ಚಿಕ್ಕೋಡಿ ಪಟ್ಟಣದಲ್ಲಿ ಅಮೃತ ವಾಟಿಕ ವಸುಧಾ ಕಾರ್ಯಕ್ರಮದಡಿ ಉಪವಿಭಾಗಾಕಾರಿ ಮಾಧವ ಗಿತ್ತೆ ಸಸಿ ನೆಟ್ಟರು. ಮಹಾಂತೇಶ ನಿಡವಣಿ, ಬಿ.ಎ ಮೇಕನಮರಡಿ, ಪ್ರವೀಣ ಕಾಂಬಳೆ ಇತರರಿದ್ದರು. 
ನ್ಯೂಸ್

ಕೆರೆ ಅಭಿವೃದ್ಧಿಗೊಳಿಸಿ ವಾಯುವಿಹಾರಕ್ಕೆ ಅನುವು

ಚಿಕ್ಕೋಡಿ: ಜಿಲ್ಲಾ ಕೇಂದ್ರ ಸ್ಥಾನಮಾನ ಹೊಂದುವ ಅರ್ಹತೆವುಳ್ಳ ಪಟ್ಟಣದ ಹಾಲಟ್ಟಿ ಕೆರೆ ಅಭಿವೃದ್ಧಿಗೊಳಿಸಿ ಸಾರ್ವಜನಿಕರಿಗೆ ವಾಯುವಿಹಾರಕ್ಕಾಗಿ ಅನುಕೂಲ ಕಲ್ಪಿಸಲಾಗುವುದು ಎಂದು ಉಪವಿಭಾಗಾಕಾರಿ ಮಾಧವ ಗಿತ್ತೆ ಹೇಳಿದರು.

ಪಟ್ಟಣದ ಹಾಲಟ್ಟಿ ಕೆರೆಯಲ್ಲಿ ತಾಲೂಕು ಆಡಳಿತ, ಪುರಸಭೆ ಹಾಗೂ ಎಲ್ಲ ಇಲಾಖೆಗಳ ಸಹಯೋಗದಲ್ಲಿ 77ನೆಯ ಸ್ವಾತಂತ್ರ್ಯೋತ್ಸವ ದಿನಾಚರಣೆ ಅಂಗವಾಗಿ ನನ್ನ ಮಣ್ಣು ನನ್ನ ದೇಶ ಶೀರ್ಷಿಕೆಯಡಿ ಭಾನುವಾರ ಹಮ್ಮಿಕೊಂಡಿದ್ದ ವಿಶೇಷ ಸ್ವಚ್ಛತಾ ಅಭಿಯಾನ ಹಾಗೂ ಅಮೃತ ವಾಟಿಕ ವಸುಧಾ ವಂದನೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಆ.16ರಿಂದ ಇನ್ನೂ ಹೆಚ್ಚಿನ ಸ್ವಚ್ಛತೆ ಕೈಗೊಳ್ಳಲು ಯೋಜನೆ ರೂಪಿಸಲಾಗಿದ್ದು, ಸಾರ್ವಜನಿಕರೂ ಸ್ವಯಂಪ್ರೇರಿತವಾಗಿ ಭಾಗವಹಿಸಬಹುದು. ಸಾರ್ವಜನಿಕರಿಗೆ ವಾಯು ವಿಹಾರಕ್ಕೆ ಅನುಕೂಲ ಕಲ್ಪಿಸಲು ಯೋಜನೆ ರೂಪಿಸಿ, ಇನ್ನೂ ಹೆಚ್ಚಿನ ಅಭಿವೃದ್ಧಿ ಕೈಗೊಳ್ಳಲಾಗುವುದು ಎಂದರು.

ಅಮೃತ ವಾಟಿಕ ವಸುಧಾ ವಂದನೆ ಕಾರ್ಯಕ್ರಮದಡಿ ಕೆರೆ ಆವರಣದಲ್ಲಿ ಸಸಿ ನೆಡಲಾಯಿತು. ಬಿಇಒ ಬಿ.ಎ ಮೇಕನಮರಡಿ, ಪುರಸಭೆ ಮುಖ್ಯಾಕಾರಿ ಮಹಾಂತೇಶ ನಿಡವಣಿ, ಸದಸ್ಯರಾದ ಪ್ರವೀಣ ಕಾಂಬಳೆ, ಸಂಜಯ ಕವಟಗಿಮಠ, ಸಂತೋಷ ಜೊಗಳೆ, ಬಾಬು ಮಿರ್ಜೆ, ಪ್ರಾಚಾರ್ಯ ಡಾ.ಬಿ.ಎ.ಪೂಜಾರಿ, ಬಿ.ಪಿ ಕನಿರ್ಂಗ್, ಆರೋಗ್ಯ ನಿರೀಕ್ಷಕ ಟಿ.ಕೆ ಜಮಖಂಡಿ, ಕಾಡೇಶ ಭದ್ರನಾಯಕ, ಎಸ್.ಎ.ಗಂಧ ಇತರರಿದ್ದರು.