ವಿಜಯವಾಣಿ ಸುದ್ದಿಜಾಲ ಕೋಲಾರ
ಎನ್.ಮುನಿವೆಂಕಟೇಗೌಡ
ಕೆ.ಸಿ.ವ್ಯಾಲಿಯ ೨ನೇ ಹಂತದಲ್ಲಿ ಜಿಲ್ಲೆಯ ೨೭೨ ಕೆರೆಗಳಿಗೆ ನೀರು ಹರಿಸಬೇಕಾಗಿದ್ದು, ಇದಕ್ಕಾಗಿ ೪೩೬ ಕೋಟಿ ರೂ.ಗಳ ವೆಚ್ಚದಲ್ಲಿ ಕಾಮಗಾರಿಗಳು ಪೂರ್ಣಗೊಂಡಿದ್ದು, ದೀಪಾವಳಿ ಹಬ್ಬದ ಒಳಗಾಗಿ ಎಲ್ಲಾ ಕೆರೆಗಳಿಗೆ ನೀರು ಹರಿಸಲು ಸರ್ಕಾರ ಮುಂದಾಗಿದೆ.
ಈಗಾಗಲೇ ಜಿಲ್ಲೆಯಲ್ಲಿ ೧ನೇ ಹಂತದಲ್ಲಿ ೧೪೫ ಕೆರೆಗಳಿಗೆ ನೀರು ಹರಿಸಲಾಗಿತ್ತು. ಬೆಂಗಳೂರಿನಿAದ ೨ನೇ ಹಂತದಲ್ಲಿ ಶುದ್ಧೀಕರಣಗೊಂಡು ಬರುತ್ತಿದ್ದ ನೀರಿನ ಯಂತ್ರಗಳು ದುರಸ್ಥಿಯಾದ ಕಾರಣ ಕಳೆದ ಒಂದು ವರ್ಷದಿಂದ ನಮಗೆ ಬರಬೇಕಾಗಿದ್ದ ನೀರಿನ ಪ್ರಮಾಣ ಕಡಿಮೆಯಾದ ಕಾರಣ ಕೆರೆಗಳಲ್ಲಿ ನೀರು ಖಾಲಿಯಾಗಿತ್ತು. ೨ನೇ ಹಂತದ ಕಾಮಗಾರಿಗಳು ನಡೆಯುತ್ತಿದ್ದವು.
೧ನೇ ಹಂತದಲ್ಲಿ ಬರುತ್ತಿದ್ದ ಕೆರೆಗಳಿಗೆ ನೀರು ಕಡಿಮೆಯಾದ ಕಾರಣ ಸಾರ್ವಜನಿಕರು ಜನಪ್ರತಿನಿಧಿಗಳ ಮೇಲೆ ಒತ್ತಡ ತಂದು ಕೆರೆಗಳಿಗೆ ನೀರು ತುಂಬಿಸಬೇಕೆAದು ಒತ್ತಾಯಪಡಿಸಿದ್ದರು. ಕೆ.ಸಿ.ವ್ಯಾಲಿಯ ರೂವಾರಿ ಮಾಜಿ ಸ್ಪೀಕರ್ ರಮೇಶ್‌ಕುಮಾರ್ ಸೋಲಿನ ನಂತರ ಕೆ.ಸಿ.ವ್ಯಾಲಿನ ನೀರಿನ ಬಗ್ಗೆ ಜಿಲ್ಲೆಯ ಜನಪ್ರತಿನಿಧಿಗಳ ಇಚ್ಛಾಶಕ್ತಿ ಕಡಿಮೆಯಾದ ಕಾರಣ ೧ನೇ ಹಂತದಲ್ಲಿ ತುಂಬಿದ್ದ ೧೪೫ ಕೆರೆಗಳಲ್ಲಿ ನೀರು ಕಡಿಮೆಯಾಗಿತ್ತು.
ಕಳೆದ ಜುಲೈ ತಿಂಗಳಲ್ಲಿ ರಮೇಶ್‌ಕುಮಾರ್ ಮತ್ತೆ ಕೆ.ಸಿ.ವ್ಯಾಲಿ ನೀರಿನ ಪ್ರಮಾಣ ಕಡಿಮೆಯಾಗಿರುವ ಮತ್ತು ದುರಸ್ಥಿ ಕೇಂದ್ರಕ್ಕೆ ಭೇಟಿ ನೀಡಿ, ಅಧಿಕಾರಿಗಳೊಂದಿಗೆ ಚರ್ಚಿಸಿದ ನಂತರ ಮುಖ್ಯಮಂತ್ರಿಗಳ ಮತ್ತು ನೀರಾವರಿ ಸಚಿವರೊಂದಿಗೆ ಚರ್ಚೆ ನಡೆಸಿದ ನಂತರ ದುರಸ್ಥಿ ಕಾರ್ಯ ಪೂರ್ಣಗೊಂಡಿದ್ದು, ಈಗ ೨೯೦ ಎಂ.ಎಲ್.ಡಿ. ನೀರು ಕೆರೆಗಳಿಗೆ ಬರುತ್ತಿದೆ. ಇದರಿಂದ ೧೪೫ ಕೆರೆಗಳಲ್ಲಿಯೂ ನೀರು ಈಗ ಲಭ್ಯತೆ ಇದೆ.
೨ನೇ ಹಂತದಲ್ಲಿ ೧೭೨ ಕೆರೆಗಳಿಗೆ ನೀರು ಹರಿಸಬೇಕಾಗಿದ್ದು, ಈಗಾಗಲೇ ಹಾಲಿ ಕೆರೆಗಳಿಂದ ನೀರನ್ನು ಲಿಫ್ಟ್ ಮಾಡಬೇಕಾಗಿರುವುದರಿಂದ ೯ ಪಂಪ್‌ಹೌಸ್‌ಗಳ ಕಾಮಗಾರಿ ಪೂರ್ಣಗೊಂಡಿದ್ದು, ವಿದ್ಯುತ್ ಸಂಪರ್ಕ ಮಾತ್ರ ಬಾಕಿ ಇದ್ದು, ಒಂದು ತಿಂಗಳ ಒಳಗಾಗಿ ವಿದ್ಯುತ್ ಸಂಪರ್ಕ ಕಾಮಗಾರಿ ಪೂರ್ಣಗೊಂಡ ನಂತರ ಪೈಪ್ ಲೈನ್ ಮೂಲಕ ನೀರನ್ನು ದೀಪಾವಳಿ ಹಬ್ಬದ ಒಳಗಾಗಿ ಹರಿಸಲು ಸರ್ಕಾರ ಮುಂದಾಗಿದೆ.
೯ ಪಂಪ್‌ಹೌಸ್‌ಗಳು :
ಮುದುವಾಡಿ, ಯದರೂರು, ಸೋಮಯಾಜಲಹಳ್ಳಿ, ಕೊರಟಹಳ್ಳಿ, ಅಮ್ಮೇರಹಳ್ಳಿ, ಪೌತನಹಳ್ಳಿ, ಕುಂಡೇನಹಳ್ಳಿ, ಬೇತಮಂಗಲ, ಲಕ್ಷಿö್ಮÃಸಾಗರ ಕೆರೆಗಳ ಬಳಿ ನಿರ್ಮಾಣಗೊಂಡಿರುವ ಪಂಪ್‌ಹೌಸ್‌ಗಳ ಕಾಮಗಾರಿಗಳು ಪೂರ್ಣಗೊಂಡಿವೆ.
೨೨೧ ಕಿ.ಮೀ ಪೈಪ್‌ಲೈನ್ :
ಈ ಪಂಪ್‌ಹೌಸ್‌ಗಳಿAದ ೨೨೧ ಕಿ.ಮೀ ಪೈಪ್‌ಲೈನ್ ಮೂಲಕ ಕೆರೆಗಳಿಗೆ ನೀರು ಹರಿಬಿಡಲಾಗುವುದು. ಈಗಾಗಲೇ ಪೈಪ್‌ಲೈನ್ ಕಾಮಗಾರಿಗಳು ಪೂರ್ಣಗೊಂಡಿದೆ.
೩೦೮ ಕಿ.ಮೀ ರಾಜಕಾಲುವೆ :
ಕೆರೆಯಿಂದ ಕೆರೆಗೆ ನೀರು ಹರಿಸಲು ೩೦೮ ಕಿ.ಮೀ ರಾಜಕಾಲುವೆಗಳ ಕಾಮಗಾರಿಗಳು ನಡೆಯುತ್ತಿವೆ. ಈ ಕಾಮಗಾರಿಗಳು ಒಂದು ತಿಂಗಳ ಒಳಗಾಗಿ ಪೂರ್ಣಗೊಳ್ಳಲಿವೆ.
೨ನೇ ಹಂತದಲ್ಲಿ ಯಾವ ತಾಲ್ಲೂಕಿಗೆ ಎಷ್ಟು ಕೆರೆಗಳಿಗೆ ನೀರು :
ಶ್ರೀನಿವಾಸಪುರ ತಾಲ್ಲೂಕಿಗೆ ೭೯, ಮಾಲೂರಿಗೆ ೩೨, ಮುಳಬಾಗಿಲು ೩೩, ಕೆ.ಜಿ.ಎಫ್. ೧೧, ಬಂಗಾರಪೇಟೆ ೧೩ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನ ೫೦ ಕೆರೆಗಳಿಗೆ ೨ನೇ ಹಂತದ ಯೋಜನೆಯಲ್ಲಿ ನೀರು ಹರಿಸಲಾಗುತ್ತಿದೆ.
೨೯೦ ಎಂ.ಎಲ್.ಡಿ. ನೀರಿನಿಂದಲೇ ಎಲ್ಲಾ ಕೆರೆಗಳಿಗೂ ನೀರು ಹರಿಸಲು ಸಾಧ್ಯ :
ಕೋಲಾರಕ್ಕೆ ಯೋಜನೆಯಿಂದ ಬರಬೇಕಾಗಿದ್ದ ನೀರಿನ ಪಾಲು ೪೦೦ ಎಂ.ಎಲ್.ಡಿ. ಆದರೆ ಈಗ ಪ್ರಸ್ತುತ ಜಿಲ್ಲೆಗೆ ಬರುತ್ತಿರುವ ನೀರಿನ ಪ್ರಮಾಣ ೨೯೦ನ ಎಂ.ಎಲ್.ಡಿ. ಆದರೂ ಕೆರೆಗಳಿಗೆ ನೀರು ಲಭ್ಯ ಆಗುತ್ತಿದೆ. ಮೊದಲನೇ ಹಂತದಲ್ಲಿ ನೀರು ಕೆರೆಗಳಿಗೆ ಹರಿಬಿಟ್ಟಲ್ಲಿ ಕೆರೆಗಳು ಬತ್ತಿಹೋದ ಕಾರಣ ನೀರಿನ ಶೇಖರಣೆ ತಡವಾಯಿತು. ಈಗ ಎಲ್ಲಾ ಕೆರೆಗಳಿಗೆ ನೀರು ಲಭ್ಯವಿರುವುದರಿಂದ ೨ನೇ ಹಂತದ ಕೆರೆಗಳಿಗೆ ನೀರು ಪೈಪ್‌ಲೈನ್ ಮೂಲಕ ಹರಿಸಲಾಗುತ್ತಿರುವುದರಿಂದ ೨೯೦ ಎಂ.ಎಲ್.ಡಿ. ಸಾಕಾಗುತ್ತದೆ ಎಂಬುದು ಅಧಿಕಾರಿಗಳ ಮಾತಾಗಿದೆ.
೩ನೇ ಹಂತದ ಶುದ್ಧೀಕರಣಕ್ಕೆ ಒತ್ತಾಯ :
೩ನೇ ಹಂತದ ಶುದ್ಧೀಕರಣ ಆಗಲೇಬೇಕು ಎಂಬುದು ರೈತರ ಅಭಿಪ್ರಾಯ ಹಾಗೂ ಒತ್ತಾಯ ಇದನ್ನೇ ಕೆಲವು ಶಾಸಕರ ಒತ್ತಾಯವೂ ಮಾಡುತ್ತಿದ್ದಾರೆ. ೩ನೇ ಹಂತದ ಶುದ್ಧೀಕರಣ ಮಾಡಿದರೆ ಜನರಲ್ಲಿರುವ ತಾರತಮ್ಯ ನಿವಾರಣೆ ಮಾಡಿದಂತೆ ಆಗುತ್ತದೆ. ಕೆಲವರ ತಲೆಯಲ್ಲಿ ೩ನೇ ಹಂತದ ಶುದ್ಧೀಕರಣ ಎಂಬುದು ಮೂಡಿರುವುದರಿಂದ ಮತ್ತೆ ವಿವಾದಕ್ಕೆ ಅವಕಾಶ ಇಲ್ಲದಂತೆ ಆಗುತ್ತದೆ. ಸರ್ಕಾರ ೩ನೇ ಹಂದತ ಶುದ್ಧೀಕರಣ ಮಾಡಿದರೆ ಸರ್ಕಾರಕ್ಕೂ ಒಳ್ಳೆಯು ಹೆಸರು ಬರುತ್ತದೆ. ರೈತರಿಗೂ ಅನುಕೂಲವಾಗುತ್ತದೆಂಬುದು ರೈತರ ಒತ್ತಾಯವೂ ಆಗಿದೆ.
ಚಿತ್ರ ೨೮ ಕೆ.ಎಲ್.ಆರ್. ೦೩ : ಮುದುವಾಡಿ ಬಳಿ ನಿರ್ಮಾಣಗೊಂಡಿರುವ ಪಂಪ್‌ಹೌಸ್ ಕಾಮಗಾರಿ ಪೂರ್ಣಗೊಂಡಿರುವುದು
ಚಿತ್ರ ೨೮ ಕೆ.ಎಲ್.ಆರ್. ೦೩ಎ : ಮುದುವಾಡಿ ಕೆರೆ ಮತ್ತೆ ಭರ್ತಿಯಾಗಿರುವುದು.