ನ್ಯೂಸ್

ಕೆಪಿಎಸ್ಸಿ ಪರೀಕ್ಷೆಯಲ್ಲಿ ಮತ್ತೆ ಯಡವಟ್ಟು / ಒಎಂಆರ್‌ನಲ್ಲಿ ಮುದ್ರಣ ದೋಷ / ೨ಕೇಂದ್ರಗಳಲ್ಲಿ ೧ ಗಂಟೆ ತಡವಾದ ಪರೀಕ್ಷೆ / ಪರೀಕ್ಷಾರ್ಥಿಗಳಿಂದ ಆಕ್ರೋಶ

ವಿಜಯವಾಣಿ ಸುದ್ದಿಜಾಲ ಕೋಲಾರ

ಕೋಲಾರದಲ್ಲಿ ಭಾನುವಾರ ಕೆಪಿಎಸ್‌ಸಿ ನಡೆಸಿರುವ ಗೆಜೆಟೆಡ್ ಪ್ರೋಫೆಷನರಿ ಪರೀಕ್ಷೆಯಲ್ಲಿ ಲೋಪ ಕಂಡು ಬಂದ ಹಿನ್ನಲೆಯಲ್ಲಿ ಪರಿಕ್ಷಾರ್ಥಿಗಳು ತಮ್ಮ ಆಕ್ರೋಷವನ್ನು ವ್ಯಕ್ತಪಡಿಸಿದ ಘಟನೆ ಕೆಲವು ಪ್ರರೀಕ್ಷಾ ಕೇಂದ್ರಗಳಲ್ಲಿ ಕಂಡುಬAದಿತು.

ನಗರದ ಸರ್ಕಾರಿ ಬಾಲಕರ ಕಾಲೇಜು ಮತ್ತು ಮಹಿಳಾ ಕಾಲೇಜು ಪರೀಕ್ಷಾ ಕೇಂದ್ರ ಸೇರಿದಂತೆ ವಿವಿಧೆಡೆ ದೂರುಗಳು ಕೇಳಿಬಂದಿತು.

ಕೆ.ಪಿ.ಎಸ್.ಸಿ.ಯಿಂದ ನೀಡಲಾಗಿದ್ದ ಪ್ರವೇಶ ಪತ್ರದ ಸಂಖ್ಯೆಗೂ ಓಎಂಆರ್ ನಂಬರ್‌ಗೂ ತಾಳೆಯಾಗದೆ ಪರೀಕ್ಷಾ ಕೇಂದ್ರದಲ್ಲಿ ಗೊಂದಲ ಸೃಷ್ಟಿಯಾಯಿತು.

ಸರ್ಕಾರಿ ಬಾಲಕರ ಕಾಲೇಜು ಮತ್ತು ಮಹಿಳಾ ಕಾಲೇಜು ಪರೀಕ್ಷಾ ಕೇಂದ್ರದಲ್ಲಿ ೧೦ ಗಂಟೆಗೆ ಆರಂಭವಾಗಬೇಕಾಗಿದ್ದ ಪರೀಕ್ಷೆ ೧ ಗಂಟೆ ತಡವಾಗಿ ಆರಂಭವಾಯಿತು. ಈ ಮಧ್ಯೆ ಮಹಿಳಾ ಮತ್ತು ಬಾಲಕರ ಕಾಲೇಜಿನ ಪರೀಕ್ಷಾರ್ಥಿಗಳ ಮತ್ತು ಅಧಿಕಾರಿಗಳ ಮಧ್ಯೆ ಮಾತಿನ ಚಕಮಕಿ ನಡೆದು ಓಎಂಆರ್ ಶೀಟ್‌ನಲ್ಲಿ ಅಭ್ಯರ್ಥಿಗಳ ನೋಂದಣಿ ಸಂಖ್ಯೆ ಬದಲಾಗಿದ್ದ ಕಾರಣ ಅಭ್ಯರ್ಥಿಗಳಿಂದಲೇ ಅವರ ನೋಂದಣಿ ಸಂಖ್ಯೆಯನ್ನು ಬರೆಸಿ ಪರೀಕ್ಷೆಯನ್ನು ನಡೆಸಲಾಯಿತು.

ಪರೀಕ್ಷೆಯಿಂದ ಹೊರಬಂದ ಪರೀಕ್ಷಾರ್ಥಿಗಳು ಪ್ರವೇಶ ಪತ್ರದ ಸಂಖ್ಯೆ ಓಎಂಆರ್ ಶೀಟ್‌ನಲ್ಲಿ ಇರಲಿಲ್ಲ. ಇದನ್ನು ಪ್ರಶ್ನೆ ಮಾಡಿದಾಗ ಪರೀಕ್ಷಾ ಕೇಂದ್ರದ ಅಭ್ಯರ್ಥಿಗಳು ಅದನ್ನು ಸರಿಪಡಿಸಿಕೊಂಡು ಬರೆಯಿರಿ ಇಲ್ಲ ಎದ್ದು ಹೋಗಿ ಎಂದು ಧಮಕಿ ಹಾಕಿದರೆಂದು ಆರೋಪಿಸಿದರು.

ಆರೋಪ, ಆಕ್ರೋಶ :

ಕೆಪಿಎಸ್‌ಸಿಯಿಂದ ಈ ಬಾರಿಯೂ ಮತ್ತೆ ಯಾರದೋ ಪರೀಕ್ಷೆಯನ್ನು ಮತ್ತೆ ಯಾರದೋ ಕೈಯಲ್ಲಿ ಬರೆಸುತ್ತಿದ್ದಾರೆ ಎಂಬ ಅನುಮಾನವನ್ನು ಪರೀಕ್ಷಾರ್ಥಿಗಳು ವ್ಯಕ್ತಪಡಿಸಿದರಲ್ಲದೆ ಕೆಪಿಎಸ್‌ಸಿ ಯವರು ಈ ಬಾರಿಯೂ ಯಡವಟ್ಟು ಮಾಡಿದ್ದು, ಸರಿಯಾದ ಪರೀಕ್ಷೆ ನಡೆಸುವಲ್ಲಿ ವಿಫಲರಾಗಿದ್ದಾರೆ ಎಂದು ದೂರಿದರಲ್ಲದೆ ಇದೇ ರೀತಿ ನಾಲ್ಕೆöÊದು ಪರೀಕ್ಷಾ ಕೇಂದ್ರಗಳಲ್ಲಿಯೂ ಇದೇ ಸಮಸ್ಯೆ ಉಂಟಾಗಿದೆ. ಇದರಿಂದ ನೂರಾರು ವಿದ್ಯಾರ್ಥಿಗಳು ಪರಿದಾಡುವ ಸ್ಥಿತಿ ನಿರ್ಮಾಣವಾಗಿದೆ. ನಮ್ಮ ಸಮಸ್ಯೆಯನ್ನು ಆಲಿಸಲು ಸ್ಥಳದಲ್ಲಿ ಯಾವೊಬ್ಬ ಅಧಿಕಾರಿಗಳು ಇರಲಿಲ್ಲ. ನಮಗೆ ಅನ್ಯಾಯವಾಗಿದೆ. ಮತ್ತೊಮ್ಮೆ ಮರುಪರೀಕ್ಷೆ ನಡೆಸಬೇಕೆಂದು ಆಗ್ರಹಿಸಿದರಲ್ಲದೆ ಕೆಪಿಎಸ್‌ಸಿ ಮತ್ತು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು.

೧೪ ಕೇಂದ್ರಗಳಲ್ಲಿ ಪರೀಕ್ಷೆ :

ನಗರದ ೧೪ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಿತು. ಸಾಮಾನ್ಯ ಜ್ಞಾನ ಪೇಪರ್-೧ರ ಪರೀಕ್ಷೆಗೆ ೫೭೧೮ ಮಂದಿ ನೋಂದಣಿ ಮಾಡಿಸಿದ್ದು, ೨೮೧೩ ಮಂದಿ ಪರೀಕ್ಷೆಗೆ ಹಾಜರಾಗಿ ೨೯೦೫ ಮಂದಿ ಗೈರು ಹಾಜರಾಗಿದ್ದರು.

ಮಧ್ಯಾಹ್ನದ ಅವಧಿಯಲ್ಲಿ ನಡೆದ ಪೇಪರ್-೨ ಪರೀಕ್ಷೆಗೆ ನೋಂದಾಯಿಸಿದ್ದ ೨೭೧೮ ಮಂದಿ ಪೈಕಿ ೨೭೯೫ ಮಂದಿ ಹಾಜರಾಗಿದ್ದು, ೨೯೨೩ ಮಂದಿ ಗೈರಾದರು. ಶೇ.೫೦ಕ್ಕಿಂತ ಹೆಚ್ಚು ಅಭ್ಯರ್ಥಿಗಳು ಗೈರಾಗಿರುವುದು ಆಶ್ಚರ್ಯಕರ ಸಂಗತಿಯಾಗಿತ್ತು.

ಬಾಕ್ಸ್

ಸರ್ಕಾರಿ ಬಾಲಕರ ಕಾಲೇಜು ಮತ್ತು ಬಾಲಕಿಯರ ಕಾಲೇಜಿನಿಂದ ಹೊರಬಂದ ಪರೀಕ್ಷಾರ್ಥಿಗಳು ಓಎಂಆರ್ ಶೀಟ್‌ನಲ್ಲಿನ ಸಂಖ್ಯೆ ಮತ್ತು ಪ್ರವೇಶಪತ್ರದಲ್ಲಿರುವ ಸಂಖ್ಯೆ ವ್ಯತ್ಯಾಸವಾಗಿರುವ ಬಗ್ಗೆ ಪ್ರವೇಶಪತ್ರಗಳನ್ನು ಪ್ರದರ್ಶಿಸಿ ಪರೀಕ್ಷೆಯ ಅವ್ಯವಸ್ಥೆಯ ಬಗ್ಗೆ ಅಸಮಾಧಾನ ಹೊರ ಹಾಕಿದರು. ಕಳೆದ ಬಾರಿಯೂ ಕೆಪಿಎಸ್ಸಿ ಯಡವಟ್ಟಿನಿಂದ ಪರೀಕ್ಷೆ ಮುಂದೂಡಲಾಗಿದ್ದು, ಇದೀಗ ಮತ್ತೆ ಸಮಸ್ಯೆ ಎದುರಾಗಿರುವ ಕುರಿತು ಅಭ್ಯರ್ಥಿಗಳು ಆಕ್ರೋಷ ವ್ಯಕ್ತಪಡಿಸಿದರು.

ಕೋಟ್

ಪರೀಕ್ಷಾ ಕೇಂದ್ರದಲ್ಲಿ ಯಡವಟ್ಟು ಆಗಿದ್ದಕ್ಕೆ ಅಧಿಕಾರಿಗಳನ್ನು ಪ್ರಶ್ನಿಸಿದರೆ ಧಮಕಿ ಹಾಕುವ ಕೆಲಸ ಮಾಡಿದ್ದಾರೆ. ಕೆ.ಪಿ.ಎಸ್.ಸಿ. ಯವರು ನಡೆಸಿರುವ ಪರೀಕ್ಷೆ ಬಗ್ಗೆ ಅನುಮಾನವಿದೆ. ಮತ್ತೊಮ್ಮೆ ಪರೀಕ್ಷೆ ನಡೆಸಬೇಕು. ಓಎಂಆರ್ ಶೀಟ್‌ನಲ್ಲಿ ಮತ್ತು ಪ್ರವೇಶ ಪತ್ರಸಂಖ್ಯೆ ಬದಲಾವಣೆಯಾಗಿತ್ತು. ಇದರಿಂದಲೂ ನಮಗೆ ಅನುಮಾನ ಮೂಡುವಂತಾಗಿದೆ. ನಮ್ಮ ಸಮಸ್ಯೆಯನ್ನು ಆಲಿಸುವವರೇ ಪರೀಕ್ಷಾ ಕೇಂದ್ರದಲ್ಲಿ ಇರಲಿಲ್ಲ.

-ನಯನ, ಪರೀಕ್ಷಾರ್ಥಿ

ಚಿತ್ರ ೨೯ ಕೆ.ಎಲ್.ಆರ್. ೦೫ : ನಗರದ ಸರ್ಕಾರಿ ಬಾಲಕರ ಕಾಲೇಜು ಮುಂಭಾಗ ಕೆಪಿಎಸ್‌ಸಿನವರು ನಡೆಸಿದ ಪರೀಕ್ಷೆ ಯಡವಟ್ಟು ಉಂಟಾಗಿರುವ ಬಗ್ಗೆ ಆಕ್ರೋಷ ವ್ಯಕ್ತಪಡಿಸಿದ ಪರೀಕ್ಷಾರ್ಥಿಗಳು

ಚಿತ್ರ ೨೯ ಕೆ.ಎಲ್.ಆರ್. ೦೫ಎ : ಪರೀಕ್ಷಾರ್ಥಿಗಳು ಪ್ರವೇಶಪತ್ರಗಳನ್ನು ಪ್ರದರ್ಶಿಸುತ್ತಿರುವುದು.

ಚಿತ್ರ ೨೯ ಕೆ.ಎಲ್.ಆರ್. ೦೫ಬಿ : ನಯನ, ಪರೀಕ್ಷಾರ್ಥಿ ಭಾವಚಿತ್ರ