ವಿಜಯವಾಣಿ ಸುದ್ದಿಜಾಲ ಕೋಲಾರ
ಬಹುಮತವಿಲ್ಲದ ಕೇಂದ್ರ ಸರ್ಕಾರ ಬಿದ್ದು ಹೋಗುತ್ತದೆ ಎನ್ನುವ ವಿಚಾರ ಚರ್ಚೆಯಲ್ಲಿದೆ. ಕಾರಣ ಭೂಕಂಪದAತೆ ಕೇಂದ್ರ ಸರ್ಕಾರ ಅಲುಗಾಡುತ್ತಿದ್ದು, ಸದ್ಯ ತೀವ್ರತೆಯು ಪಾಯಿಂಟ್ ೪ ರಲ್ಲಿದೆ. ಅದು ಏನಾದರೂ ಪಾಯಿಂಟ್ ೬ ರಿಂದ ೭ಕ್ಕೆ ಏರಿಕೆಯಾದರೆ ಢಮಾರ್ ಎಂದು ಸರ್ಕಾರ ಬಿದ್ದು ಹೋಗುತ್ತದೆ ಎಂದು ಕೋಲಾರ ಶಾಸಕ ಕೊತ್ತೂರು ಮಂಜುನಾಥ್ ಭವಿಷ್ಯ ನುಡಿದರು.
ನಗರದ ಕುಡಾ ಕಚೇರಿಯಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕೇಂದ್ರ ಹಾಗೂ ರಾಜ್ಯದಲ್ಲಿ ಸರ್ಕಾರಗಳು ರಚನೆ ಆಗಿವೆ. ರಾಜ್ಯದಲ್ಲಿ ನಮ್ಮನ್ನು, ಕೇಂದ್ರದಲ್ಲಿ ಅವರನ್ನು ಕೆಲಸ ಮಾಡಲು ಬಿಡಬೇಕು. ಏನಾದರು ತಪ್ಪುಗಳಿದ್ದರೆ ಜನರ ಮುಂದೆ ತೋರಿಸಬೇಕೇ ಹೊರತು ಸರ್ಕಾರಗಳ ಪತನದ ಬಗ್ಗೆ ಮಾತನಾಡುವುದು ಸರಿಯಲ್ಲ. ನಾವು ಕೆಲಸ ಮಾಡುವುದಕ್ಕಾಗಿ ಜನರು ನಮಗೆ ಮತ ನೀಡಿದ್ದು, ಬಾಯಿ ಮುಚ್ಚಿಕೊಂಡು ಕೆಲಸ ಮಾಡಬೇಕು. ನಾನು ಅದಕ್ಕೆ ತಯಾರಿದ್ದೇನೆ ಎಂದರು.
ಕೇAದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರನ್ನು ಬಿಜೆಪಿಯವರು ಪರಿಗಣಿಸದೆ ಕಡೆಗಣಿಸುತ್ತಿರುವ ವಿಚಾರ ಹೊಸದೇನಲ್ಲ. ಹಿಂದೆಯೂ ಸಾಕಷ್ಟು ಬಾರಿ ಈ ರೀತಿ ಆಗಿದೆ. ಬಿ.ಎಸ್.ಯಡಿಯೂರಪ್ಪ ೨೦ ತಿಂಗಳು ಅಧಿಕಾರ ಕೊಡುವುದಾಗಿ ಹೇಳಿ ಏನೇನು ರಾಮಾಯಣ ಮಾಡಿಕೊಂಡು, ಹೊಡೆದಾಡಿದ್ದ ವಿಚಾರ ಎಲ್ಲರಿಗೂ ಗೊತ್ತಿದೆ. ಆಗಲೇ ಬಿಜೆಪಿಯವರ ಕಥೆ ತಿಳಿದುಕೊಂಡಿದ್ದ ಕುಮಾರಸ್ವಾಮಿ ಪುನಃ ಹೋಗಿ ಸೇರಿಕೊಂಡರೆ, ಹಳೆಯ ಕಥೆಯೇ ಪುನರಾವರ್ತನೆ ಆಗುತ್ತದೆ. ೨೦೦೮ ರಲ್ಲಿ ೧೩ ರಲ್ಲಿ ಆದ ಪರಿಸ್ಥಿತಿಯೇ ಈಗಲೂ ಆಗುತ್ತದೆ ಹೊರತು ಹೊಸದಾಗಿ ಏನೂ ಆಗುವುದಿಲ್ಲ ಎಂದರು.
ಬಿಜೆಪಿ-ಜೆಡಿಎಸ್‌ನವರ ಸ್ನೇಹ ಗಂಡ ಹೆಂಡತಿ ಜಗಳವಿದ್ದಂತೆ. ಬೆಳಗ್ಗೆಯಿಂದ ಸಂಜೆಯವರೆಗೆ ಹೆಂಡತಿಯನ್ನು ನುಣ್ಣಗೆ ಹೊಡೆದರೂ ಸಂಜೆಯಾದ ಬಳಿಕ ಜತೆಯಲ್ಲೇ ಮಲಗುತ್ತಾರೆ. ಅಂದರೆ ರಾತ್ರಿಯಾದರೆ ಅವರಿಬ್ಬರೂ ಒಂದೇ. ನಾವು ಪಾದಯಾತ್ರೆ ಮಾಡುತ್ತೇವೆ, ಆ ವಿಚಾರವಾಗಿ ನೀನು ಈ ಹೇಳಿಕೆ ನೀಡಿ ಎಂದು ಬಿಜೆಪಿಯವರೇ ಹೇಳುತ್ತಾರೆ. ಕುಮಾರಸ್ವಾಮಿ ಅವರ ಕ್ಷೇತ್ರ ಮಂಡ್ಯದಲ್ಲೇ ಪಾದಯಾತ್ರೆ ಹಾದುಹೋಗಲಿದ್ದು, ಅವರಿಗೆ ಪಾದಯಾತ್ರೆಯ ವಿಚಾರ ಗೊತ್ತಿರುವುದಿಲ್ಲವೇ ಎಂದು ಪ್ರಶ್ನಿಸಿದ ಶಾಸಕರು, ಪ್ರವಾಹದ ವಿಚಾರವಾಗಿ ಕ್ರಮಕೈಗೊಂಡು ಜನರಿಗೆ ಸಹಾಯ ಮಾಡಬೇಕಾದ ಸಂದರ್ಭದಲ್ಲಿ ಪಾದಯಾತ್ರೆ ಸರಿಯಲ್ಲ ಎಂದರು.
ಕೇAದ್ರ ಸರ್ಕಾರ ನಮ್ಮ ಜಿಲ್ಲೆಗೆ ಏನೂ ಕೊಡದಿದ್ದರೂ ದುಡಿದು ತಿನ್ನುವ ಶಕ್ತಿಯಿದೆ. ರಾಜ್ಯ ಸರ್ಕಾರದಿಂದಲೇ ಅಭಿವೃದ್ಧಿ ಕಾರ್ಯಗಳನ್ನು ನಡೆಸಲಾಗುತ್ತದೆ. ಸ್ವಾತಂತ್ರ ಬಂದಾಗಿನಿAದ ಕೇಂದ್ರ ಏನು ಮಾಡಿದೆ. ಎಂ.ವಿ.ಕೃಷ್ಣಪ್ಪ ಇದ್ದಾಗ ಬಿಇಎಂಎಲ್ ತಂದಿದ್ದರು, ಅದಾದ ಬಳಿಕ ಏನೂ ಇಲ್ಲ. ಇತ್ತೀಚೆಗೆ ರೈಲ್ವೇ ಕೋಚ್ ಕಾರ್ಖಾನೆ ಹೆಸರು ಹೇಳಿದ್ದರು, ಆದರೆ ಶಂಕುಸ್ಥಾಪನೆಯ ಕಲ್ಲು ಎಲ್ಲಿ ಹೋಯಿತೋ ಗೊತ್ತಿಲ್ಲ ದೂರು ನೀಡಬೇಕಿದೆ ಎಂದು ಹಾಸ್ಯವಾಗಿ ನುಡಿದರು.
ರಾಜ್ಯದಲ್ಲಿ ಸರ್ಕಾರ ಬಂದು ಒಂದು ವರ್ಷ ಕಳೆದಿದ್ದರೂ ಕೋಲಾರ ಜಿಲ್ಲೆ ಯಾವುದೇ ಅಭಿವೃದ್ಧಿ ಕಂಡಿಲ್ಲವೆAದು ನೂತನ ಸಂಸದ ಮಲ್ಲೇಶ್‌ಬಾಬು ಆರೋಪಕ್ಕೆ ಪ್ರತಿಕ್ರಿಯಿಸಿದ ಶಾಸಕರು, ಮಲ್ಲೇಶ್ ಬಾಬು ಸಂಸದರಾಗಿ ಆಯ್ಕೆಯಾಗಿ ಕೇವಲ ೨ ತಿಂಗಳಾಗಿದೆ. ನಗರದಲ್ಲಿ ಯಾವ ರಸ್ತೆಗಳು ಏನಾಗಿವೆ, ಅಭಿವೃದ್ಧಿ ಕಾರ್ಯಗಳು ಯಾವುದು ನಡೆದಿವೆ ಎನ್ನುವುದನ್ನು ಮೊದಲು ಹೋಗಿ ನೋಡಿ ಮಾತನಾಡಲಿ. ಅನುಮಾನವಿದ್ದರೆ ಗುತ್ತಿಗೆದಾರ ಎವಿಜಿ ಅವರನ್ನು ಕೇಳಲಿ. ಅಗತ್ಯವಿದ್ದರೆ ನನ್ನ ಸಲಹೆಯನ್ನು ಪಡೆದುಕೊಳ್ಳಲಿ. ಅದನ್ನು ಬಿಟ್ಟು ಈ ರೀತಿ ಮಾತನಾಡುವುದು ಸರಿಯಲ್ಲ ಎಂದು ತಿರುಗೇಟು ನೀಡಿದರು.
ಚಿತ್ರ ೩೧ ಕೆ.ಎಲ್.ಆರ್. ೦೮ : ಶಾಸಕ ಕೊತ್ತೂರು ಮಂಜುನಾಥ್ ರವರ ಭಾವಚಿತ್ರ