೆಚ್ಚು ವಹಿವಾಟು/ಹರಿಕೃಷ್ಣ

ವಿಜಯವಾಣಿ ಸುದ್ದಿಜಾಲ ಕೋಲಾರ

ಕೆನರಾ ಬ್ಯಾಂಕ್ ಅಮ್ಮೆಂಬಾಳ ಸುಬ್ಬರಾವ್ ಪೈ ಅವರಿಂದ ೧೯೦೬ ರಲ್ಲಿ ಆರಂಭಗೊAಡಿದ್ದು, ಇಂದು ದೇಶಾದ್ಯಂತ ೧೦ ಸಾವಿರಕ್ಕೂ ಹೆಚ್ಚು ಶಾಖೆಗಳನ್ನು ಹೊಂದಿದೆ ಎಂದು ಬ್ಯಾಂಕಿನ ಹಿರಿಯ ವ್ಯವಸ್ಥಾಪಕ ಹರಿಕೃಷ್ಣ ತಿಳಿಸಿದರು.

ನಗರದ ಬ್ಯಾಂಕಿನ ಕಚೇರಿಯಲ್ಲಿ ಸೋಮವಾರ ಬ್ಯಾಂಕಿನ ೧೨೨ನೇ ವರ್ಷದ ಸಂಸ್ಥಾಪಕರ ದಿನಾಚರಣೆ ಕಾರ್ಯಕ್ರಮದಲ್ಲಿ ಸಂಸ್ಥಾಪಕ ದಿವಂಗತ ಅಮ್ಮೆಂಬಾಲ ಸುಬ್ಬರಾವ್ ಪೈ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.

ಮಂಗಳೂರಿನಲ್ಲಿ ಕೇವಲ ಒಂದು ಶಾಖೆಯಾಗಿ ಆರಂಭಗೊAಡ ಕೆನರಾ ಬ್ಯಾಂಕ್ ಇಂದು ಬೃಹದ್ದಾಕಾರವಾಗಿ ಬೆಳೆದಿದೆ. ಸುಮಾರು ೧೬ ಲಕ್ಷ ಕೋಟಿ ರೂ.ಗಳ ವಹಿವಾಟು ನಡೆಸುತ್ತಿದ್ದು, ಲಕ್ಷಕ್ಕೂ ಹೆಚ್ಚು ಮಂದಿಗೆ ಉದ್ಯೋಗ ಕಲ್ಪಿಸುವ ಮೂಲಕ ನೆರವಾಗಿದೆ ಎಂದು ತಿಳಿಸಿದರು.

ಇಂದು ಬ್ಯಾಂಕಿAಗ್ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಕೆನರಾ ಬ್ಯಾಂಕ್ ಜಿಲ್ಲೆಯಲ್ಲಿ ಲೀಡ್ ಬ್ಯಾಂಕ್ ಆಗಿಯೂ ಜನಪರ, ರೈತಪರವಾಗಿ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.

ಅನ್ನದಾತರಿಗೆ ಅಗತ್ಯವಾದ ಸಾಲ ಸೌಲಭ್ಯ, ಮನೆ ಸಾಲ, ಚಿನ್ನಾಭರಣ ಸಾಲ, ಕೈಗಾರಿಕೆ ಸ್ಥಾಪನೆಗೆ ನೆರವು ಸೇರಿದಂತೆ ಎಲ್ಲಾ ರೀತಿಯ ಅಭಿವೃದ್ದಿ ಚಟುವಟಿಕೆಗಳಿಗೆ ಬ್ಯಾಂಕ್ ಸಾಲಸೌಲಭ್ಯ ಒದಗಿಸುತ್ತಿದೆ ಎಂದು ವಿವರಿಸಿದರು.

ಸಂಸ್ಥಾಪಕರ ದಿನಾಚರಣೆ ಅಂಗವಾಗಿ ಅಮ್ಮೆಂಬಾಳ ಸುಬ್ಬರಾವ್ ಪೈ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಬ್ಯಾಂಕಿಗೆ ಬಂದ ಗ್ರಾಹಕರಿಗೆ ಸಿಹಿ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಬ್ಯಾಂಕಿನ ವ್ಯವಸ್ಥಾಪಕ ಉಪೇಂದ್ರ, ಸಿಬ್ಬಂದಿ ರವಿಕುಮಾರ್, ಲಕ್ಷö್ಮಣ್‌ಕುಮಾರ್, ವಿಜಯಕುಮಾರ್, ರಂಗಣ್ಣ, ತಾಜ್ ಮತ್ತಿತರರಿದ್ದರು.

ಚಿತ್ರ ೨೦ ಕೆ.ಎಲ್.ಆರ್. ೦೨ : ಕೋಲಾರದಲ್ಲಿ ಕೆನರಾ ಬ್ಯಾಂಕಿನ ೧೧೬ ನೇ ಸಂಸ್ಥಾಪಕರ ದಿನಾಚರಣೆ ಕಾರ್ಯಕ್ರಮದಲ್ಲಿ ಸಂಸ್ಥಾಪಕ ದಿವಂಗತ ಅಮ್ಮೆಂಬಾಲ ಸುಬ್ಬರಾವ್ ಪೈ ಅವರ ಭಾವಚಿತ್ರಕ್ಕೆ ಬ್ಯಾಂಕಿನ ಹಿರಿಯ ವ್ಯವಸ್ಥಾಪಕ ಹರಿಕೃಷ್ಣ ಪುಷ್ಪನಮನ ಸಲ್ಲಿಸಿದರು.