ಕೊಲ್ಹಾರ ಪಟ್ಟಣದ ಬನಶಂಕರಿ ದೇವಿ ಜಾತ್ರೆ ನಿಮಿತ್ತ ಹಮ್ಮಿಕೊಂಡಿದ್ದ ರಸಮಂಜರಿ ಕಾರ್ಯಕ್ರಮವವನ್ನು ಶೀಲವಂತ ಹಿರೇಮಠದ ಕೈಲಾಸನಾಥ ಶ್ರೀಗಳು ಉದ್ಘಾಟಿಸಿದರು. ಡಾ. ಬಕ್ತಿಯಾರಖಾನ್​ ಪಠಾಣ, ಕಲ್ಲು ಸೊನ್ನದ, ಈರಣ್ಣ ಔರಸಂಗ ಇತರರಿದ್ದರು.  
ನ್ಯೂಸ್

ದೇವಲ ಮಹರ್ಷಿಗಳ ವಂಶಸ್ಥರು ದೇವಾಂಗ ಜನಾಂಗ

ಕೊಲ್ಹಾರ: ಮಾನ ರಣೆಗೆ ವಸ್ತ್ರವಿಲ್ಲದಿರಲು, ಶಿವನ ಇಚ್ಛೆಯಂತೆ ಅವತರಿಸಿ ವಸ್ತ್ರ ಸೂತ್ರ ನಿರ್ಮಿಸಿ ಕೊಟ್ಟ ದೇವಲ ಮಹರ್ಷಿಗಳ ವಂಶಸ್ಥರೇ ದೇವಾಂಗ ಜನಾಂಗದವರು ಎಂದು ಶೀಲವಂತ ಹಿರೇಮಠದ ಕೈಲಾಸನಾಥ ಶ್ರೀಗಳು ಹೇಳಿದರು.

ಪಟ್ಟಣದ ಬನಶಂಕರಿ ದೇವಿ ಜಾತ್ರೆ ನಿಮಿತ್ತ್ತ ಹಮ್ಮಿಕೊಂಡಿದ್ದ ರಸಮಂಜರಿ ಕಾರ್ಯಕ್ರಮ ಉದ್ಘಾಟಿಸಿ, ದೇವಾಂಗ ಸಮಾಜದವರು ಒಗ್ಗಟ್ಟಾಗಿ ಇಂತಹ ಅದ್ಭುತ ಜಾತ್ರಾ ಮಹೋತ್ಸವ ಹಮ್ಮಿಕೊಂಡು ಇತರರಿಗೆ ಪ್ರೇರಣೆಯಾಗಿದ್ದಾರೆ ಎಂದರು.

ತಾ.ಪಂ. ಮಾಜಿ ಅಧ್ಯ ಕಲ್ಲು ಸೊನ್ನದ ಮಾತನಾಡಿ, ಸಮಾಜ ಒಂದಾದಾಗ ಇಂತಹ ಕಾರ್ಯಕ್ರಮಗಳು ಜರುಗಲು ಸಾಧ್ಯ. ದೇವಾಂಗ ಸಮಾಜ ಒಗ್ಗಟ್ಟಾಗಿ ಸಮಾಜದ ಏಳಿಗೆಗೆ ಶ್ರಮಿಸಬೇಕು ಎಂದರು.

ಡಾ. ಬಕ್ತಿಯಾರಖಾನ್​ ಪಠಾಣ, ಸಲೀಂ ಕೊತ್ತಲ, ಗೂಳಪ್ಪ ವಾಲಿಕಾರ, ಈರಣ್ಣ ಔರಸಂಗ, ಮಲ್ಲಪ್ಪ ಗಣಿ, ಸುಭಾಷ ಬಜಂತ್ರಿ, ಮಶಾಕ ಬಳಗಾರ, ನಾಗರಾಜ ಕುಂಬಾರ, ಸಂತೋಷ ಹಡ್ರೋಳ್ಳಿ ಪಾಲ್ಗೊಂಡಿದ್ದರು.