ನ್ಯೂಸ್

ಕೊಟ್ಟಿಗೆಯಲ್ಲಿ ಕಟ್ಟಿದ್ದ ಹೋತಗಳ ಕಳವು

ಮೈಸೂರು: ಕೊಟ್ಟಿಗೆಯಲ್ಲಿ ಕಟ್ಟಿಹಾಕಿದ್ದ ಎರಡು ಹೋತಗಳನ್ನು ಖದೀಮರು ಕಳವು ವಾಡಿದ್ದಾರೆ. ತಾಲೂಕಿನ ಸೋಮೇಶ್ವರಪುರ ನಿವಾಸಿ ನವೀನ್ ಫೆ.8 ರಂದು ರಾತ್ರಿ ಹೋತಗಳಿಗೆ ಮೇವು ಹಾಕಿ ಕೊಟ್ಟಿಗೆಯಲ್ಲಿ ಕಟ್ಟಿಹಾಕಿ ಮಲಗಿದ್ದರು. ವಾರನೆಯ ದಿನ ಬೆಳಗ್ಗೆ ಕೊಟ್ಟಿಗೆಯ ಬಾಗಿಲು ತೆರೆದಿರುವುದು ಕಂಡುಬಂತು. ಒಳಗೆ ತೆರಳಿ ನೋಡಿದಾಗ ಎರಡು ಹೋತಗಳು ಇರಲಿಲ್ಲ ಎಂದು ದೂರು ನೀಡಿದ್ದು, ವರುಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.