ನ್ಯೂಸ್

ಕೆ.ಜಿ.ಎಫ್. ರಾಜಕುಮಾರ್ ವೃತ್ತದಿಂದ ೧೧ ಕೋಟಿ ವೆಚ್ಚದಲ್ಲಿ ಪಾರಂಡಹಳ್ಳಿ ರಸ್ತೆ ಅಭಿವೃದ್ಧಿ / ಶೀಘ್ರವೇ ರಸ್ತೆ ಕಾಮಗಾರಿ ಪೂರ್ಣಗೊಳಿಸಲು ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಶಾಸಕಿ ರೂಪಕಲಾ ಎಂ.ಶಶಿಧರ್ ಸೂಚನೆ

ವಿಜಯವಾಣಿ ಸುದ್ದಿಜಾಲ ಕೋಲಾರ

ಕೆ.ಜಿ.ಎಫ್. ನಗರದ ಪ್ರಸನ್ನ ಲಕ್ಷಿö್ಮÃ ವೆಂಕಟರಮಣಸ್ವಾಮಿ ದೇವಸ್ಥಾನ ಬಳಿಯ ರಾಜಕುಮಾರ್ ವೃತ್ತದಿಂದ ಪಾರಂಡಹಳ್ಳಿಯವರೆಗೆ ರಸ್ತೆ ಅಗಲೀಕರಣಗೊಳಿಸುವ ಕೆಲಸಕ್ಕೆ ಶಾಸಕಿ ರೂಪಕಲಾ ಎಂ.ಶಶಿಧರ್ ಚಾಲನೆ ನೀಡಿದರು.

ನಂತರ ಮಾತನಾಡಿದ ಶಾಸಕಿ ೧೧ ಕೋಟಿ ರೂ.ಗಳ ವೆಚ್ಚದಲ್ಲಿ ಈ ರಸ್ತೆ ಅಗಲೀಕರಣಗೊಳ್ಳಲಿದೆ. ರಾಜಕುಮಾರ್ ರಸ್ತೆಯಿಂದ ಪ್ರಾರಂಭವಾಗಿ ರಾಜಪೇಟೆ ರಸ್ತೆಯವರೆಗೂ ರಸ್ತೆ ಅಭಿವೃದ್ಧಿಯಾಗಲಿದೆ. ರಸ್ತೆ ಅಭಿವೃದ್ಧಿಪಡಿಸುವ ಸಲುವಾಗಿ ರಸ್ತೆಯ ಗಡಿ ಹಾಗೂ ಒತ್ತುವರಿಯನ್ನು ಗುರ್ತಿಸಲಾಗುತ್ತಿದೆ ಎಂದು ತಿಳಿಸಿದರು.

ಒತ್ತುವರಿದಾರರು ರಸ್ತೆ ಅಗಲೀಕರಣಕ್ಕಾಗಿ ಹಾಗೂ ಒತ್ತುವರಿ ತೆರವು ಮಾಡಲು ಸಹಕರಿಸಬೇಕು ಎಂದು ಮನವಿ ಮಾಡಿದರು. ಕಾಮಗಾರಿ ಶೀಘ್ರದಲ್ಲಿಯೇ ಪ್ರಾರಂಭಿಸಲಾಗುವುದು. ಸಾರ್ವಜನಿಕರಿಗೆ ತೊಂದರೆಯಾಗದAತೆ ತ್ವರಿತ ಗತಿಯಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸುವುದು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರಸಭಾ ಸದಸ್ಯರಾದ ಕರ್ಣಾಕರನ್, ಸನಾ, ರಮೇಶ್‌ಜೈನ್, ಪಿ.ಡಬ್ಲೂ ಎ.ಇ.ಇ. ರಾಜಶೇಖರ್, ಮುಖಂಡರಾದ ಭಾಸ್ಕರ್, ನಂದಕುಮಾರ್, ಒಬಿಸಿ ಮುನಿಸ್ವಾಮಿ, ಗ್ರಾಮ ಪಂಚಾಯ್ತಿ ಅಧ್ಯಕ್ಷ ವಿನುಕುಮಾರ್ ಮುಂತಾದವರು ಇದ್ದರು.

ಚಿತ್ರ ೧೪ ಕೆ.ಎಲ್.ಆರ್. ೦೬ : ಪಾರಂಡಹಳ್ಳಿ ರಸ್ತೆ ಅಭಿವೃದ್ಧಿಗೆ ಶಾಸಕಿ ರೂಪಕಲಾ ರಸ್ತೆ ಗಡಿ ಗುರ್ತಿಸುವ ಕೆಲಸ ಮಾಡುತ್ತಿರುವುದು.