ನ್ಯೂಸ್

ಕೆಐಎ ರೈಲ್ವೆ ನಿಲ್ದಾಣ ಉದ್ಘಾಟನೆಗೆ ಸಿದ್ಧ

& ಅಶೋಕ್​ ಕುಮಾರ್​ ವರ್ಮಾ, ಬೆಂಗಳೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕ

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪದ ಹಾಲ್ಟ್​ ರೈಲು ನಿಲ್ದಾಣ ಕಾಮಗಾರಿ ಪೂರ್ಣಗೊಂಡಿದ್ದು, ಉದ್ಘಾಟನೆಗೆ ಸಿದ್ಧವಿದೆ. ಕೇಂದ್ರ ರೈಲ್ವೆ ಸಚಿವಾಲಯದ ಅನುಮತಿಗೆ ಕಾಯಲಾಗುತ್ತಿದ್ದು, ಸಿಕ್ಕ ನಂತರ ಸೇವೆ ಆರಂಭಿಸಲಾಗುವುದು.

ಕೋಟ್​:

ರೈಲು ನಿಲ್ದಾಣದಿಂದ ವಿಮಾನನಿಲ್ದಾಣದ ನಡುವೆ ಬಿಎಂಟಿಸಿ ಶೆಟಲ್​ ಬಸ್​ ಸೇವೆ ಆರಂಭಿಸುವ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ. ಬಿಎಂಟಿಸಿ ಅಧಿಕಾರಿಗಳೊಂದಿಗೆ ರೈಲ್ವೆ ಮತ್ತು ಬಿಐಎಎಲ್​ ಅಧಿಕಾರಿಗಳು ಈಗಾಗಲೆ ಚರ್ಚೆ ನಡೆಸಿದ್ದಾರೆ. ಬಿಎಂಟಿಸಿ ಇನ್ನೂ ಯಾವುದೇ ತೀರ್ಮಾನ ಕೈಗೊಂಡಿಲ್ಲ. ರೈಲು ಸಂಚಾರ ಸಮಯ, ಪ್ರಯಾಣಿಕರ ಸಂಖ್ಯೆ ಮೊದಲಾದ ಅಂಶಗಳನ್ನು ಗಮನಿಸಿ ಬಸ್​ ಸಂಚಾರ ವೇಳಾಪಟ್ಟಿ ಸಿದ್ಧಪಡಿಸಬೇಕಾಗುತ್ತದೆ. ಅದೆಲ್ಲವೂ ಅಂತಿಮವಾದ ನಂತರ ಬಸ್​ ಸೇವೆ ನೀಡುವ ಬಗ್ಗೆಯೂ ಪ್ರಕಟಿಸಲಾಗುವುದು ಎಂದು ಬಿಎಂಟಿಸಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬಸ್​ ಸೇವೆ:

2019ರ ಜೂನ್​ನಲ್ಲಿ ಆರಂಭಿಸಲಾದ ಕಾಮಗಾರಿ, ಡಿಸೆಂಬರ್​ನಲ್ಲಿ ಪೂರ್ಣಗೊಳ್ಳಬೇಕಿತ್ತು. ತಾಂತ್ರಿಕ ಕಾರಣಗಳಿಂದ ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. ಹೀಗಾಗಿ 2020ರ ಏಪ್ರಿಲ್​ ಅಂತ್ಯಕ್ಕೆ ಗಡುವು ನೀಡಲಾಗಿತ್ತು. ಆ ವೇಳೆಯಲ್ಲಿ ಕರೊನಾ ಸೋಂಕು ಕಾಣಿಸಿಕೊಂಡ ಕಾರಣ ಕಾಮಿರ್ಕರ ಕೊರತೆ ಉಂಟಾಗಿ ಕಾಮಗಾರಿ ನಡೆಸಲು ಸಾಧ್ಯವಾಗಲಿಲ್ಲ. ಇದೀಗ ಕಾಮಗಾರಿ ಪೂರ್ಣಗೊಂಡಿದ್ದು, ಶ್ರೀದಲ್ಲಿ ಉದ್ಘಾಟನೆಗೊಳ್ಳಲಿದೆ.

ನೈಋತ್ಯ ರೈಲ್ವೆ ಹಾಗೂ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನನಿಲ್ದಾಣ ಸಂಸ್ಥೆ (ಬಿಐಎಎಲ್​) ಸಹಯೋಗದಲ್ಲಿ 3 ಕೋಟಿ ರೂ. ವೆಚ್ಚದಲ್ಲಿ ಈ ನಿಲ್ದಾಣ ನಿಮಿರ್ಸಲಾಗಿದೆ. ನಿಲ್ದಾಣವನ್ನು ಬಿಐಎಎಲ್​ ಸುಸಜ್ಜಿತವಾಗಿ ನಿಮಿರ್ಸಿದೆ. ನೂತನ ರೈಲು ನಿಲ್ದಾಣ ಕೆಐಎಯಿಂದ 4.5 ಕಿ.ಮೀ. ದೂರದಲ್ಲಿದೆ. ಸೇವೆ ಆರಂಭದ ನಂತರ ವಿಮಾನ ಪ್ರಯಾಣಿಕರು 10ರಿಂದ 15 ನಿಮಿಷದಲ್ಲಿ ವಿಮಾನ ನಿಲ್ದಾಣ ತಲುಪಬಹುದಾಗಿದೆ. ರೈಲು ನಿಲ್ದಾಣದ ಪ್ಲಾಟ್​ಫಾಮ್​ರ್ನಲ್ಲಿ ಟಿಕೆಟ್​ ಕೌಂಟರ್​, ರ್ಯಾಂಪ್​, ಓಪನ್​ ಪಾಕಿರ್ಂಗ್​, 10 ನೀರಿನ ಟಕ, 10 ಬೆಂಚ್​ಗಳು, ಶೌಚಗೃಹ ಸೇರಿ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗಿದೆ.

ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎ)ಕ್ಕೆ ತೆರಳುವ ಪ್ರಯಾಣಿಕರ ಅನುಕೂಲಕ್ಕಾಗಿ ಯಲಹಂಕ& ದೇವನಹಳ್ಳಿ ನಡುವೆ ನಿಮಿರ್ಸಲಾಗಿರುವ ಹಾಲ್ಟ್​ ರೈಲು ನಿಲ್ದಾಣ ಉದ್ಘಾಟನೆಗೆ ಸಜ್ಜುಗೊಂಡಿದ್ದು, ಶ್ರೀದಲ್ಲಿ ಸೇವೆಗೆ ಮುಕ್ತವಾಗಲಿದೆ.