ನ್ಯೂಸ್

ಕೋಲಾರ ಕಾಂಗ್ರೇಸ್ ಕಾರ್ಯಕರ್ತರ ಸಭೆಯಲ್ಲಿ ಗಲಭೆಗೆ ಆಸ್ಪದ ನೀಡಿದವರಿಗೆ ಕುಷ್ಠರೋಗ, ಕ್ಯಾನ್ಸರ್ ಅಂತಹ ಮಾರಕವಾದ ಖಾಯಿಲೆಗಳು ಬರಲಿ / ಶಾಸಕ ಕೊತ್ತೂರು ಮಂಜುನಾಥ್

ವಿಜಯವಾಣಿ ಸುದ್ದಿಜಾಲ ಕೋಲಾರ
ಕೋಲಾರ ನಗರದ ಹೊರ ವಲಯದ ಖಾಸಗಿ ಕಲ್ಯಾಣ ಮಂಟಪದಲ್ಲಿ ಶನಿವಾರ ಕಾರ್ಯಕರ್ತರ ಸಭೆಯಲ್ಲಿ ನಡೆದ ಗಲಾಟೆಗೆ ನನ್ನ ಮತ್ತು ಎಂ.ಎಲ್.ಸಿ. ಅನಿಲ್ ಕುಮಾರ್ ರವರ ಕೈವಾಡ ಇಲ್ಲ. ಈ ಘಟನೆಗೆ ಬೆಂಬಲ ನೀಡಿದವರಿಗೆ ಕುಷ್ಠ ರೋಗ, ಹೃದಯಾಪಘಾತ, ಕ್ಯಾನ್ಸರ್ ನಂತಹ ಮಾರಕವಾದ ರೋಗಗಳು ಬರಲಿ, ಇಲ್ಲದೆ ಹೋದರೆ ಸುಳ್ಳು ಸುದ್ದಿ ಹಬ್ಬಿಸಿ ದೂರು ನೀಡಿದವರಿಗೆ ಬರಲಿ ಎಂದು ಶಾಸಕ ಕೊತ್ತೂರು ಮಂಜುನಾಥ್ ಶಾಪ ಹಾಕಿದರು.

ಕೋಲಾರದಲ್ಲಿ ಮಾಧ್ಯಮಗಳೊಂದಿಗೆ ಭಾನುವಾರ ಮಾತನಾಡಿ, ಕಾರ್ಯಕರ್ತರ ಸಭೆಗಳಲ್ಲಿ ಕಷ್ಟ ಸುಖಗಳನ್ನು ಕಾರ್ಯಕರ್ತರು ಹೇಳಿಕೊಳ್ಳುತ್ತಾರೆ. ಕೇಳಿವುದು ಜನಪ್ರತಿನಿಧಿಗಳ ಜವಾಬ್ದಾರಿ. ಆ ಸಂದರ್ಭದಲ್ಲಿ ಕಾರ್ಯಕರ್ತರ ಮಧ್ಯೆ ತಳ್ಳಾಟ ನೂಕಾಟ ನಡೆಯಿತು. ಇದಾದ ನಂತರ ಜಿಲ್ಲಾ ಉಸ್ತುವಾರಿ ನಾರಾಯಣಸ್ವಾಮಿ ಎಲ್ಲರನ್ನೂ ಸಮಾಧಾನಪಡಿಸಿ ಸಭೆ ನಡೆಯಿತು. ಶನಿವಾರ ರಾತ್ರಿ ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷ ಲಕ್ಷಿö್ಮÃನಾರಾಯಣ್ ನನ್ನ ಮೇಲೆ ಹಲ್ಲೆ ನಡೆಯಿತು ಎಂದು ಪೋಲಿಸ್ ಠಾಣೆಯಲ್ಲಿ ದೂರು ನೀಡಿ, ಇದಕ್ಕೆ ಎಂ.ಎಲ್.ಸಿ. ಅನಿಲ್ ಕುಮಾರ್ ಕಾರಣ ಎಂದು ತಿಳಿಸಿದ್ದಾರೆ.

ನಾನು ಮತ್ತು ಅನಿಲ್ ಕುಮಾರ್ ಇಬ್ಬರೂ ಒಂದೇ, ನಾವ್ಯಾರು ಆ ಘಟನೆಗೆ ಬೆಂಬಲ ನೀಡಿಲ್ಲ. ಕೋಲಾರಮ್ಮ ಸಾಕ್ಷಿಯಾಗಿ ನಾವ್ಯಾರು ಆ ಘಟನೆಗೆ ಕುಮ್ಮಕ್ಕು ನೀಡಿಲ್ಲ. ಕುಮ್ಮಕ್ಕು ನೀಡಿದ್ದು ಸಾಬೀತಾದರೆ ನಮಗೆ ಯಾವ ಖಾಯಿಲೆಗಳು ಬೇಕಾದರೆ ಬರಲಿ, ಇಲ್ಲ ಸುಳ್ಳು ದೂರು ನೀಡಿದವರಿಗೆ ಬರಲಿ. ಯಾರ ಕುಮ್ಮಕ್ಕು ಮೇಲೆ ನಡೆದಿದೆ ಎಂದು ದೇವರೇ ನೋಡಿಕೊಳ್ಳಲಿ. ನಾನಾಗಲೀ ಎಂ.ಎಲ್.ಸಿ. ಅನಿಲ್ ಕುಮಾರ್ ಆಗಲೀ ಸಭೆಯಲ್ಲಿ ಮಾತನಾಡಲೇ ಇಲ್ಲ. ಇದಕ್ಕೆ ನಮಗೂ ಯಾವುದೇ ಸಂಬಧವೂ ಇಲ್ಲ. ಇಂಥಹ ಘಟನೆಗಳು ಕಾಂಗ್ರೇಸ್ ಪಕ್ಷದಲ್ಲಿ ಆಗಾಗ ನಡೆಯುತ್ತಲೇ ಇರುತ್ತವೆ. ಇದರಿಂದ ಪಕ್ಷಕ್ಕೆ ಯಾವುದೇ ತೊಂದರೆ ಇಲ್ಲ ಎಂದರು.

ನಮ್ಮದು ಡ್ರಾಮಾ ಕಂಪನಿಯಲ್ಲ. ಯಾರು ಸುಳ್ಳು ದೂರು ನೀಡಿದ್ದಾರೆ ಅವರದು ಡ್ರಾಮ ಕಂಪನಿ. ಗುಂಪುಗಾರಿಕೆಯಿAದ ಪಕ್ಷಕ್ಕೆ ಸದ್ಯಕ್ಕೆ ಹಿನ್ನಡೆಯಾಗಿರಬಹುದು. ಇದು ಕೋಲಾರ ಜಿಲ್ಲೆಯಲ್ಲಿ ಸಹಜವಾಗಿಬಿಟ್ಟಿದೆ. ಗಲಾಟೆಯಲ್ಲಿ ಮುಂದಾದ ಮತ್ತೊಬ್ಬ ನಗರ ಕಾಂಗ್ರೇಸ್ ಅಧ್ಯಕ್ಷ ಪ್ರಸಾದ್ ಬಾಬು ರವರನ್ನು ಪೌರಕಾರ್ಮಿಕರ ದಿನಾಚರಣೆಯಲ್ಲಿ ವೇದಿಕೆಗೆ ಕರೆದೆ. ಅಲ್ಲಿಯೂ ಸಹ ವಿನಾಕಾರಣ ಕ್ಯಾತೆ ತೆಗೆದರು. ಗುಂಪುಗಾರಿಕೆ ಮಾಡಬೇಕೆಂಬ ಉದ್ದೇಶದಿಂದಲೇ ಗುಂಪುಗಾರಿಕೆಯನ್ನು ಮಾಡುತ್ತಿದ್ದಾರೆ. ನನಗೆ ಆ ಗುಂಪು ಈ ಗುಂಪು ಎಂಬ ಭೇದಭಾವವಿಲ್ಲ. ಎಲ್ಲರೂ ಸಮಾನ. ಎಂ.ಎಲ್.ಸಿ. ಅನಿಲ್ ಕುಮಾರ್ ರವರ ಮೇಲಿರುವ ಆರೋಪಕ್ಕೆ ನಾನು ಉತ್ತರ ಕೊಡುತ್ತಿದ್ದೇನೆ. ನಾನು ಅವರು ಒಟ್ಟಿಗೆ ಇರುವುದು. ಅವರಾಗಲೀ ನಾನಾಗಲೀ ಇಂತಹ ಘಟನೆಗೆ ಕುಮ್ಮಕ್ಕು ನೀಡಿಲ್ಲ. ನೀಡುವುದು ಇಲ್ಲ ಎಂದರು.

ಚಿತ್ರ ೨೯ ಕೆ.ಎಲ್.ಆರ್. ೦೪ : ಎಂ.ಎಲ್.ಎ. ಕೊತ್ತೂರು ಮಂಜುನಾಥ್ ರವರ ಭಾವಚಿತ್ರ