ವಿಜಯವಾಣಿ ಸುದ್ದಿಜಾಲ ಕೋಲಾರ
ಕೆ.ಸಿ.ವ್ಯಾಲಿ ನೀರಿನ ಹರಿವು ಪ್ರಮಾಣ ಹೆಚ್ಚಾಗಿದ್ದು, ಕೆರೆಯಿಂದ ಕೆರೆಗೆ ನೀರು ಹರಿಯುತ್ತಿದೆ. ರಾಜಕಾಲುವೆಗಳು ದುರಸ್ಥಿ ಕಾಣದೇ ಇರುವುದರಿಂದ ರಾಜಕಾಲುವೆಗಳ ಅಕ್ಕ ಪಕ್ಕದರುವ ಜಮೀನುಗಳಿಗೆ ನೀರು ನುಗ್ಗುವಂತಾಗಿದೆ. ಇದರಿಂದ ನೀರು ವ್ಯರ್ಥವಾಗುತ್ತಿದ್ದು, ಕೆರೆಗಳು ತುಂಬುವುದು ಸಹ ತಡವಾಗುತ್ತಿದೆ.
ಇತ್ತೀಚೆಗೆ ಕೆ.ಸಿ.ವ್ಯಾಲಿ ನೀರು ೩೫೦ ಎಂ.ಎಲ್.ಡಿ.ಗಿAತ ನೀರು ಹೆಚ್ಚಾಗಿ ಬರುತ್ತಿರುವುದರಿಂದ ಕೆ.ಸಿ.ವ್ಯಾಲಿ ವ್ಯಾಪ್ತಿಗೆ ಬರುವ ಕೆರೆಗಳು ಕೋಡಿ ಬಿದ್ದು, ಆ ಕೆರೆಯ ಸಾಲಿನಲ್ಲಿರುವ ಇತರೆ ಕೆರೆಗಳಿಗೂ ನೀರು ಹರಿಯುತ್ತಿದೆ. ಕೆರೆಯಿಂದ ಕೆರೆಗೆ ನೀರು ಹರಿಯುವ ರಾಜಕಾಲುವೆಗಳು ದುರಸ್ಥಿಗೊಂಡು ವರ್ಷಗಳೇ ಕಳೆದಿವೆ. ಅದೇ ಕಾಲುವೆಗಳಲ್ಲಿ ನೀರು ಹರಿಯುತ್ತಿರುವುದರಿಂದ ಕಾಲುವೆಗಳು ಸ್ವರೂಪ ಕಳೆದುಕೊಂಡಿರುವ ಕಾರಣ ನೀರು ರೈತರ ಹೊಲಗಳಿಗೆ ನುಗ್ಗುವಂತಾಗಿದೆ.
ಇತ್ತೀಚೆಗೆ ಮುದುವಾಡಿ ಕೆರೆಯಿಂದ ಚಿಲ್ಲಪ್ಪನಹಳ್ಳಿ ಕೆರೆ ಹೋಗುವ ರಾಜಕಾಲುವೆ ದುರಸ್ಥಿ ಇಲ್ಲದ ಕಾರಣ ನೀರು ರೈತರ ತೋಟಗಳಿಗೆ ನುಗ್ಗಿ ಬೆಳೆ ಹಾನಿ ಆಗಿತ್ತು. ರೈತರು ಸಹ ರಾಜಕಾಲುವೆಗಳನ್ನು ಒತ್ತುವರಿ ಮಾಡಿಕೊಂಡಿರುವುದರಿAದ ನೀರು ಕೆರೆಯಿಂದ ಕೆರೆಗೆ ಸರಾಗಾವಾಗಿ ಹರಿಯುವುದು ತಡವಾಗುತ್ತಿದೆ. ಇದರಿಂದ ಕೆರೆ ತುಂಬುವುದು ಸಹ ತಡವಾಗುತ್ತಿದೆ.
ಕೆ.ಸಿ.ವ್ಯಾಲಿ ಯೋಜನೆಯಲ್ಲಿ ಕೆರೆ ದುರಸ್ಥಿ, ಕಟ್ಟೆ ದುರಸ್ಥಿ, ರಾಜಕಾಲುವೆ ದುರಸ್ಥಿ ಸೇರಿದ್ದರೂ ಸಹ ಪೈಪ್‌ಲೈನ್ ಅಳವಡಿಸುವುದರಲ್ಲಿ ಕಾಲಕಳೆಯುತ್ತಿರುವ ಯೋಜನೆಯ ಗುತ್ತಿಗೆ ಪಡೆದಿರುವ ಗುತ್ತಿಗೆದಾರರು ರಾಜಕಾಲುವೆಯ ದುರಸ್ಥಿಗಳಿಗೆ ಕೈಹಾಕಿಲ್ಲ.
೧ನೇ ಹಂತದ ಯೋಜನೆಯಲ್ಲಿ ಕೆರೆಗಳಿಗೆ ನೀರು ಬಂದ ಸಂದರ್ಭದಲ್ಲಿ ತರಾತುರಿಯಲ್ಲಿ ಆ ವ್ಯಾಪ್ತಿಗೆ ಸೇರುವ ಕೆರೆಕಟ್ಟೆಗಳನ್ನು ತಾತ್ಕಾಲಿಕವಾಗಿ ದುರಸ್ಥಿಗೊಳಿಸಿದರು. ಕೆಲವು ಕೆರೆಗಳಲ್ಲಿ ಗಿಡಗಂಟೆಗಳನ್ನು ತೆರವು ಮಾಡಲಿಲ್ಲ. ಹಾಗಿಯೇ ನೀರು ಹರಿಸಿದರು. ರಾಜಕಾಲುವೆಗಳಲ್ಲಿ ನೇಮಕಾವಾಸ್ತೆಗಾಗಿ ಜೆಸಿಬಿಗಳು ಘರ್ಜನೆ ಮಾಡಿದವೇ ಹೊರತು ರಾಜಕಾಲುವೆಗಳಲ್ಲಿ ವರ್ಷಾನುಗಟ್ಟಲೆ ಬೆಳೆದು ನಿಂತಿರುವ ಗಿಡಗಂಟೆಗಳನ್ನು ತೆರವು ಮಾಡಲಿಲ್ಲ. ಇದರಿಂದ ಹರಿಯುವ ನೀರಿಗೆ ಅಡಚಣೆ ಉಂಟಾಗಿ ಕೆರೆಗಳು ತುಂಬುವುದು ತಡವಾಯಿತು.
೨ನೇ ಹಂತದ ಯೋಜನೆ ಈಗಾಗಲೇ ಸಿದ್ಧವಾಗಿದ್ದು, ಪೈಪ್‌ಲೈನ್ ಅಳವಡಿಸುವ ಕಾರ್ಯ ಮುಗಿದಿದೆ. ಆದರೆ ರಾಜಕಾಲುವೆಗಳ ದುರಸ್ಥಿ ಕಾರ್ಯ ಕೈಗೆತ್ತಿಕೊಂಡಿಲ್ಲ. ೨ನೇ ಹಂತದ ಯೋಜನೆಯಲ್ಲಿ ನೀರು ಕೆರೆಗಳಿಗೆ ಹರಿಸಿದರೆ ನೀರು ರಾಜಕಾಲುವೆಗಳಲ್ಲಿ ಹಿಂಗಿ ಹೋಗುತ್ತವೆ. ಹಾಗೂ ರೈತರ ತೋಟಗಳಿಗೂ ನುಗ್ಗುವುದು ಗ್ಯಾರಂಟಿಯಾಗಿದೆ. ಈಗಲೇ ಅಧಿಕಾರಿಗಳು ಎಚ್ಚೆತ್ತುಕೊಂಡು ರಾಜಕಾಲುವೆಗಳ ದುರಸ್ಥಿ ಕಾಯ ಕೈಗೆತ್ತಿಕೊಳ್ಳಬೇಕಾಗಿದೆ. ಹಾಗೂ ಕೆರೆಗಳಲ್ಲಿ ಬೆಳೆದು ನಿಂತಿರುವ ಪೊದೆಗಳನ್ನು ತೆರವುಗೊಳಿಸುವಂತಹ ಕಾರ್ಯ ಮಾಡಬೇಕಾಗಿದೆ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಕೆ.ಸಿ.ವ್ಯಾಲಿಯ ಮೂಲ ಕೆರೆಯಾದ ಲಕ್ಷಿö್ಮÃಸಾಗರದಿಂದ ನರಸಾಪುರ ಮಾರ್ಗವಾಗಿ ಅಗ್ರಹಾರ ಕೆರೆ ತಲುಪುವ ರಾಜಕಾಲುವೆಯು ದುರಸ್ಥಿಯಾಗಬೇಕಾಗಿದೆ. ಈಗಾಗಲೇ ನಿರಂತರವಾಗಿ ಈ ಕಾಲುವೆಯಲ್ಲಿ ನೀರು ಹರಿಯುತ್ತಿರುವುದರಿಂದ ಕಾಲುವೆ ಅಕ್ಕಪಕ್ಕಗಳಲ್ಲಿ ಗಿಡಗಂಟೆಗಳು ಪೊದೆಗಳಾಗಿ ಬೆಳೆದುನಿಂತಿವೆ. ಇದರಿಂದ ಹಸಿರು ಹೆಚ್ಚಾಗಿ ಗ್ರಾಮಗಳಲ್ಲಿ ಸೊಳ್ಳೆಗಳ ಕಾಟ ಹೆಚ್ಚಾಗಿದೆ. ಹರಿಯುವ ನೀರಿನ ರಾಜಕಾಲುವೆಗಳನ್ನು ಸ್ವಚ್ಛತೆ ಮಾಡಬೇಕಾಗಿದೆ ಎಂಬುದು ರೈತರ ಒತ್ತಾಯವಾಗಿದೆ.
ಚಿತ್ರ ೦೫ ಕೆ.ಎಲ್.ಆರ್. ೦೩ : ರಾಜಕಾಲುವೆಗಳು ದುರಸ್ಥಿ ಕಾಣದೆ ಇರುವುದರಿಂದ ಕೆ.ಸಿ.ವ್ಯಾಲಿ ನೀರು ರಾಜಕಾಲುವೆ ಬಿಟ್ಟು ಹರಿಯುತ್ತಿರುವುದು.