ನ್ಯೂಸ್

ಕೊಡವ ಮಕ್ಕಡ ಕೂಟದ ವತಿಯಿಂದ "ಬೈಸಿಕಲ್" ಮತ್ತು "ನಾಡ ಪೆದ ಆಶಾ" ಪುಸ್ತಕ ಅನಾವರಣ

ಸಮಾಜ ಸೇವಕ ನಂದಿನೆರವಂಡ ಪ್ರವೀಣ್ ಪಳಂಗಪ್ಪ ಅವರು "ನಾಡ ಪೆದ ಆಶಾ" ಪುಸ್ತಕವನ್ನು ಲೋಕಾರ್ಪಣೆಗೊಳಿಸಿದರು. ಕಾರ್ಯಕ್ರಮದಲ್ಲಿ ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ, ಸಮಾಜ ಸೇವಕ ಪಾಡೆಯಂಡ ದೀಪಕ್ ದೇವಯ್ಯ ಉಪಸ್ಥಿತರಿದ್ದರು.

ಚಿತ್ರ ನಿರ್ಮಾಪಕ ಕೊಟ್ಟುಕತ್ತಿರ ಪ್ರಕಾಶ್ ಕಾರ್ಯಪ್ಪ ತಮ್ಮ "ಬೈಸಿಕಲ್" ಪುಸ್ತಕದ ಕುರಿತು ಮಾತನಾಡಿ, ತಂದೆಯನ್ನು ಕಳೆದುಕೊಂಡ ಬಡ ಕುಟುಂಬದ ಮಕ್ಕಳ ಜೀವನವನ್ನು ಮನೋಜ್ಞವಾಗಿ ಚಿತ್ರಿಸಲಾಗಿದೆ. ಚಿಂದಿ ಆಯುವ ಬೀದಿ ಬದಿಯ ಮಕ್ಕಳು "ಬೈಸಿಕಲ್" ಖರೀದಿಗಾಗಿ ಹಣ ಸಂಗ್ರಹಿಸಲು ಪಡುವ ಕಷ್ಟಗಳನ್ನು ಮತ್ತು ಜೀವನದ ಮೌಲ್ಯಗಳನ್ನು ಕಥೆಯಲ್ಲಿ ವಿವರಿಸಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಸಾಹಿತಿ ನಾಗೇಶ್ ಕಾಲೂರು ಮಾತನಾಡಿ, ಮನುಷ್ಯನ ಜೀವನ ತನ್ನ ಸ್ವಂತಕ್ಕಷ್ಟೇ ಸೀಮಿತವಾಗಬಾರದು, ಬದಲಿಗೆ ಸಮಾಜಕ್ಕೂ ತಮ್ಮದೇ ಆದ ಕೊಡುಗೆ ನೀಡಬೇಕಾಗುತ್ತದೆ. ಈ ಎಳೆಯನ್ನು ಆಧರಿಸಿ "ನಾಡ ಪೆದ ಆಶಾ" ಕಾದಂಬರಿಯನ್ನು ರಚಿಸಲಾಗಿದೆ ಎಂದರು.

ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಪುಸ್ತಕಗಳ ಲೋಕಾರ್ಪಣೆಯ ಸರಳ ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಕೊಡವ ಭಾಷೆಯ ಒಟ್ಟು ೧೭ ಪುಸ್ತಕಗಳನ್ನು ಬರೆದಿರುವ ಹಿರಿಯ ಸಾಹಿತಿ ನಾಗೇಶ್ ಕಾಲೂರು ಅವರು ರಚಿಸಿರುವ ೧೮ನೇ ಪುಸ್ತಕ "ನಾಡ ಪೆದ ಆಶಾ" ಹಾಗೂ ನಾಲ್ಕು ಪುಸ್ತಕಗಳನ್ನು ಬರೆದಿರುವ ಸಾಹಿತಿ, ನಟ, ನಿರ್ದೇಶಕ, ನಿರ್ಮಾಪಕ ಕೊಟ್ಟುಕತ್ತಿರ ಪ್ರಕಾಶ್ ಕಾರ್ಯಪ್ಪ ಅವರ ೫ನೇ ಪುಸ್ತಕ "ಬೈಸಿಕಲ್" ಲೋಕಾರ್ಪಣೆಗೊಡಿತು.

ಮಡಿಕೇರಿ: ಕೊಡವ ಮಕ್ಕಡ ಕೂಟದ ವತಿಯಿಂದ "ಬೈಸಿಕಲ್" ಮತ್ತು "ನಾಡ ಪೆದ ಆಶಾ" ಎರಡು ಪುಸ್ತಕ ಅನಾವರಣಗೊಳಿಸಲಾಯಿತು.