ನ್ಯೂಸ್

ಕೋಲಾರ ಕಾಂಗ್ರೇಸ್ ಸಭೆಯಲ್ಲಿ ನಡೆದ ಗದ್ದಲ ರಾಜ್ಯ ಕಾಂಗ್ರೇಸ್ ಗಂಭೀರವಾಗಿ ತೆಗೆದುಕೊಳ್ಳುತ್ತದೆ / ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಿ / ಎಂ.ಎಲ್.ಸಿ. ಅನಿಲ್ ಕುಮಾರ್

ವಿಜಯವಾಣಿ ಸುದ್ದಿಜಾಲ ಕೋಲಾರ
ಕಾಂಗ್ರೇಸ್ ಕಾರ್ಯಕರ್ತರ ಸಭೆಯಲ್ಲಿ ನಡೆದ ಘಟನೆ ವಿಷಾದಕರವಾಗಿದೆ. ಆಗಬಾರದ್ದು ನಡೆದುಹೋಗಿದೆ. ಸಭೆಯಲ್ಲಿ ಕೆಲವು ಕಾರ್ಯಕರ್ತರು ಉಸ್ತುವಾರಿಯಾಗಿ ಬಂದಿದ್ದ ನಾರಾಯಣಸ್ವಾಮಿಯವರನ್ನು ಪ್ರಶ್ನಿಸುವ ಸಂದರ್ಭದಲ್ಲಿ ನಗರ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಪ್ರಸಾದ್ ಬಾಬು ನನ್ನ ವಿರುದ್ಧವೇ ಪ್ರಶ್ನಿಸುತ್ತಿದ್ದಾರೆ ಎಂದು ತಪ್ಪು ಗ್ರಹಿಕೆಯಿಂದ ಅದಕ್ಕೆ ಪ್ರತಿಕ್ರಿಯಿಸಲು ಹೋದಾಗ ಸಭೆಯಲ್ಲಿ ಗದ್ದಲ ನಡೆಯಿತು. ನಂತರ ಎಲ್ಲರನ್ನೂ ಸಮಾಧಾನ ಮಾಡಿ ಶಿಸ್ತಿನಿಂದ ಸಭೆ ನಡೆಯಿತು. ಆದರೆ ಜಿಲ್ಲಾಧ್ಯಕ್ಷ ಲಕ್ಷಿö್ಮÃನಾರಾಯಣ ನನ್ನ ಮೇಲೆ ಹಲ್ಲೆ ನಡೆದಿದೆ ಎಂದು ಪೋಲಿಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪೋಲಿಸರು ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಿದ್ದಾರೆ ಎಂದು ಎಂ.ಎಲ್.ಸಿ. ಅನಿಲ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ.

ಕೋಲಾರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ, ಸಭೆಯಲ್ಲಿ ಗದ್ದಲ ನಡೆದ ನಂತರ ಜಿಲ್ಲಾ ಉಸ್ತುವಾರಿ ನಾರಾಯಣಸ್ವಾಮಿ ಮತ್ತು ಜಿಲ್ಲಾಧ್ಯಕ್ಷ ಲಕ್ಷಿö್ಮÃನಾರಾಯಣ್ ಇಬ್ಬರೂ ಒಟ್ಟಿಗೆ ಪತ್ರಿಕಾಗೋಷ್ಠಿ ನಡೆಸಿ, ಸಭೆಯಲ್ಲಿ ಆಗಬಾರದ್ದು ಆಗಿ ಹೋಗಿದೆ. ಇದೆಲ್ಲ ಕಾಂಗ್ರೇಸ್ ಪಕ್ಷದಲ್ಲಿ ಸಹಜ ಎಂದು ಮಾಧ್ಯಮಗಳೊಂದಿಗೆ ಹೇಳಿಕೆ ನೀಡಿದ ನಂತರ ಶನಿವಾರ ರಾತ್ರಿ ಜಿಲ್ಲಾಧ್ಯಕ್ಷ ಲಕ್ಷಿö್ಮÃನಾರಾಯಣ ಗ್ರಾಮಾಂತರ ಪೋಲಿಸ್ ಠಾಣೆಗೆ ತೆರಳಿ ಕೋಲಾರದ ಬಾಲು ಮತ್ತು ಅಮರನಾರಾಯಣ ಎಂಬುವವರು ಸಭೆಯಲ್ಲಿ ಗದ್ದಲ ಎಬ್ಬಿಸಿ, ನನ್ನ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ. ಇದಕ್ಕೆ ಎಂ.ಎಲ್.ಸಿ. ಅನಿಲ್ ಕುಮಾರ್ ಕಾರಣ ಎಂದು ದೂರಿನಲ್ಲಿ ತಿಳಿಸಿದ್ದಾರಂತೆ.

ಭಾನುವಾರ ಬೆಳ್ಳಿಗ್ಗೆ ಬಾಲು ಮತ್ತು ಅಮರನಾರಾಯಣ ಪ್ರತಿ ದೂರು ನೀಡಿ, ಈ ಘಟನೆಗೆ ಸಚಿವ ಕೆ.ಮುನಿಯಪ್ಪ ಕಾರಣ ಎಂದು ದೂರಿನಲ್ಲಿ ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ. ಪೋಲಿಸರು ಎರಡು ದೂರುಗಳನ್ನು ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಿ. ವಿನಾ ಕಾರಣ ನನ್ನ ಮತ್ತು ಕೆ.ಹೆಚ್.ಮುನಿಯಪ್ಪನವರ ಹೆಸರನ್ನು ಮುನ್ನಲೆಗೆ ತರುತ್ತಿದ್ದಾರೆ.

ಬಾಲು ಮತ್ತು ಅಮರನಾರಾಯಣ ರವರನ್ನು ಕಾರ್ಯಕ್ರಮವೊಂದರಲ್ಲಿ ಮಾತನಾಡಿ ಹದಿನೈದು ದಿನಗಳು ಆಗಿದೆ. ನೆನ್ನೆ ಸಭೆಯಲ್ಲಿ ಮಾತ್ರ ಅವರನ್ನು ನೋಡಿದ್ದೇನೆ. ಒಂದೇ ಪಕ್ಷದಲ್ಲಿ ನಾನು ಮತ್ತು ಕೆ.ಹೆಚ್.ಮುನಿಯಪ್ಪನವರು ಇದ್ದೇವೆ. ಇಂಥಹ ಘಟನೆಗಳು ಪಕ್ಷದಲ್ಲಿ ನಡೆಯಬಾರದು. ಬಹಳ ವರ್ಷಗಳ ಕಾಲ ನಾವೆಲ್ಲ ಒಟ್ಟಿಗೆ ಇದ್ದವರು. ೧೯೯೧ ರಿಂದ ಕೆ.ಹೆಚ್.ಮುನಿಯಪ್ಪನವರ ಬೆನ್ನಿಗೆ ಇದ್ದಂತಹವರು ನಾವು. ಅವರು ಇಲ್ಲಿನ ಲೋಕಸಭಾ ಚುನಾವಣೆಯಲ್ಲಿ ಸೋಲಿನ ನಂತರ ದೊಡ್ಡಬಳ್ಳಾಪುರದಲ್ಲಿ ಶಾಸಕರ ಸ್ಥಾನಕ್ಕೆ ನಿಂತು ಸ್ಪರ್ಧೆ ಮಾಡಿ ಗೆಲುವು ಸಾಧಿಸಿ ಮಂತ್ರಿಯಾಗಿದ್ದಾರೆ.

ಕೆ.ಹೆಚ್.ಮುನಿಯಪ್ಪನವರನ್ನು ಮತ್ತು ನನ್ನನ್ನು ದೂರಿನಲ್ಲಿ ಮುನ್ನೆಲೆಗೆ ತರುವ ಕೆಲಸ ಮಾಡಬಾರದ್ದಾಗಿತ್ತು. ಇದು ಒಳ್ಳೆಯ ಬೆಳವಣಿಗೆಯೂ ಅಲ್ಲ. ರಾಜ್ಯ ಕಾಂಗ್ರೇಸ್ ಎಲ್ಲಾ ಬೆಳವಣಿಗೆಗಳ ಮಾಹಿತಿ ಪಡೆದು ಕ್ರಮ ಕೈಗೊಳ್ಳುತ್ತಾರೆ. ಸಭೆಯಲ್ಲಿ ಇದ್ದುದ್ದಕ್ಕೆ ನನ್ನ ಕುಮ್ಮಕ್ಕು ಇದೆ. ಸಭೆಯಲ್ಲಿ ಇಲ್ಲದೇ ಇದ್ದರೂ ಅವರ ಕುಮ್ಮಕ್ಕು ಇಲ್ಲ ಎಂದು ಹೇಳಲು ಬರುವುದಿಲ್ಲ. ಗಲಾಟೆಗೆ ಸೀಮಿತವಾದ ವಿಷಯಕ್ಕೆ ಮಾತ್ರ ಮಾತನಾಡಬೇಕಾಗಿದೆ. ಪೋಲಿಸ್ ಠಾಣೆಗೆ ಹೋಗಿದ್ದೇ ತಪ್ಪು. ಪಕ್ಷದ ಆಂತರಿಕ ವಿಚಾರವಾಗಿದೆ. ಜಿಲ್ಲೆ ಮತ್ತು ರಾಜ್ಯದಲ್ಲಿ ಅನೇಕ ಬಾರಿ ಈ ರೀತಿಯ ಘಟಣೆಗಳು ಪಕ್ಷದಲ್ಲಿ ಜರುಗಿವೆ. ಅದು ಪಕ್ಷದ ವೇದಿಕೆಯಲ್ಲಿ ಚರ್ಚೆಗಳು ನಡೆದು ಇತ್ಯರ್ಥಪಡಿಸಿಕೊಂಡು ಬಗೆಹರಿಸಿಕೊಳ್ಳಲಾಗುತ್ತದೆ. ಆದರೆ ಪೋಲಿಸ್ ಠಾಣೆ ಮೆಟ್ಟಿಲೇರಿರುವುದು ಎರಡೂ ಕಡೆಯ ತಪ್ಪುಗಳಾಗಿವೆ ಎಂದರು.

ಕೆಲವೇ ಕೆಲವು ವ್ಯಕ್ತಿಗಳಿಂದ ಇಂತಹ ಘಟನೆಗಳು ಮರುಕಳಿಸುತ್ತಲೇ ಇರುತ್ತವೆ. ಅವರು ನಮ್ಮಿಂದಲೇ ಪಕ್ಷ ಎಂದು ತಿಳಿದುಕೊಳ್ಳುತ್ತಾರೆ. ಈ ಘಟನೆಯ ಬಗ್ಗೆ ಜಿಲ್ಲಾಧ್ಯಕ್ಷರನ್ನು ಶನಿವಾರ ರಾತ್ರಿ ಜಿಲ್ಲಾ ಉಸ್ತುವಾರಿ ನಾರಾಯಣಸ್ವಾಮಿ ಮತ್ತು ಮಾಲೂರು ಶಾಸಕ ಕೆ.ವೈ.ನಂಜೇಗೌಡ ಮಾತನಾಡಿದ್ದಾರೆ. ನನಗೆ ಮೇಲಿಂದ ಒತ್ತಡಗಳು ಹೆಚ್ಚಾಗಿವೆ. ನಾನೇನು ಮಾಡಲಿ, ಅದರಿಂದ ದೂರು ನೀಡಿದ್ದೇನೆ. ನಾನು ಬಹಳ ಒತ್ತಡದಲ್ಲಿ ಸಿಕ್ಕಿಕೊಂಡು ಇದನ್ನೆಲ್ಲಾ ಮಾಡಬೇಕಾಗಿದೆ. ದಯವಿಟ್ಟು ಕ್ಷಮಿಸಿ ಎಂದು ಕಾಂಗ್ರೇಸ್ ಅಧ್ಯಕ್ಷ ತಿಳಿಸಿರುವುದಾಗಿ ಎಂ.ಎಲ್.ಸಿ. ಅನಿಲ್ ಕುಮಾರ್ ತಿಳಿಸಿದರು.

ಚಿತ್ರ ೨೯ ಕೆ.ಎಲ್.ಆರ್. ೦೫ : ಎಂ.ಎಲ್.ಸಿ. ಅನಿಲ್ ಕುಮಾರ್ ರವರ ಭಾವಚಿತ್ರ