ನ್ಯೂಸ್

ಕೋಟ ಲಕ್ಷಾಂತರ ರೂ. ನಗದು ಕಳವು

ಕೋಟ : ಸಾಲಿಗ್ರಾಮ ಚಿತ್ರಪಾಡಿ ಗ್ರಾಮದ ಮಹಾಬಲ ಕುಲಾಲ್ ಗೆ ಸೇರಿದ ಕೋಟದ ಗಿಳಿಯಾರು ಗ್ರಾಮದ ರಾಷ್ಟ್ರೀಯ ಹೆದ್ದಾರಿ ಸನಿಹದಲ್ಲಿರುವ ಬಟ್ಟೆ ಅಂಗಡಿಯೊಂದಕ್ಕೆ ಮಂಗಳವಾರ ರಾತ್ರಿ ನುಗ್ಗಿದ ಕಳ್ಳರು ಲಕ್ಷಾಂತರ ರೂಪಾಯಿ ನಗದು ಕಳವು ಮಾಡಿದ ಘಟನೆ ನಡೆದಿದೆ. ಅಂಗಡಿಯಲ್ಲಿ ವ್ಯವಹಾರ ನಡೆಸಿದ ಹಣವನ್ನು ಗೋದ್ರೆಜ್ ನಲ್ಲಿ ಇಟ್ಟು ತೆರಳಿದ್ದರು.
ಎದುರುಗಡೆಯ ಬಾಗಿಲು ಮುರಿದು ಒಳ ನುಗ್ಗಿದ ಕಳ್ಳರು ಗೋದ್ರೇಜ್ ಮುರಿದು ಅದರಲ್ಲಿದ್ದ ₹೧ಲಕ್ಷದ ೪೫ಸಾವಿರವನ್ನು ಕದ್ದೊಯ್ದಿದ್ದಾರೆ. ಈ ಬಗ್ಗೆ ಅಂಗಡಿಯ ಮಾಲಕ ಮಹಾಬಲ ಕುಲಾಲ ಕೋಟ ಠಾಣೆಯಲ್ಲಿ ದೂರು ದಾಖಲಿಸಿದ್ದು ಕೋಟ ಆರಕ್ಷಕ ಠಾಣಾಧಿಕಾರಿ ಸಂತೋಷ್ ಬಿ.ಪಿ ಹಾಗೂ ಪುಷ್ಭರಾಮ್ ನೇತ್ರತ್ವದ ತನಿಖೆ ತೀವ್ರಗೊಂಡಿದೆ.