ಚಿತ್ರದುರ್ಗ:ಆಗ್ರಾ,ವಾಘಾಗಡಿ,ಅಮೃತಸರ ಮತ್ತಿರೆಡೆ ಪ್ರವಾಸಕ್ಕೆ ತೆರಳಿದ್ದ ಕರ್ನಾಟಕದ 40 ಜನರಿಂದ ಒಂದು ತಂಡ ಉತ್ತರಾಖಾಂ ಡದ ಕೇದಾರನಾಥ ಬಳಿ ವಿಪರೀತ ಮಳೆಯಿಂದ ಗುಡ್ಡ ಕುಸಿದು ಕೇದಾರನಾಥಕ್ಕೆ ತಲುಪಲು ಅಥವಾ ಹಿಂತಿರುಗಿ ಬರಲು ಸಾಧ್ಯವಾಗದೆ ಸಂಕಷ್ಟಕ್ಕೆ ಸಿಲುಕಿದೆ.
ಈ ತಂಡದಲ್ಲಿ ಚಿತ್ರದುರ್ಗದ ಅಂಬಿಕಾ ಮಲ್ಲಿಕಾರ್ಜುನ್,ರತ್ನಮ್ಮ ಸುರೇಶ್ ಹಾಗೂ ಬಸಮ್ಮ ಅವರೂ ಇದ್ದು,ಸದ್ಯ ಅವರೀಗ ಕೇದಾರನಾಥ ಬಳಿಯ ಸೀತಾಪುರ ಗ್ರಾಮದಲ್ಲಿದ್ದಾರೆ.
ಆ.2ರಂದು ಬೆಂಗಳೂರಿಂದ ಆಗ್ರಾಕ್ಕೆ ತೆರಳಿದ್ದ ತಂಡ,ವಾಘಾಗಡಿ,ಅಮೃತಸರ,ವೈಷ್ಣವಿದೇವಿ ಟೆಂಪಲ್,ಹೃಷಿಕೇಶ,ಗಂಗೋತ್ರಿ,ಯು ಮುನೇತ್ರಿಗೆ ತೆರಳಿದ್ದು,ಅಲ್ಲಿಂದ ಮಂಗಳವಾರ ಕೇದಾರನಾಥಕ್ಕೆ ತಲುಪಬೇಕಿತ್ತು. ಅಧಿಕ ಮಳೆಯಿಂದ ಗುಡ್ಡ ಕುಸಿದು ರಸ್ತೆ ಸಂಪರ್ಕ ಕಡಿತ ಗೊಂಡಿದೆ.
ಇದರಿಂದಾಗಿ ಹಿಂತಿರುಗಲು ಕೂಡ ಅವರಿಗೆ ಸಾಧ್ಯವಾಗಿಲ್ಲವೆಂದು ಅಂಬಿಕಾ ಅವರ ಪತಿ ಮಲ್ಲಿಕಾರ್ಜುನ್ ಮಾಹಿತಿ ನೀಡಿದ್ದಾರೆ. ಪ್ರ ವಾಸಕ್ಕೆ ತೆರಳಿರುವ ಇವರು ದೂರವಾಣಿ ಸಂಪರ್ಕದಲ್ಲಿದ್ದಾರೆ. ಆದರೆ ದೂರವಾಣಿ ಸಂಪರ್ಕವೂ ಸಮರ್ಪಕವಾಗಿಲ್ಲ. ಎಲ್ಲರೂ ಸೇಪ್ ಆಗಿದ್ದಾರೆ ಎಂದು ಮಲ್ಲಿಕಾರ್ಜುನ್ ವಿಜಯವಾಣಿಗೆ ತಿಳಿಸಿದ್ದಾರೆ.