ಬೆಂಗಳೂರು
ಬೆಂಗಳೂರು ನಗರ ವಿಶ್ವವಿದ್ಯಾಲಯ(ಬಿಸಿಯು) ಕಟ್ಟಡ ನಿರ್ಮಾಣದ ಹೆಸರಿನಲ್ಲಿ 155 ಕೋಟಿ ರೂ. ಅನ್ನು ಸರ್ಕಾರದ ಮತ್ತೊಂದು ಇಲಾಖೆಗೆ ತರಾತುರಿಯಲ್ಲಿ ವರ್ಗಾವಣೆ ಮಾಡುತ್ತಿರುವುದನ್ನು ಖಂಡಿಸಿ ಸಿಂಡಿಕೇಟ್ ಸದಸ್ಯರು ರಾಜ್ಯಪಾಲರಿಗೆ ದೂರು ಸಲ್ಲಿಸಿದ್ದಾರೆ.
ಬೆಂ.ನಗರ ವಿವಿ ಕುಲಪತಿ ಎಸ್.ಜಾಫೆಟ್ ಅವರು ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಂಡು ನಿವೃತ್ತಿಗೆ ವಾರ ಇರುವ ಕಾಲದಲ್ಲಿ ಈ ರೀತಿ ಕೋಟ್ಯಾಂತರ ಹಣವನ್ನು ಬೇರೊಂದು ಇಲಾಖೆಗೆ ವರ್ಗಾವಣೆ ಮಾಡಲು ಮುಂದಾಗಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.
ಕರ್ನಾಟಕ ವಿಶ್ವವಿದ್ಯಾಲಯ ಅಧಿನಿಯಮ 2000 ಪ್ರಕಾರ ನಿವೃತ್ತಿಗೆ ಆರು ತಿಂಗಳು ಮೊದಲು ಕುಲಪತಿಗಳು ಯಾವುದೇ ಉನ್ನತ ನಿರ್ಧಾರಗಳನ್ನು ತೆಗೆದುಕೊಳ್ಳುವಂತಿಲ್ಲ. ಆದರೆ, ಈ ಕುಲಪತಿಯು ದೊಡ್ಡ ಮೊತ್ತವನ್ನು ವರ್ಗಾವಣೆ ಮಾಡಲು ಮುಂದಾಗಿದ್ದಾರೆ. ಈ ಬಗ್ಗೆ ಸಿಂಡಿಕೇಟ್ ಸದಸ್ಯರಿಗೂ ತಿಳಿಸಿಲ್ಲ. ಸಭೆಯಲ್ಲಿ ಚರ್ಚೆಯೂ ಮಾಡಿಲ್ಲ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕೆಂದು ಸಿಂಡಿಕೇಟ್ ಸದಸ್ಯರು ರಾಜ್ಯಪಾಲರಿಗೆ ಪತ್ರದ ಮೂಲಕ ದೂರು ನೀಡಿ ಮನವಿ ಮಾಡಿದ್ದಾರೆ.
ಶಂಕು ಸ್ಥಾಪನೆ: ಬೆಂ.ನಗರ ವಿವಿಯ 43 ಎಕರೆ ಪ್ರದೇಶದಲ್ಲಿ ಅಭಿವೃದ್ಧಿ ಮೂಲಸೌಕರ್ಯಗಳ ಕಟ್ಟಡಗಳ ನಿರ್ಮಾಣ ಮಾಡುವುದಕ್ಕೆ ನ.18ರಂದು ಶಂಕುಸ್ಥಾಪನೆ ಮಾಡಲು ತೆರೆ ಮರೆಯಲ್ಲಿ ಕೆಲಸಗಳು ನಡೆಯುತ್ತಿದ್ದು, ಆಮಂತ್ರ ಪತ್ರ ಕೂಡ ಮುದ್ರಣವಾಗಿದೆ. ಮುಖ್ಯ ಅತಿಥಿಯಾಗಿ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಭಾಗವಹಿಸಲಿದ್ದಾರೆಂದು ತಿಳಿದು ಬಂದಿದೆ.
ಕರಣ್ ಕುಮಾರ್, ಸಿಂಡಿಕೇಟ್ ಸದಸ್ಯ
ಕುಲಪತಿಗಳು ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ತಕ್ಷಣ ಇದು ನಿಲ್ಲಬೇಕು. ಸಿಂಡಿಕೇಟ್ ಸಭೆ ಕರೆದು ಚರ್ಚಿಸಬೇಕು.
ಕೋಟ್…