ಕೋಲಾರ: ಚಿಂತಾಮಣಿ ತಾಲೂಕು ಕೈವಾರದ ಸದ್ಗುರು ಶ್ರೀಯೋಗಿ ನಾರೇಯಣ ಯತೀಂದ್ರರ ಮಠದಲ್ಲಿ ಗುರುಪೂರ್ಣಿಮೆ ಪ್ರಯುಕ್ತ ಜು 11 ರಿಂದ 3ದಿನ ಶ್ರದ್ಧಾಭಕ್ತಿಯಿಂದ ಗುರುಪೂಜಾ ಸಂಗೀತೋತ್ಸವ ಆಚರಿಸಲಾಗುತ್ತದೆ ಎಂದು ಮಠದ ಸಂಕೀರ್ತನ ಯೋಜನೆ ಸಂಚಾಲಕ ವಾನರಾಶಿ ಬಾಲಕೃಷ್ಣ ಭಾಗವತರ್ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಬುಧವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಷ್ಟ್ರಮಟ್ಟದ ಖ್ಯಾತ ಸಂಗೀತ ಕಲಾವಿದರೊಂದಿಗೆ ಸ್ಥಳಿಯ ಕಲಾವಿದರು ಮತ್ತು ಸಹಸ್ರಾರು ಭಜನಾ ತಂಡಗಳು ಈ ನಾದೋಪಾಸನೆಯಲ್ಲಿ ಭಾಗವಹಿಸಿ ನಿರಂತರ 72 ಗಂಟೆ ಸಂಗೀತ ಸೇವೆಯನ್ನು ಸದ್ಗುರು ತಾತಯ್ಯನವರಿಗೆ ಸಮರ್ಪಿಸಲಿದ್ದಾರೆ ಎಂದರು.
ಜು 11 ರಂದು ಬೆಳಗ್ಗೆ 6 ಗಂಟೆಗೆ ಶ್ರೀಯೋಗಿನಾರೇಯಣ ಯತೀಂದ್ರರ ಉತ್ಸವ ಮೂರ್ತಿಯನ್ನು ಸಭಾಂಗಣಕ್ಕೆ ತಂದು ಕಾರ್ಯಕ್ರಮಗಳನ್ನು ಪ್ರಾರಂಭಿಸಲಾಗುತ್ತದೆ. ಕ್ಷೇತ್ರದ ಧಮಾರ್ಧಿಕಾರಿ ಡಾ. ಎಂ.ಆರ್.ಜಯರಾಮ್ ನೇತೃತ್ವದಲ್ಲಿ ಸಾಮೂಹಿಕ ನಾಮ ಸಂಕೀರ್ತನೆಯೊಂದಿಗೆ ಸಂಗೀತೋತ್ಸವಕ್ಕೆ ಚಾಲನೆ ನೀಡಲಾಗುತ್ತದೆ. ಅಂದು ಸಂಜೆ ವಿಶೇಷ ಕಾರ್ಯಕ್ರಮದಲ್ಲಿ ಡಾ. ಎಂ.ವಿ.ಶ್ರೀನಿವಾಸಮೂರ್ತಿ, ಸುಧಾಮಣಿ ವೆಂಕಟರಾಘವನ್, ಆರ್.ಜಯಶ್ರೀ ಮತ್ತು ಆರ್.ಶ್ರೀಲಕ್ಷಿ$್ಮ, ಬಿ.ಎಂ.ಆಂಜನಪ್ಪ, ಬೊಮ್ಮಿಶೆಟ್ಟಿ ರಘುನಾಥ್, ಡಿ.ಆರ್.ರಾಜಪ್ಪ ತಂಡ, ಅಧಿತಿ ಪ್ರಹ್ಲಾದ್, ವಿನಯ್ ಶಮಾರ್ರಿಂದ ಗಾಯನ ಕಾರ್ಯಕ್ರಮ ವಿರುತ್ತದೆ. ನಂತರ ಶ್ರೀಧರ್, ಸಾಗರ್ರಿಂದ ಸ್ಯಾಕ್ಸೋೋನ್ ವಾದನ ಇರುತ್ತದೆ ಎಂದರು.
ಜು 12 ರಂದು ಚೆನ್ನೆ$ನ ಕುನ್ನಕುಡಿ ಬಾಲಮುರಳೀಕೃಷ್ಣ, ಕೇರಳದ ಪ್ರಿನ್ಸ್ ರಾಮವರ್ಮ, ಬೆಂಗಳೂರಿನ ಎಸ್.ವಿ.ರಮಣಕುಮಾರ್, ಉಷಾರಾಮಕೃಷ್ಣಭಟ್, ಅಪರ್ಣಕೃಷ್ಣಕುಮಾರ್, ಯೋಗಕೀರ್ತನಾ, ತಿರುಮಲೆ ಶ್ರೀನಿವಾಸ್, ರಂಜನಿ ವಾಸುಕಿರಿಂದ ಗಾಯನವಿರುತ್ತದೆ. ತಿರುವಾಯೂರು ಭಕ್ತವತ್ಸಲಂ ಮೃದಂಗ, ಎಲ್.ವಿ.ಮುಕುಂದ್ ಕೊಳಲು, ಎ.ವಿ.ವಿಶ್ವನಾಥ್ ಹಾಮೋರ್ನಿಯಂ, ಮುಂಬೈನ ಸುಬ್ಬಲಕ್ಷಿ$್ಮ ಸ್ಯಾಕ್ಸೋಫೋನ್, ಅಮಿತ್ ನಾಡಿಗ್ ಕೊಳಲು, ಮೋಘ ಶ್ರೀನಿವಾಸ್ ಭರತನಾಟ್ಯ, ಚೆನ್ನೆ$ನ ಯು.ರಾಜೇಶ್ ಮ್ಯಾಂಡೋಲಿನ್, ನೂಪುರ ಫೈನ್ ಆರ್ಟ್ಸ್ನ ರೂಪರಾಜೇಶ್ರಿಂದ ಕೂಚುಪುಡಿ ನೃತ್ಯ, ಬಾಬು-ಕುಮಾರ್ ಹಾಗೂ ಕೇರಳದ ಆನಂದ್ ಕಣ್ಣನ್, ಪಿ.ಎಂ.ರಂಜಿತ್ ವಿನಾಯಕ್, ಸ್ವಾಮಿಮಲೈ ಮುತ್ತು ಕುಮಾರ್, ಟಿ.ಜಿ.ಬಾಬು, ಗುರುನಾಥನ್ರಿಂದ ವಿಶೇಷ ನಾದಸ್ವರ, ವಾದನವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಜು 13ರಂದು ಗುರುಪೂರ್ಣಿಮೆಯಿದ್ದು ಬೆಳಗ್ಗೆ 10.30 ರಿಂದ ಶ್ರೀಯೋಗಿನಾರೇಯಣ ತಾತಯ್ಯನವರಿಗೆ ಕೀರ್ತನೆಗಳ ಮೂಲಕ ವಿಶೇಷ ಗುರುಪೂಜೆ ನಡೆಸಲಾಗುವುದು. ನಾಡಿನ ಪ್ರಸಿದ್ಧ ವಿದ್ವಾಂಸರುಗಳಿಂದ ತಾತಯ್ಯ ರಚಿಸಿರುವ ಪಂಚರತ್ನ ಕೀರ್ತನೆಗಳ ಗೋಷ್ಠಿಗಾಯನ ನಡೆಯಲಿದೆ. ಆನೂರು ಅನಂತಕೃಷ್ಣಶಮಾರ್ ತಂಡದಿಂದ ಲಯಲಹರಿ ತಾಳವಾದ್ಯ, ವಾಸವಿ ಸಹೋದರಿಯರು, ಮರಕತವಲ್ಲಿ, ಅಂಜಲಿ ಶ್ರೀರಾಮ್, ಚೈತನ್ಯ ಸಹೋದರರಿಂದ ಗಾಯನ, ದೀಲಿಪ್ ಮತ್ತು ಇಳಾ ಸಂಗೀತಾರಿಂದ ಪಿಟೀಲು ವಾದನ, ಚೇತನಾ ಸುಂದರೇಶ್ ಹಾಗೂ ಸಾಯಿತೇಜಸ್ವಿನಿ ತಂಡದಿಂದ ಭರತನಾಟ್ಯ, ತತ್ತನೂರು ಸಹೋದರರಿಂದ ನಾದಸ್ವರ ಕಾರ್ಯಕ್ರಮವಿದೆ ಎಂದರು.
ಮೂರು ದಿನ ನಿತ್ಯ ಕೋಲಾರ, ಚಿಕ್ಕಬಳ್ಳಾಪುರ ಮತ್ತು ನಾಡಿನ ಹೆಸರಾಂತ ಕಾಲಾವಿದರಿಂದ ಸಂಗೀತ ಕಛೇರಿ, ನಾದಸ್ವರ-ತವಿಲ್ ವಾದನ, ಭರತನಾಟ್ಯ, ಹರಿಕಥೆ, ಬುರ್ರಕಥೆ, ಹಾಗೂ ನೂರಾರು ಭಜನಾ ಕಾರ್ಯಕ್ರಮಗಳು ನಡೆಯುತ್ತದೆ ಎಂದರು.
ಮುಖಂಡರಾದ ಟಿ.ಎಲ್.ಆನಂದ್, ಅಶ್ವತ್ಥಪ್ಪ, ಕೃಷ್ಣಯ್ಯ ಶೆಟ್ಟಿ ಉಪಸ್ಥಿತರಿದ್ದರು.
ವಿಶ್ವದಲ್ಲಿಯೇ ನಿರಂತರ ಸಂಗೀತ ಸೇವೆ ನಡೆಯುವ ಏಕೈಕ ಸ್ಥಳ ಕೈವಾರವಾಗಿದ್ದು, ಮಠದಿಂದ ಸನಾತನ ಧರ್ಮ, ಸಂಸತಿ ಉಳಿಸುವ ಕಾರ್ಯವನ್ನು ಮಾಡುತ್ತಿದ್ದು, ಮುಂದಿನ ಪೀಳಿಗೆಗೆ ಸಂಸತಿ ಉಳಿಸುವ ಅಗತ್ಯವಿದೆ. ಆಸಕ್ತರು ಗುರುಗಳ ಕಾರ್ಯಕ್ರಮದಲ್ಲಿ ಭಾಗವಹಿಸಬಹುದಾಗಿದೆ. ನಿರಂತರ 72 ಗಂಟೆ ನಡೆಯುವ ಸಂಗೀತ ಸೇವೆಯಲ್ಲಿ ಸಾರ್ವಜನಿಕರು ಪಾಲ್ಗೊಂಡು ತಾತಯ್ಯನವರ ಕೃಪೆಗೆ ಪಾತ್ರರಾಗಬಹುದು.
|ಬಾಲಕೃಷ್ಣ ಭಾಗವತರ್, ಸಂಕೀರ್ತನ ಯೋಜನೆ ಸಂಚಾಲಕ, ಕೈವಾರ ಮಠ.
06-ಕೋಲಾರ-4