ಬನ್ನೂರು: ಕೆಂಪೇಗೌಡರ ಪುತ್ಥಳಿ ನಿರ್ಮಾಣದಿಂದ ಅತ್ತಹಳ್ಳಿ ಗ್ರಾಮದ ಜನರಿಗೆ ಶಕ್ತಿ ಬಂದಂತಾಗಿದೆ ಎಂದು ಆದಿಚುಂಚನಗಿರಿ ಮೈಸೂರು ಶಾಖಾ ಮಠದ ಶ್ರೀಸೋಮನಾಥ ಸ್ವಾಮೀಜಿ ಹೇಳಿದರು.
ಕೆಂಪೇಗೌಡರ 514ನೇ ಜನ್ಮದಿನದ ಅಂಗವಾಗಿ ಪಟ್ಟಣದ ಸಮೀಪದ ಅತ್ತಹಳ್ಳಿ ಗ್ರಾಮದಲ್ಲಿ ಕೆಂಪೇಗೌಡರ ಪ್ರತಿಮೆ ಅನಾವರಣಗೊಳಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಬಹುಶಃ ಅತ್ತಹಳ್ಳಿ ಗ್ರಾಮದಲ್ಲಿ ಮಾತ್ರ ಕೆಂಪೇಗೌಡರ ಪುತ್ಥಳಿ ನಿರ್ಮಿಸಲಾಗಿದೆ. ಕೆಂಪೇಗೌಡರ ಆಲೋಚನೆಗಳನ್ನು ಯುವಶಕ್ತಿ ಮೈಗೂಡಿಸಿಕೊಳ್ಳಬೇಕು ಎಂದರು.
ಸಮಾಜ ಸೇವಕ ವೈ.ಎಸ್. ರಾಮಸ್ವಾಮಿ, ಮಹೇಂದ್ರಸಿಂಗ್ ಕಾಳಪ್ಪ ಮಾತನಾಡಿದರು. ಮುಖಂಡರಾದ ಅತ್ತಹಳ್ಳಿ ಕೆಂಪೇಗೌಡ, ಮಹೇಶ್, ಸುನೀಲ್ ಇತರರಿದ್ದರು.