ಕೊಲೆ ಯತ್ನ ನಡೆಸಿದ ಮೂವರಿಗೆ ಮೈಸೂರಿನ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಗುರುರಾಜ್ ಸೋಮಕ್ಕಳವರ್ ಅವರು ತಲಾ 2 ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ ತಲಾ 1500 ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ನಂಜನಗೂಡು ತಾಲೂಕು ದೇವನೂರು ಗ್ರಾಮದ ನವೀನ್ ಕುಮಾರ್ ಅವರನ್ನು ಅಡ್ಡಗಟ್ಟಿ ಕೊಲೆ ಮಾಡಲು ಯತ್ನಿಸಿದ ಗುರುಸ್ವಾಮಿ, ರೂಪಾ ಮತ್ತು ಶಿವಮ್ಮ ಎಂಬವರೇ ಶಿಕ್ಷೆಗೆ ಗುರಿಯಾದವರು.
ಏನಿದು ಪ್ರಕರಣ?
ನವೀನ್ ಕುಮಾರ್ 2019ರ ಏ.18 ರಂದು ಟ್ರ್ಯಾಕ್ಟರ್‌ನಲ್ಲಿ ಬರುತ್ತಿದ್ದಾಗ ತಿಮ್ಮಯ್ಯಮಾಳದ ಮುಂಭಾಗ ಗುರುಸ್ವಾಮಿ ಅವರನ್ನು ಅಡ್ಡಹಾಕಿ, ಚೂರಿಯಿಂದ ಇರಿದು ಕೊಲೆ ಮಾಡಲು ಯತ್ನಿಸಿದ್ದಾರೆ. ಇದಕ್ಕೆ ರೂಪಾ ಮತ್ತು ಶಿವಮ್ಮ ಸಹಕರಿಸಿದ್ದಾರೆ. ಈ ಸಂಬಂಧ ಕವಲಂದೆ ಠಾಣೆಯ ಆಗಿನ ಎಸ್‌ಐ ಅಮ್ಮಾಜಾನ್ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಬಿ.ಇ. ಯೋಗೇಶ್ವರ್ ವಾದಿಸಿದ್ದರು.