filter: 115; fileterIntensity: 0.8; filterMask: 1; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (0.5133332, 0.4733573);sceneMode: 0;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 39; 
ನ್ಯೂಸ್

ಕೋಟೆನಾಡು ಚಿತ್ರದುರ್ಗದಲ್ಲಿ ಟಿವಿಎಸ್‌ನದ್ದೇ ಹವಾ

ಚಿತ್ರದುರ್ಗ: ಚಿತ್ರದುರ್ಗದ ಆರ್‌ಟಿಒ ಕಚೇರಿ ಬಳಿ 2022ರಲ್ಲಿ ಆರಂಭವಾದ ಶ್ರೀ ಅಹೋಬಲ ಟಿವಿಎಸ್ ಶೋ ರೂಂ, ಟಿವಿಎಸ್ ಕಂಪನಿಯ ದ್ವಿಚಕ್ರ ವಾಹನಗಳ ಮಾರಾಟದಲ್ಲಿ ಕೋಟೆನಾಡು ಚಿತ್ರದುರ್ಗ ಜಿಲ್ಲೆಯಲ್ಲಿ ಹೊಸ ಹವಾ ಸೃಷ್ಟಿಸಿದೆ.

ಮಧ್ಯಕರ್ನಾಟಕದ ಜಿಲ್ಲೆಗಳ ಪೈಕಿ ಚಿತ್ರದುರ್ಗದಲ್ಲಿ ನಂ.1 ಸ್ಥಾನದತ್ತ ದಾಪುಗಾಲಿಡುತ್ತಿರುವ ಅಹೋಬಲ ಈಗಾಗಲೇ ಕರ್ನಾಟಕ ವಲಯ - 2ರಲ್ಲಿ ಬೆಸ್ಟ್ ಶೋರೂಂ, ಅತ್ಯುತ್ತಮ ಸರ್ವೀಸ್ ಅವಾರ್ಡ್‌ಗೂ ಭಾಜನವಾಗಿದೆ.

ಕಳೆದ ವರ್ಷ ಹಿರಿಯೂರಿನಲ್ಲಿ ಆರಂಭವಾದ ಹೊಸ ಶಾಖೆ ಕೂಡ ವಹಿವಾಟಿಗೆ ಮನೆ ಮಾತಾಗಿದೆ. ತಾಲೂಕು ಕೇಂದ್ರಗಳಲ್ಲಿರುವ ಕೌಂಟರ್‌ಗಳು ಕಂಪನಿ ವಾಹನಗಳ ಮಾರಾಟ- ಸರ್ವೀಸ್‌ನಲ್ಲಿ ಗ್ರಾಹಕರ ವಿಶ್ವಾಸಕ್ಕೆ ಪಾತ್ರವಾಗಿವೆ ಎನ್ನುತ್ತಾರೆ ಶೋ ರೂಂ ಮಾಲೀಕ ಪಿ.ವಿ.ಅರುಣ್‌ಕುಮಾರ್.

ಮಾಲೀಕರು-ಸಿಬ್ಬಂದಿಯ ಗ್ರಾಹಕ ಸ್ನೇಹಿ ನಡವಳಿಕೆ, ನಗುಮೊಗದ ಸೇವೆಯ ಕಾರಣಕ್ಕೆ ಚಿತ್ರದುರ್ಗ ಶೋರೂಂ ಖರೀದಿದಾರರ ನೆಚ್ಚಿನ ತಾಣವಾಗಿದೆ. ಅಕ್ಕ-ಪಕ್ಕದ ಜಿಲ್ಲೆಗಳ ಗ್ರಾಹಕರನ್ನು ಕೂಡ ಸೆಳೆಯುತ್ತಿದೆ.

ಮೊಪೆಡ್‌ನಲ್ಲಿ ಟಿವಿಎಸ್-ಎಕ್ಸ್ ಎಲ್, ಬೈಕ್‌ಗಳಲ್ಲಿ ರೆಡಿಯಾನ್, ರೈಡರ್, ಸ್ಟಾರ್‌ಸಿಟಿ, ಸ್ಪೋರ್ಟ್ಸ್, ಅಪಾಚಿ ಸೀರಿಸ್, ಹೈ ಎಂಡೆಡ್ ಬೈಕ್‌ಅಪಾಚಿ-ಆರ್‌ಆರ್ 310 ಸಿಸಿ, ರೊನಿನ್ ಬೈಕ್‌ಗಳು, ಎನ್ಟಾರ್ಕ್ ಹಾಗೂ ಎಲೆಕ್ಟ್ರಿಕ್ ಸ್ಕೂಟರ್ ಐಕ್ಯೂಬ್‌ಗಳು ಗ್ರಾಹಕರನ್ನು ಆಕರ್ಷಿಸುತ್ತಿವೆ. ರೆಡಿಯಾನ್ ರೈತರ ಸಾರಥಿ ಎನಿಸಿದ್ದರೆ, ರೈಡರ್‌ಎಕ್ಸಿಕ್ಯೂಟಿವ್ಸ್ ಕಾಲೇಜು ವಿದ್ಯಾರ್ಥಿಗಳ ಮನ ಗೆದ್ದಿದೆ.

ಶ್ರೀ ಅಹೋಬಲ ಸಿಮೆಂಟ್ಸ್ ಆ್ಯಂಡ್ ಸ್ಟೀಲ್ಸ್ ವಹಿವಾಟಿನಲ್ಲಿ ಇವರು ಮಾಡಿದ ಸಾಧನೆ ಗಮನಿಸಿದ ಟಿವಿಎಸ್ ಕಂಪನಿ ಇವರಿಗೆ ಡೀಲರ್‌ಶಿಪ್ ಕೊಟ್ಟಿದೆ. ಗುಣಮಟ್ಟದ ಸೇವೆ ಮೂಲಕ ಈ ವಹಿವಾಟಿನಲ್ಲೂ ಅರುಣ್ ಕುಮಾರ್ ನಂ.1 ಸ್ಥಾನಕ್ಕೆ ಲಗ್ಗೆ ಇಡುತ್ತಿದ್ದಾರೆ.

ವಾಹನಗಳ ಖರೀದಿಗೆ ಸುಲಭ ಕಂತುಗಳ ಸಾಲ ಸೌಲಭ್ಯವಿದೆ. ವರ್ಷವಿಡೀ ಹಳೆಯ ವಾಹನಗಳನ್ನು ಬದಲಿಸುವ ವ್ಯವಸ್ಥೆ ಇದೆ. ಟೆಸ್ಟ್‌ಡ್ರೈವ್, ಉತ್ತಮ ಸರ್ವಿಸ್ ಲಭ್ಯವಿದೆ. ವಾಹನಗಳಲ್ಲಿ ದೋಷ ಉಂಟಾದರೆ ಗ್ರಾಹಕರು ಬೆಳಗ್ಗೆ 9 ರಿಂದ ಸಂಜೆ 6ರೊಳಗೆ 855080 1155(ಚಿತ್ರದುರ್ಗ)ಕ್ಕೆ ಕರೆ ಮಾಡಿದರೆ ಸ್ಥಳಕ್ಕೆ ಮೆಕಾನಿಕ್‌ಗಳನ್ನು ಕಳುಹಿಸುತ್ತಾರೆ. ಸೇಲ್ಸ್ ಮಾಹಿತಿಗೆ 8550801144ನ್ನು ಸಂಪರ್ಕಿಸಬಹುದು. ---------------

* ನ್ಯೂ ಜನರೇಷನ್ ಸ್ಕೂಟಿ * ಬಾಕ್ಸ್....

ನ್ಯೂಜನರೇಷನ್ ಸ್ಕೂಟಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಜ್ಯೂಪಿಟರ್-110 ಮಾರಾಟದಲ್ಲಿ ಮುಂಚೂಣಿಯತ್ತ ಸಾಗಿದೆ. ಎಲ್‌ಇಡಿ ದೀಪ, ಮೊಬೈಲ್ ನೋಟಿಫೀಕೇಷನ್, ಚಾರ್ಚಿಂಗ್ ಪಾಯಿಂಟ್, ಸ್ಮಾರ್ಟ್ ಕನೆಕ್ಟೆವಿಟಿ ಸೌಕರ್ಯ, ವಿಶಾಲ ಡಿಕ್ಕಿ ಇದಕ್ಕಿದೆ.

ಡಾನ್‌ಬ್ಲೂ, ಸ್ಟಾರ್‌ಲೈಟ್ ಬ್ಲೂ, ಕಾಪರ್ ಬ್ರೌನ್ಸ್, ವೈಟ್, ಗ್ರೇ, ರೆಡ್ ಕಲರ್‌ಗಳಲ್ಲಿ ಲಭ್ಯವಿರುವ ಈ ವಾಹನಗಳು ನಮ್ಮ ಶೋರೂಂನಲ್ಲಿ ಮಾಸಿಕ 200ವರೆಗೆ ಮಾರಟವಾಗುತ್ತವೆ ಎಂದು ಅರುಣ್‌ಕುಮಾರ್ ಖುಷಿ ಹಂಚಿಕೊಂಡರು.

70,000- 3.50 ಲಕ್ಷ ರೂ.ವರೆಗೆ ವಿವಿಧ ದರಗಳಲ್ಲಿ ವಾಹನಗಳನ್ನು ಖರೀದಿಸಬಹುದು. ಎಲೆಕ್ಟ್ರಿಕ್ ವೆಹಿಕಲ್ ಐಕ್ಯೂಬ್ 3 ಗಂಟೆ ಚಾರ್ಜ್ ಮಾಡಿದರೆ 100 ಕಿ.ಮಿ.ಓಡಿಸಬಹುದು. ಬ್ಯಾಟರಿಗೆ 3 ವರ್ಷ ವಾರಂಟಿ ಇದೆ.

----

ಬಾಕ್ಸ್.

ವಿಜಯವಾಣಿ ವಿಜಯೋತ್ಸವ

ವಿಜಯವಾಣಿ ವಿಜಯೋತ್ಸವದಲ್ಲಿ‘ಅಹೋಬಲ’ಪಾಲ್ಗೊಂಡಿದೆ. ಈ ಶೋರೂಂನಲ್ಲಿ ವಾಹನ ಖರೀದಿಸುವ ಗ್ರಾಹಕರು ವಿಜಯೋತ್ಸವದ ಲಕ್ಕಿಡಿಪ್‌ನಲ್ಲಿ ಆಕರ್ಷಕ ಬಹುಮಾನಗಳನ್ನು ಪಡೆಯುವ ಅವಕಾಶ ಹೇರಳವಾಗಿದೆ.

--

ಕೋಟ್.

ಗ್ರಾಹಕರ ವಿಶ್ವಾಸ ವೃದ್ಧಿ

ಚಿತ್ರದುರ್ಗದ ಅಹೋಬಲ ಶೋರೂಂ ಹಾಗೂ ಟಿವಿಎಸ್ ಕಂಪನಿಯ ದ್ವಿಚಕ್ರ ವಾಹನಗಳತ್ತ ಗ್ರಾಹಕರ ವಿಶ್ವಾಸ ವೃದ್ಧಿಯಾಗುತ್ತಿರುವುದನ್ನು ಗಮನಿಸಿದರೆ ಶೀಘ್ರದಲ್ಲಿ ನಾವು ನಂ-1ಕ್ಕೆ ಸ್ಥಾನಕ್ಕೆ ಏರುವ ವಿಶ್ವಾಸವಿದೆ. ಕಂಪನಿಯ ವಾಹನಗಳನ್ನು ಅಧಿಕೃತ ಶೋರೂಂಗಳಲ್ಲಿ ಖರೀದಿಸಿದರೆ ಗ್ರಾಹಕರಿಗೆ ಹೆಚ್ಚು ಅನುಕೂಲವಾಗಲಿದೆ.

ಪಿ.ವಿ.ಅರುಣ್‌ಕುಮಾರ್,

ಶ್ರೀ ಅಹೋಬಲ ಟಿವಿಎಸ್ ಶೋ ರೂಂ. ಮಾಲೀಕ (8550801144)

----

*

ಟಿವಿಎಸ್ ಕಂಪನಿ ಉತ್ಪನ್ನಗಳು ಭಾರತ ನಿರ್ಮಿತವಾಗಿವೆ. ಅಹೋಬಲ ಶೋರೂಂ ಸ್ಥಾಪನೆ ಬಳಿಕ ಜಿಲ್ಲೆಯಲ್ಲಿ ಟಿವಿಎಸ್ ದ್ವಿಚಕ್ರ ವಾಹನಗಳ ಮಾರಾಟ ಹೆಚ್ಚಾಗಿದೆ. ಸೇಲ್ಸ್ ಮತ್ತು ಸರ್ವಿಸ್‌ಗೆ ಉತ್ತಮ ರೆಸ್ಪಾನ್ಸ್ ಇದೆ.

ಜಿ.ಎ.ದೀಪಾನಂದ್, ರಾಜ್ಯ ಹೋಟೆಲ್ ಮಾಲೀಕರ ಸಂಘದ ಉಪಾಧ್ಯಕ್ಷ, ಚಿತ್ರದುರ್ಗ.

ಕೋಟ್

ಒಂದೂಕಾಲು ವರ್ಷದ ಹಿಂದೆ ಈ ಶೋರೂಂನಲ್ಲಿ ರೆಡಿಯಾನ್ ಬೈಕ್ ಖರೀದಿಸಿದ್ದೇನೆ. ಉತ್ತಮ ಗುಣಮಟ್ಟದ್ದಿದೆ ಹಾಗೂ ಹೆಚ್ಚು ಮೈಲೇಜ್ ಕೊಡುತ್ತದೆ. ಸರ್ವೀಸ್ ಬಗ್ಗೆ ದೂಸ್ರಾ ಮಾತೇ ಇಲ್ಲ.

ಹಂಪಯ್ಯನಮಾಳಿಗೆ ಧನಂಜಯ, ಜಿಲ್ಲಾಧ್ಯಕ್ಷ ರೈತ ಸಂಘ,ಚಿತ್ರದುರ್ಗ.

----