ವಿಜಯವಾಣಿ ಸುದ್ದಿಜಾಲ ಕೋಲಾರ
ಎನ್.ಮುನಿವೆಂಕಟೇಗೌಡ
ಕೋಮುಲ್ ಆಡಳಿತ ಮಂಡಳಿಯ ೧೨ ನಿರ್ದೇಶಕರ ಸ್ಥಾನಗಳಿಗೆ ಜೂ.೨೫ ರಂದು ಚುನಾವಣೆ ನಡೆಯಲಿದ್ದು, ೮೫೫ ಮತದಾರರು ಮತ ಚಲಾವಣೆ ಮಾಡಲಿದ್ದಾರೆ.
ಕೋಮುಲ್ ಆಡಳಿತ ಮಂಡಳಿಯ ಒಟ್ಟು ೧೩ ಸ್ಥಾನಗಳಿಗೆ ಚುನಾವಣೆ ನಡೆಯಬೇಕಾಗಿದ್ದು, ಮಾಲೂರು ತಾಲ್ಲೂಕಿನ ಟೇಕಲ್ ಕ್ಷೇತ್ರದಿಂದ ಪ್ರಸನ್ನಾಂಭ ಎಂಬುವವರ ನಾಮಪತ್ರ ಪರಿಶೀಲನಾ ವೇಳೆ ತಿರಸ್ಕೃತಗೊಂಡ ಕಾರಣ ಮಾಲೂರು ಶಾಸಕ ಕೆ.ವೈ.ನಂಜೇಗೌಡ ರವರ ನಾಮಪತ್ರ ಅಂಗೀಕೃತಗೊAಡು ಅವಿರೋಧವಾಗಿ ಆಯ್ಕೆ ಆಗಿರುವ ಕಾರಣ ೧೨ ನಿರ್ದೇಶಕರ ಸ್ಥಾನಗಳಿಗೆ ಮಾತ್ರ ಚುನಾವನೆ ನಡೆಯಲಿದೆ.
ಚುನಾವಣೆಗೆ ಇನ್ನು ಕೇವಲ ಒಂದು ದಿನ ಮಾತ್ರ ಬಾಕಿ ಉಳಿದುಕೊಂಡಿದೆ. ಬುಧವಾರ ನಗರದ ಬಾಲಕಿಯರ ಜೂನಿಯರ್ ಕಾಲೇಜಿನಲ್ಲಿ ಮತದಾನ ನಡೆಯಲಿದೆ. ಅಂದು ಸಂಜೆ ಮತ ಎಣಿಕೆ ನಡೆಯಲಿದ್ದು, ಫಲಿತಾಂಶವು ಅಂದು ಸಂಜೆಯೇ ಹೊರಬೀಳಲಿದೆ.
ಮತದಾರರ ವಿವಿರ :
ಕೋಲಾರ : ಈಶಾನ್ಯ- ೭೩, ನೈರುತ್ಯ-೭೬, ವೇಮಗಲ್-೮೨,
ಮುಳಬಾಗಿಲು : ಪೂರ್ವ-೮೭, ಪಶ್ಚಿಮ-೭೩
ಮಾಲೂರು : ಕಸಬಾ-೬೨
ಶ್ರೀನಿವಾಸಪುರ : ಅಡ್ಡಗಲ್-೮೪, ಯಲ್ದೂರು-೮೪
ಬಂಗಾರಪೇಟೆ ೫೪
ಕೆಜಿಎಫ್. ೬೦
ಕೋಲಾರ ಜಿಲ್ಲಾ ಮಹಿಳಾ ಕ್ಷೇತ್ರ : ಉತ್ತರ ಕ್ಷೇತ್ರ-೬೪, ದಕ್ಷಿಣ ಕ್ಷೇತ್ರ-೫೬ ಮತದಾರರಿದ್ದಾರೆ.
ಎನ್‌ಡಿಎ ಮತ್ತು ಕಾಂಗ್ರೇಸ್‌ನಲ್ಲಿ ಬಂಡಾಯದ ಭೀತಿ :
ಕೋಲಾರ ಈಶಾನ್ಯ ಕ್ಷೇತ್ರ, ಮುಳಬಾಗಿಲಿನ ಪೂರ್ವ ಕ್ಷೇತ್ರ ಹಾಗೂ ಮಹಿಳಾ ಮೀಸಲು ಕ್ಷೇತ್ರಗಳಾದ ಪೂರ್ವ ಮತ್ತು ದಕ್ಷಿಣ ಕ್ಷೇತ್ರಗಳಲ್ಲಿ ಅಧಿಕೃತ ಅಭ್ಯರ್ಥಿಗಳಿಗೆ ಬಂಡಾಯದ ಭೀತಿ ಕಾಡತೊಡಗಿದೆ.
ಕೋಲಾರದ ಈಶಾನ್ಯ ಕ್ಷೇತ್ರದಿಂದ ಎನ್‌ಡಿಎ ಅಧಿಕೃತ ಅಭ್ಯರ್ಥಿಯಾಗಿ ಡಿವಿ ಹರೀಶ್ ಮತ್ತು ಕಾಂಗ್ರೇಸ್‌ನಿAದ ಎಂ.ಗೋಪಾಲ್‌ಗೌಡ ಅಧಿಕೃತ ಅಭ್ಯರ್ಥಿಗಳಾಗಿ ಸ್ಪರ್ಧೆ ಮಾಡಿದ್ದಾರೆ. ಇವರಿಗೆ ಬ್ಯಾಲಹಳ್ಳಿ ಎಂ.ಶAಕರೇಗೌಡ ಸ್ಪರ್ಧೆಯಿಂದ ಬಂಡಾಯದ ಭೀತಿ ಎದುರಾಗಿದೆ. ಬ್ಯಾಲಹಳ್ಳಿ ಎಂ.ಶAಕರೇಗೌಡನಿಗೆ ಎನ್.ಡಿ.ಎ.ದಿಂದ ಸ್ಪರ್ಧೆಗೆ ನಿರಾಕರಿಸಿದ ಕಾರಣ ಬಂಡಾಯವಾಗಿ ಸ್ಪರ್ಧೆ ಮಾಡಿದ್ದಾರೆ. ವಾಪಸ್ ತೆಗಿಸಲು ಹಾಗೂ ಕಣದಿಂದ ನಿವೃತ್ತಿಗೊಳ್ಳುವಂತೆ ಜೆಡಿಎಸ್ ಮುಖಂಡರ ಮತ್ತು ಕಾರ್ಯಕರ್ತರ ಪ್ರಯತ್ನ ವಿಫಲಗೊಂಡಿದೆ. ಕಾಂಗ್ರೇಸ್ ಅಭ್ಯರ್ಥಿ ಎಂ.ಗೋಪಾಲಗೌಡನಿಗೆ ಮತ್ತೊಬ್ಬ ಅಭ್ಯರ್ಥಿ ಅದೇ ಹೆಸರಿನ ಕೆ.ಎಸ್.ಗೋಪಾಲಗೌಡ ಸ್ಪರ್ಧೆ ಮಾಡಿರುವುದು ಅಧಿಕೃತ ಅಭ್ಯರ್ಥಿಗೆ ಅಸಮಾಧಾನ ತಂದಿದೆ.
ಮುಳಬಾಗಿಲು ಪೂರ್ವ ಕ್ಷೇತ್ರದಲ್ಲಿ ಎನ್.ಡಿ.ಎ. ಅಭ್ಯರ್ಥಿ ಕೆ.ಎನ್.ನಾಗರಾಜ್ ಆಗಿದ್ದು, ಅಲ್ಲಿ ಬಂಡಾಯವಾಗಿ ಕಲ್ಲುಪಲ್ಲಿ ಪ್ರಕಾಶ್ ಸ್ಪರ್ಧೆ ಮಾಡಿರುವುದರಿಂದ ಅಧಿಕೃತ ಅಭ್ಯರ್ಥಿಗೆ ಬಂಡಾಯದ ಭೀತಿ ಎದುರಾಗಿದೆ. ಕಾಂಗ್ರೇಸ್ ಅಧಿಕೃತ ಅಭ್ಯರ್ಥಿ ಆರ್.ಆರ್.ರಾಜೇಂದ್ರಗೌಡ ಸ್ಪರ್ಧೆ ಮಾಡಿದ್ದಾರೆ. ಕಲ್ಲುಪಲ್ಲಿ ಪ್ರಕಾಶ್ ಸ್ಪರ್ಧೆಯಿಂದ ಇಬ್ಬರು ಅಧಿಕೃತ ಅಭ್ಯರ್ಥಿಗಳಿಗೂ ಹೊಡೆತ ಬೀಳುವ ಸಾಧ್ಯತೆ ಇದೆ.
ಕಾಂಗ್ರೇಸ್‌ನಲ್ಲಿ ಶಮನವಾಗದ ಭಿನ್ನಮತ :
ಮಹಿಳಾ ಮೀಸಲು ಕ್ಷೇತ್ರದ ಪೂರ್ವ ಮತ್ತು ದಕ್ಷಿಣ ಕ್ಷೇತ್ರದಿಂದ ಸ್ಪರ್ಧೆ ಮಾಡಿರುವ ಮಹಿಳಾ ಅಭ್ಯರ್ಥಿಗಳಿಗೆ ಕಾಂಗ್ರೇಸ್‌ನಿAದಲೇ ಸ್ಪರ್ಧಿಸಿರುವ ಬಂಡಾಯ ಅಭ್ಯರ್ಥಿಗಳ ಭೀತಿ ಎದುರಾಗಿದೆ.
ಮಹಿಳಾ ಉತ್ತರ ಕ್ಷೇತ್ರದಿಂದ ಮಹಾಲಕ್ಷಿö್ಮÃ, ಕೆ.ಆರ್.ರೇಣುಕಾ ಈ ಇಬ್ಬರು ಕಾಂಗ್ರೇಸ್‌ನ ಅಭ್ಯರ್ಥಿಗಳಾಗಿದ್ದಾರೆ. ಎನ್.ಡಿ.ಎ ಬೆಂಬಲದಿAದ ಲಕ್ಷಿö್ಮÃಪ್ರಿಯ ಅಧಿಕೃತ ಅಭ್ಯರ್ಥಿಯಾಗಿದ್ದಾರೆ.
ಮಹಾಲಕ್ಷಿö್ಮÃಗೆ ಕೆ.ಹೆಚ್.ಮುನಿಯಪ್ಪನವರ ಗುಂಪಿನ ಬೆಂಬಲ ದೊರೆತಿದೆ. ಕೆ.ಆರ್.ರೇಣುಕಾಗೆ ಕಾಂಗ್ರೇಸ್ ಘಟಬಂಧನ್ ಗುಂಪು ಬೆಂಬಲ ನೀಡಿದೆ. ಇದು ಹೈಕಮ್ಯಾಂಡ್ ಹಂತಕ್ಕೆ ತಲುಪಿದ್ದು, ಅಧಿಕೃತ ಅಭ್ಯರ್ಥಿಯಾಗಿ ಮಹಾಲಕ್ಷಿö್ಮÃಯನ್ನು ಘೋಷಣೆ ಮಾಡಬೇಕೆಂದು ಮುಖ್ಯಮಂತ್ರಿ ಸಿದ್ಧರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್, ಘಟಬಂಧನ್ ನಾಯಕರಾದ ಶಾಸಕ ಕೊತ್ತೂರು ಮಂಜುನಾಥ್‌ಗೆ ಸೂಚನೆ ನೀಡಿದ್ದರೂ ಸಹ ಘಟಬಂಧನ್ ನಾಯಕರು ಕೆ.ಆರ್.ರೇಣುಕಾ ಪರವಾಗಿ ಮತಯಾಚನೆ ಮಾಡುತ್ತಿದ್ದಾರೆ.
ಮಹಿಳಾ ದಕ್ಷಿಣ ಕ್ಷೇತ್ರದಿಂದ ಎಂ.ಕಾAತಮ್ಮ, ಎಂ.ಪ್ರತಿಭಾ ಇಬ್ಬರು ಸ್ಪರ್ಧೆ ಮಾಡಿದ್ದು, ಈ ಇಬ್ಬರು ಕಾಂಗ್ರೇಸ್ ಅಭ್ಯರ್ಥಿಗಳೇ ಆಗಿದ್ದಾರೆ. ಎಂ.ಕಾAತಮ್ಮ ಘಟಬಂಧನ್ ನಾಯಕರಾದ ಮಾಲೂರು ಶಾಸಕ ನಂಜೇಗೌಡ ರವರ ಅಭ್ಯರ್ಥಿಯಾಗಿದ್ದಾರೆ. ಘಟಬಂಧನ್‌ನಿAದ ದೂರ ಸರಿದಿರುವ ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಅಭ್ಯರ್ಥಿಯಾಗಿದ್ದಾರೆ.
ಇಲ್ಲಿ ಕಾಂಗ್ರೇಸ್‌ನಲ್ಲಿ ಎರಡು ಗುಂಪುಗಳಾಗಿವೆ. ಎನ್.ಡಿ.ಎ ಅಭ್ಯರ್ಥಿ ಇಲ್ಲದಿದ್ದರೂ ಘಟಬಂಧನ್ ವಿರುದ್ಧವಾಗಿ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಅಭ್ಯರ್ಥಿಯಾದ ಎಂ.ಪ್ರತಿಭಾಗೆ ಎನ್‌ಡಿಎ ಬೆಂಬಲ ದೊರೆಯಲಿದೆ.
ಮತದಾರರ ಹೈಜಾಕ್ :
ಚುನಾವಣೆಗೆ ಇನ್ನು ಕೇವಲ ಒಂದು ಮಾತ್ರ ಬಾಕಿ ಉಳಿದಿದ್ದು, ಆಯಾ ಕ್ಷೇತ್ರಗಳ ಅಭ್ಯರ್ಥಿಗಳಿಂದ ಮತದಾರರನ್ನು ಈಗಾಗಲೇ ಹೈಜಾಕ್ ಮಾಡಲಾಗಿದೆ. ಕೆಲವು ಕ್ಷೇತ್ರಗಳ ಮತದಾರರು ಯಾತ್ರಾ ಸ್ಥಳಗಳಿಗೆ ಪ್ರವಾಸ ಕೈಗೊಂಡಿದ್ದರೆ ಇನ್ನು ಕೆಲವು ಕ್ಷೇತ್ರದ ಮತದಾರರನ್ನು ರೆಸಾರ್ಟ್ಗಳಲ್ಲಿ ಕೂಡಿಹಾಕಿ ಗುಂಡು ಪಾರ್ಟಿಗಳು ಎಗ್ಗಸಿಗ್ಗಿಲ್ಲದೆ ನಡೆಯುತ್ತಿವೆ.
ಚಿತ್ರ ೨೨ ಕೆ.ಎಲ್.ಆರ್. ೦೨ : ಕೋಮುಲ್ ಕಛೇರಿ ಚಿತ್ರ