ನ್ಯೂಸ್

ಕೋಮುಲ್ ಚುನಾವಣೆ ಗ್ರಾಮೀಣ ಪ್ರದೇಶಗಳಲ್ಲಿ ಗುಂಪುಗಾರಿಕೆ, ಪ್ರಚೋದನೆ, ಗಲಭೆಗಳಿಗೆ ಉತ್ತೇಜನ/ಜನಸಾಮಾನ್ಯರಲ್ಲಿ ಚರ್ಚ್ಚೆಗೆ ಗ್ರಾಸ/ ಕೋಟಿ ಕುಳಗಳು ರೈತರಿಗೆ ಪ್ರೋತ್ಸಾಹಧನ ಕೊಡಿಸುವವರೆ!

ವಿಜಯವಾಣಿ ಸುದ್ದಿಜಾಲ ಕೋಲಾರ

ಎನ್. ಮುನಿವೆಂಟೇಗೌಡ

ಕೋಮುಲ್ ನಿರ್ದೇಶಕರ ಸ್ಥಾನಗಳಿಗೆ ನಡೆದ ಚುನಾವಣೆ ಗ್ರಾಮೀಣ ಪ್ರದೇಶಗಳಲ್ಲಿ ಗುಂಪುಗಾರಿಕೆ, ಪ್ರಚೋದನೆ ಮತ್ತು ಗಲಭೆಗಳಿಗೆ ಉತ್ತೇಜಿಸುವಂತಾಗಿಸಿದೆ ಎಂಬ ಆರೋಪಗಳು ಜನಸಾಮಾನ್ಯರಲ್ಲಿ ಚರ್ಚ್ಚೆಗೆ ಗ್ರಾಸವಾಗಿದೆ,

ಗ್ರಾಮಗಳಲ್ಲಿ ಹಾಲು ಉತ್ಪಾದಕರರ ಸಹಕಾರ ಸಂಘಗಳಿಗೆ ಚುನಾವಣೆಗಳು ನಡೆಸದೆ ಒಮ್ಮತದಿಂದ ಅಧ್ಯಕ್ಷರನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ಗ್ರಾಮಗಳಲ್ಲಿ ಶಾಂತಿ ನೆಲೆಸಿತ್ತು. ಆದರೆ ಕೋಮುಲ್ ಚುನಾವಣೆಗೆ ಹಣವಂತರು ಮತ್ತು ರಾಜಕಾರಣಿಗಳ ಪ್ರವೇಶದಿಂದ ಒಂದೊAದು ಮತ ೫ ರಿಂದ ೬ ಲಕ್ಷಕ್ಕೆ ಬಿಕರಿಯಾದ ಕಾರಣ ಹಾಲು ಉತ್ಪಾದಕರರ ಸಹಕಾರ ಸಂಘಗಳಿಗೆ ಅಧ್ಯಕ್ಷ ಸ್ಥಾನ ಲಾಭದಾಯಕವಾದದ್ದು ಎಂದು ತೋರಿಸಿಕೊಟ್ಟಿದ್ದರಿಂದ ಮುಂದಿನ ದಿನಗಳಲ್ಲಿ ಗ್ರಾಮಗಳಲ್ಲಿ ಡೈರಿಗಳಿಗೆ ನಿರ್ಧೆಶಕರು ಮತ್ತು ಅಧ್ಯಕ್ಷರಾಗಲು ಕಸರತ್ತುಗಳು ಹೆಚ್ಚಾಗಿ ಇದರಿಂದ ಗ್ರಾಮಗಳಲ್ಲಿ ರಾಜಕೀಯ, ಧ್ವೇಷ, ಅಸೂಯೆ ಮತ್ತು ಗಲಭೆಗಳು ಹೆಚ್ಚಾಗಲು ಕಾರಣವಾಗುತ್ತವೆ ಎಂಬ ಆರೋಪಗಳು ಕೇಳಿಬರುತ್ತಿವೆ.

ಹುಲ್ಲುಗಾವಲಿನಂತೆ ಲಾಭದಾಯಕವಾಗಿರುವ ಕೋಮುಲ್ ನಲ್ಲಿ ಮೇಯಲು ರಾಜಕಾರಣಿಗಳು ದುಬಾರಿ ಹಣ ಖರ್ಚು ಮಾಡಿ ಕೋಮುಲ್ ಚುನಾವಣೆಗೆ ಸ್ಪರ್ಧಿಸಿ ಗೆದ್ದಿದ್ದಾರೆ, ಚುನಾವಣೆಯಲ್ಲಿ ದುಬಾರಿ ಹಣ ಖರ್ಚು ಮಾಡಿರುವ ಕಾರಣ ಹೇಗಾದರೂ ಮಾಡಿ ಚುನಾವಣೆಗೆ ಹೂಡಿರುವ ಬಂಡವಾಳಕ್ಕೆ ಲಾಭ ಗಳಿಸಬೇಕೆಂಬ ಉದ್ದೇಶದಿಂದ ಕೋಮುಲ್ ನಲ್ಲಿ ಭ್ರಷ್ಟಾಚಾರ ಇನ್ನಷ್ಟು ಹೆಚ್ಚಾಗು ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ ಎಂಬ ಬಲವಾದ ಆರೋಪಗಳು ಸಾರ್ವಜನಿಕರಲ್ಲಿ ಚರ್ಚ್ಚಯಾಗತೋಡಗಿದೆ.

ರೈತರನ್ನು ದಿವಾಳಿಗಳನ್ನಾಗಿಸಿ ಲೂಟಿಗಿಳಿಯುತ್ತಾರೆ ರಾಜಕಾರಣಿಗಳು:

ಈಗಾಗಲೇ ರಾಜಕೀಯದಲ್ಲಿ ಭ್ರಷ್ಟಾಚಾರದ ಎಲ್ಲಾ ಪಟುಗಳನ್ನು ಕಲಿತಿರುವ ಬಹುತೇಕ ವ್ಯಕ್ತಿಗಳೇ ಕೋಮುಲ್ ಆಡಳಿತ ಮಂಡಳಿಗೆ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ ಎಂಬ ಆರೋಪ ಈಗಾಗಲೆ ಚರ್ಚೆಯಲ್ಲಿದ್ದು. ಹಗಲಿರುಳು ಬಿಸಿಲು ಮಳೆಯನ್ನೂ ಲೆಕ್ಕಿಸದೆ ದುಡಿದು ಹಾಲು ಉತ್ಪಾದಿಸಿ ಡೈರಿಗೆ ಪೂರೈಸುವ ರೈತರ ಹಾಲಿನಲ್ಲಿ ಕೋಮುಲ್ ಲಾಭದಾಯಕವಾಗಿದೆ, ಈ ಭ್ರಷ್ಟ ರಾಜಕೀಯದ ನಿರ್ದೇಶಕರು ತಮ್ಮ ಸ್ವ ಲಾಭಕ್ಕಾಗಿ ರೈತರ ಶ್ರಮದ ಹಣವನ್ನು ಲೂಟಿ ಮಾಡಿ ಕೊನೆಗೆ ಕೋಮುಲ್ ಅನ್ನೂ ಸಹ ಡಿಸಿಸಿ ಬ್ಯಾಂಕ್ ನಂತೆ ನಷ್ಟದ ಅಂಚಿಗೆ ತಳ್ಳಿ ರೈತರ ಬೆವರ ಹನಿಯ ಶ್ರಮಕ್ಕೆ ಕಲ್ಲೆಸೆಯುವುದರಲ್ಲಿ ಯಾವುದೇ ಅನುಮಾನಗಳಿಲ್ಲ ಎಂದು ನಿಷ್ಠಾವಂತ ಹಾಲಿ ಉತ್ಪಾದಕರ ಮಾತಾಗಿದೆ.

ಕೋಟಿ ಕುಳಗಳು ರೈತರಿಗೆ ಪ್ರೋತ್ಸಾಹಧನ ಕೊಡಿಸುವವರೇ:

ಜಿಲ್ಲೆಯ ಎಲ್ಲಾ ಶಾಸಕರುಗಳು ತಮ್ಮ ಎಲ್ಲಾ ವಿದ್ಯೆಗಳನ್ನು ಪ್ರಯೋಗಿಸಿ ಕೋಮುಲ್ ಚುನಾವಣೆ ನಡೆಸುವಲ್ಲಿ ಯಶಸ್ವಿಯಾದರು, ಚುನಾವಣೆ ಸಂದರ್ಭದಲ್ಲಿ ಖುದ್ದು ಶಾಸಕರು,ಸಂಸದರು ಹಾಲು ಉತ್ಪಾದಕರರ ಪರ ನಾವು ಸದಾ ನಿಲ್ಲುತ್ತೇವೆ ದಯವಿಟ್ಟು ನಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಡಿ ಎಂದು ಹಾಲು ಉತ್ಪಾದಕರರಿಗೆ ಆಶ್ವಾಸನೆಗಳು, ಭರವಸೆಗಳು ಕೊಟ್ಟಿದ್ದಾರೆ. ಆದರೆ ಇದೀಗ ಚುನಾವಣೆ ನಡೆದಿದ್ದು ತಮ್ಮ ತಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳುವಲ್ಲಿಯೂ ಯಶಸ್ವಿಯಾಗಿದ್ದಾರೆ. ಆದರೆ ಕಳೆದ ೧೦ ತಿಂಗಳುಗಳಿAದ ರೈತರಿಗೆ ಸರ್ಕಾರದಿಂದ ಹಾಲಿನ ಪ್ರೋತ್ಸಾಹ ಧನ ಸಿಗುತ್ತಿಲ್ಲ, ಈಗ ಜಿಲ್ಲೆಯ ಸಂಸದರು, ಶಾಸಕರು ಹಾಗು ನೂತನವಾಗಿ ಆಯ್ಕೆಯಾಗಿರುವ ನಿರ್ದೇಶಕರುಗಳು ಸರ್ಕಾರದ ಮೇಲೆ ಒತ್ತಡ ಹಾಕಿ ಸರ್ಕಾರದಿಂದ ಹಾಲು ಉತ್ಪಾದಕರರಿಗೆ ಬಾಕಿಯಿರುವ ಪ್ರೋತ್ಸಾಹಧನ ಕೊಡಿಸುತ್ತಾರೆಯೇ ಎಂದು ಹಾಲು ಉತ್ಪಾದಕರರು ಕಾಯುತ್ತಿದ್ದಾರೆ.

ಚಿತ್ರ ೨೬ ಕೆ.ಎಲ್.ಆರ್. ೦೧ ಕೋಮುಲ್ ಕಛೇರಿ ಭಾವಚಿತ್ರ.