ನ್ಯೂಸ್

ಕೋಮುಲ್​ ಹಣಾಹಣಿಗೆ ಕಸರತ್ತು ಬಿರುಸು

ಕಿರುವಾರ ಎಸ್​.ಸುದರ್ಶನ್​ ಕೋಲಾರ

ಕೋಲಾರ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ (ಕೋಮುಲ್​) ಆಡಳಿತ ಮಂಡಳಿ ಚುನಾವಣೆಗೆ ದಿನಾಂಕ ಘೋಷಣೆಯಾದ ಬೆನ್ನಲ್ಲೇ ರಾಜಕೀಯ ಪಕ್ಷಗಳಲ್ಲಿ ಚಟುವಟಿಕೆಗಳು ಗರಿಗೆದರುತ್ತಿವೆ.

ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಡಾ.ಎಂ.ಆರ್​.ರವಿ ಅವರು ಒಕ್ಕೂಟದ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆಯನ್ನು ಜೂ.25ಕ್ಕೆ ನಿಗದಿಪಡಿಸಿ ಅಧಿಸೂಚನೆ ಹೊರಡಿಸಿದ್ದು, ಪ್ರಕ್ರಿಯೆ ಕೈಗೊಳ್ಳುವಂತೆ ಸೂಚಿಸಿದ್ದಾರೆ.

ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಗೋಪಾಲಮೂರ್ತಿ ಅವರು ಮತದಾರರ ಪಟ್ಟಿ ತಯಾರಿಗೆ ಕ್ರಮವಹಿಸಿ ಒಟ್ಟು 982 ಹಾಲು ಪ್ರಾಥಮಿಕ ಸಹಕಾರ ಸಂಗಳಿಗೆ ಸುತ್ತೋಲೆ ಹೊರಡಿಸಿದ್ದಾರೆ. ಅಂತೆಯೇ, ಕರ್ನಾಟಕ ಸಹಕಾರ ಸಂಗಳ ಕಾಯ್ದೆ 1959 ಮತ್ತು ನಿಯಮಾವಳಿಗಳು 1960 ನಿಯಮ 13(ಡಿ), (3)(ಡಿ)ರೀತ್ಯಾ ಅಂತಿಮ ಮತದಾರರ ಪಟ್ಟಿ ತಯಾರಿಸುವ ಸಲುವಾಗಿ ಒಕ್ಕೂಟದ ಅಧಿಕಾರಿಗಳು ಮುಂದಾಗಿದ್ದು, ಪಟ್ಟಿ ಪರಿಶೀಲಿಸಿ ಕರಡು ಮತದಾರರ ಪಟ್ಟಿ ಹಾಗೂ ಮತದಾರರ ಅಂತಿಮ ಪಟ್ಟಿ ಪ್ರಕಟಣೆಗೆ ಕ್ರಮವಹಿಸಲು ಪರಿಶೀಲನಾಧಿಕಾರಿಗಳನ್ನು ನೇಮಕ ಮಾಡಿ ಆದೇಶಿಸಿದ್ದಾರೆ.

ಒಕ್ಕೂಟದಿಂದ ಮತದಾರರ ಪಟ್ಟಿ ತಯಾರಿಸುವ ಸಲುವಾಗಿ ಸಂದ ಅಧ್ಯಕ್ಷ, ಉಪಾಧ್ಯಕ್ಷ, ನಿರ್ದೇಶಕರನ್ನು ಆಡಳಿತ ಮಂಡಳಿ ಸಭೆಯಲ್ಲಿ ಆಯ್ಕೆ ಮಾಡಬೇಕು. ಇಲ್ಲಿ ಆಯ್ಕೆ ಮಾಡಿರುವ ಡೆಲಿಗೇಟ್​ ವಿವರಗಳನ್ನು ಸೂಕ್ತ ದಾಖಲಾತಿಗಳೊಂದಿಗೆ ಮತದಾರರ ಪಟ್ಟಿ ಪರಿಶೀಲನಾಧಿಕಾರಿಯಾದ ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಉಪನಿರ್ದೇಶಕರಿಗೆ ಕಳುಹಿಸಿಕೊಡಬೇಕು, ಅವರಿಂದ ಪರಿಶೀಲಿಸಿಕೊಂಡು ಸಹಿ ಸಮೇತ ಡೆಲಿಗೇಟ್​ (ಪ್ರತಿನಿಧಿ) ದಾಖಲಾತಿಯನ್ನು ಏ.15ರಿಂದ ಏ.22ರೊಳಗೆ ಕಳುಹಿಸಿಕೊಡಲು ಸಂಘಗಳಿಗೆ ಸೂಚಿಸಲಾಗಿದೆ.

ಸಂದ ಮುಖ್ಯ ಕಾರ್ಯನಿರ್ವಹಣಾಧಿಕಾರಿಯು ಖುದ್ದು ಹಾಜರಾಗಿ ಸಲ್ಲಿಸದಿದ್ದಲ್ಲಿ ಅಂತಹ ಸದಸ್ಯ ಸಂಗಳು ಚುನಾವಣೆಯಲ್ಲಿ ಭಾಗವಹಿಸಲು ಅನರ್ಹಗೊಳ್ಳುತ್ತವೆ. ಅಲ್ಲದೇ ಸಂಗಳಿಗೆ ಒಮ್ಮೆ ಡೆಲಿಗೇಟ್​ ಹಂಚಿಕೆ ಮಾಡಿದ ನಂತರ ಮತ್ತೊಂದು ಪ್ರತಿ ಪೂರೈಸಲು ಅವಕಾಶವಿರುವುದಿಲ್ಲ. ಸೂಚಿಸಿರುವ ದಿನಾಂಕದೊಳಗೆ ಒಕ್ಕೂಟಕ್ಕೆ ಸಲ್ಲಿಸುವುದು ತಪ್ಪಿದಲ್ಲಿ ಡೆಲಿಗೇಟ್​ ನಿಯೋಜಿಸಿರುವುದಿಲ್ಲ ಎಂದು ಪರಿಗಣಿಸಿ ಮುಂದಿನ ಚುನಾವಣಾ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

* ಪ್ರಭಾವಿಗಳ ತಲೆ ನೋವು

ಡೆಲಿಗೇಟ್​ ಆಯ್ಕೆ ಮಾಡಲು ಒಕ್ಕೂಟದಿಂದ ಸಂಗಳಿಗೆ ಸುತ್ತೋಲೆ ಹೊರಡಿಸಲಾಗಿದೆ. ಆದರೆ, ಸಂಗಳ ಮಟ್ಟದಲ್ಲಿ ಡೆಲಿಗೇಟ್​ ಆಗಿ ಯಾರನ್ನು ಆಯ್ಕೆ ಮಾಡಬೇಕು ಎಂಬುದು ತೀವ್ರ ಗೊಂದಲಗಳಿಗೆ ಕಾರಣವಾಗಿವೆ. ಕೆಲ ಸಂಗಳಲ್ಲಿ ರಾಜಕೀಯ ಪ್ರಭಾವಿಗಳು, ಒಕ್ಕೂಟದ ಮಾಜಿ ನಿರ್ದೇಶಕರೂ ಇದ್ದಾರೆ. ಅವರಲ್ಲಿ ಕೆಲವರು ಚುನಾವಣೆಗೆ ನಿಲ್ಲಲು ಸಿದ್ಧತೆ ಕೈಗೊಂಡಿದ್ದು, ಡೆಲಿಗೇಟ್​ ಪಡೆದುಕೊಳ್ಳಲು ತೀವ್ರ ಕಸರತ್ತು ನಡೆಸುತ್ತಿದ್ದಾರೆ. ಇದು ಕೆಲ ಸಂಗಳ ನಿರ್ದೇಶಕರಿಗೆ ತಲೆನೋವಾಗಿ ಪರಿಣಮಿಸಿದೆ.

* ಮತ ಕ್ಷೇತ್ರಗಳ ವ್ಯಾಪ್ತಿ

ಕೋಲಾರ&ಚಿಕ್ಕಬಳ್ಳಾಪುರ ಹಾಲು ಒಕ್ಕೂಟವು ವಿಭಜನೆಯಾದ ನಂತರ ಆಡಳಿತ ಮಂಡಳಿಯ ನಿರ್ದೇಶಕರ ಸ್ಥಾನ ಹೆಚ್ಚಿಸಿಕೊಳ್ಳಬೇಕಿತ್ತು. ಅದರಂತೆ ಸಹಕಾರ ಇಲಾಖೆಯಿಂದ ಒಕ್ಕೂಟಕ್ಕೆ ಪತ್ರ ವ್ಯವಹಾರವಾಗಿದ್ದು, ಕೆಲ ಮಂದಿ ಕ್ಷೇತ್ರ ವಿಂಗಡಣೆ ಕುರಿತು ಕೋರ್ಟ್​ ಮೊರೆ ಹೋಗಿದ್ದರು. ಇದು ರಾಜಕೀಯವಾಗಿ ಬಹಳಷ್ಟು ಸದ್ದು ಮಾಡಿತ್ತು. ಜತೆಗೆ ಸ್ವ ಪಕ್ಷದ ಶಾಸಕರಿಬ್ಬರ ನಡುವೆ ಆರೋಪ ಪ್ರತ್ಯಾರೋಪಕ್ಕೂ ಕಾರಣವಾಗಿತ್ತು. ಒಟ್ಟು 13 ಮತ ಕ್ಷೇತ್ರಗಳನ್ನು ವಿಂಗಡಣೆ ಮಾಡಿದ್ದು, ಕೋಲಾರ ತಾಲೂಕು ವ್ಯಾಪ್ತಿಯಲ್ಲಿ ಈಶಾನ್ಯ, ನೈಋತ್ಯ, ವೇಮಗಲ್​ ಹಾಗೂ ಉತ್ತರ&ದಣ (ಮಹಿಳೆ). ಮುಳಬಾಗಿಲು ತಾಲೂಕು ವ್ಯಾಪ್ತಿಯಲ್ಲಿ ಪೂರ್ವ, ಪಶ್ಚಿಮ, ಮಾಲೂರು ವ್ಯಾಪ್ತಿಯಲ್ಲಿ ಮಾಲೂರು ಕಸಬಾ, ಟೇಕಲ್​, ಶ್ರೀನಿವಾಸಪುರ ವ್ಯಾಪ್ತಿಯಲ್ಲಿ ಅಡ್ಡಗಲ್​, ಯಲ್ದೂರು, ಬಂಗಾರಪೇಟೆ, ಕೆಜಿಎ್​ ತಾಲೂಕಿಗೆ ನಿರ್ದೇಶಕರ ಕ್ಷೇತ್ರ ನಿಗದಿಪಡಿಸಲಾಗಿದೆ.

* ಡೆಲಿಗೇಟ್​ ನೀಡುವಂತೆ ದುಂಬಾಲು

ಹಲವು ಸಂಗಳ ಚುನಾವಣೆ ಇತ್ತೀಚೆಗೆ ನಡೆದಿದ್ದು, ಕಾಂಗ್ರೆಸ್​, ಜೆಡಿಎಸ್​, ಬಿಜೆಪಿ ಬೆಂಬಲಿತರು ಎಂದು ಚುನಾವಣೆಗೆ ಸ್ಪರ್ಧಿಸಿ ಜಯಗಳಿಸಿರುವವರು ಇದ್ದಾರೆ. ಮೂರು ಪಕ್ಷಗಳ ಬೆಂಬಲಿಗರು ಅಧ್ಯಕ್ಷರಾಗಿ, ನಿರ್ದೇಶಕರಾಗಿದ್ದಾರೆ. ಕೆಲ ಸಂಗಳಲ್ಲಿ ರಾಜಕೀಯೇತರವಾಗಿ ಅವಿರೋಧವಾಗಿ ಆಯ್ಕೆಯಾಗಿರುವವರು ಇದ್ದಾರೆ.

ಅಕಾಂಗಳು ಚುನಾವಣೆಗೆ ನಿಲ್ಲಲು ಬಯಸಿರುವ ಕ್ಷೇತ್ರಗಳ ವ್ಯಾಪ್ತಿಯಲ್ಲಿನ ಸಂಗಳ ಪ್ರತಿನಿಧಿಗಳನ್ನು, ಆಯಾ ಗ್ರಾಮದ ಹಿರಿಯರನ್ನು ಸಂಪರ್ಕಿಸಿ ಶತಾಯಗಾತಯ ನಮಗೆ ಮತ ಹಾಕುವ ವ್ಯಕ್ತಿಗೆ ಡೆಲಿಗೇಟ್​ ಪಡೆದುಕೊಳ್ಳಲು ದುಂಬಾಲು ಬೀಳುತ್ತಿದ್ದಾರೆ.

ಕೋಟ್​...

ಚುನಾವಣಾ ಪ್ರಕ್ರಿಯೆ ಕೈಗೊಳ್ಳಲಾಗಿದೆ. ಸಂಗಳಿಂದ ಡೆಲಿಗೇಟ್​ ಕಳುಹಿಕೊಡಲು ಸುತ್ತೋಲೆ ನೀಡಲಾಗಿದ್ದು, ಮತದಾರರ ಪಟ್ಟಿ ತಯಾರಿಸಲು ಕ್ರಮವಹಿಸಲಾಗಿದೆ.

- ಗೋಪಾಲಮೂರ್ತಿ, ವ್ಯವಸ್ಥಾಪಕ ನಿರ್ದೇಶಕ, ಕೋಮುಲ್​