ನ್ಯೂಸ್

ಕೊಂಡರಾಜನಹಳ್ಳಿ ಡೇರಿಗೆ ೪೪ ಸಾವಿರ ನಿವ್ವಳ ಲಾಭ/ ಎನ್.ನಾರಾಯಣಸ್ವಾಮಿ

ವಿಜಯವಾಣಿ ಸುದ್ದಿಜಾಲ ಕೋಲಾರ

ತಾಲೂಕಿನ ಕೊಂಡರಾಜನಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಪ್ರಸಕ್ತ ಸಾಲಿನಲ್ಲಿ ೩.೧೪ ಲಕ್ಷ ರೂ. ಲಾಭದಲ್ಲಿದ್ದು, ೪೪ ಸಾವಿರ ನಿವ್ವಳ ಲಾಭಗಳಿಸಿದೆ ಎಂದು ಸಂಘದ ಅಧ್ಯಕ್ಷ ಎನ್.ನಾರಾಯಣಸ್ವಾಮಿ ತಿಳಿಸಿದರು

ಸಂಘದ ಆವರಣದಲ್ಲಿ ಶನಿವಾರ ನಡೆದ ಪ್ರಸಕ್ತ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಭೆಯಲ್ಲಿ ಮಾತನಾಡಿ, ಉತ್ಪಾದಕರು ಸಂಘಕ್ಕೆ ಗುಣಮಟ್ಟದ ಹಾಲು ಪೂರೈಕೆ ಮಾಡುವುದರಿಂದ ಉತ್ಪಾದಕರಿಗೆ ಹಾಗೂ ಡೇರಿಗೂ ಉತ್ತಮ ಲಾಭಗಳಿಸಲು ಸಾಧ್ಯವಾಗುತ್ತದೆ. ಗುಣಮಟ್ಟದ ಹಾಲು ಪೂರೈಕೆ ಮಾಡಿದ್ದರಿಂದ ಸಂಘಕ್ಕೆ ಈ ಬಾರಿ ಲಾಭಾಂಶ ಬಂದಿದೆ ಎಂದು ತಿಳಿಸಿದರು.

ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ಎಸ್ ನಾಗಪ್ಪ ಮಾತನಾಡಿ, ಕೋಚಿಮುಲ್ ವತಿಯಿಂದ ನೀಡುವ ಸವಲತ್ತುಗಳನ್ನು ರೈತರು ಸಮರ್ಪಕವಾಗಿ ಬಳಸಿಕೊಂಡು ಡೇರಿಗೆ ಗುಣಮಟ್ಟದ ಹಾಲನ್ನು ಪೂರೈಸಿ ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕು. ರೈತರು ತಮ್ಮ ಹಸುಗಳಿಗೆ ವಿಮೆ ಮಾಡಿಸಿಕೊಂಡು ಅವುಗಳ ಆರೋಗ್ಯವು ಕಾಪಾಡಿಕೊಳ್ಳಬೇಕು. ಕಳೆದ ವರ್ಷ ನಷ್ಟದಲ್ಲಿ ಇದ್ದ ಡೇರಿ ಈ ಬಾರಿ ೪೪ ಸಾವಿರ ಲಾಭ ಗಳಿಸಿದೆ ಇದೇ ರೀತಿಯಲ್ಲಿ ಆಡಳಿತ ಮಂಡಳಿಯ ಒಗ್ಗಟ್ಟಿನಿಂದ ಡೇರಿ ಅಭಿವೃದ್ಧಿಗೆ ಮುಂದಾಗಬೇಕು ಎಂದರು.

ಗ್ರಾಪA ಸದಸ್ಯ ಶ್ರೀನಿವಾಸ್ ಯಾದವ್, ಸಂಘದ ಮಾಜಿ ಅಧ್ಯಕ್ಷ ಶ್ರೀನಿವಾಸ್, ನಿರ್ದೇಶಕರಾದ ಶಂಕರಪ್ಪ, ನಾಗರಾಜ್, ಲಕ್ಷ್ಮೀಪತಿ, ಮಂಜುನಾಥ್, ನಾರಾಯಣಸ್ವಾಮಿ, ಮುರಳಿಬಾಬು, ಸಿ.ನಾರಾಯಣಸ್ವಾಮಿ, ನಂದಕುಮಾರ್, ವೆಂಕಟಲಕ್ಷ್ಮಮ್ಮ, ಕಾರ್ಯದರ್ಶಿ ಚಲಪತಿ, ಹಾಲು ಪರೀಕ್ಷಕ ಗಂಗಾಧರ್, ಗ್ರಾಮಸ್ಥರಾದ ಅನ್ವರ್ ಪಾಷ, ಶ್ರೀಕಾಂತ್ ಯಾದವ್, ಕೊಂಡರಾಜನಹಳ್ಳಿ ಮಂಜುಳ ಇದ್ದರು.

ಚಿತ್ರ ೨೩ ಕೆ.ಎಲ್.ಆರ್. ೦೪ : ತಾಲೂಕಿನ ಕೊಂಡರಾಜನಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಮಹಾಸಭೆ ಉದ್ಘಾಟಿಸಿದ ಸಂಘದ ಅಧ್ಯಕ್ಷ ಎನ್.ನಾರಾಯಣಸ್ವಾಮಿ, ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ಎಸ್.ನಾಗಪ್ಪ, ಗ್ರಾ.ಪ.ಸದಸ್ಯ ಶ್ರೀನಿವಾಸ್ ಇದ್ದರು.