ವಿಜಯವಾಣಿ ಸುದ್ದಜಾಲ ಕೋಲಾರ
ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಶಿವಾಂಶು ರಜಪೂತ್ ರವರ ಭಾವಚಿತ್ರ ಇರುವ ಜಿಲ್ಲಾ ಪೋಲಿಸ್ ಅಧಿಕೃತ ಇನ್ಸಾ÷್ಟಗ್ರಾಂ ಖಾತೆಯನ್ನು ನಕಲು ಮಾಡಿದ ಘಟನೆ ನಡೆದಿದೆ.
ನಕಲಿ ಖಾತೆಯನ್ನು ಎಸ್.ಪಿ.ಕೆ.ಜಿ.ಎಫ್. ಎಂಬ ಹೆಸರಿನಲ್ಲಿ ತೆರೆಯಲಾಗಿದ್ದು, ಈ ಖಾತೆಯ ಪ್ರೋಪೈಲ್‌ನಲ್ಲಿ ಎಸ್.ಪಿ.ಭಾವಚಿತ್ರವನ್ನು ಬಳಸಲಾಗಿದೆ. ನಕಲಿ ಖಾತೆಯನ್ನು ೧೧೯ ಮಂದಿ ಫೋಲೋ ಮಾಡುತ್ತಿದ್ದು, ಈಗಾಗಲೇ ೨೨ ಫಾಲೋರ‍್ಸ್ ಇದ್ದಾರೆ.
ಈ ಖಾತೆಯನ್ನು ಬ್ಲಾಕ್ ಮಾಡಬೇಕು ಮತ್ತು ಯಾರೂ ಸಹ ಈ ಖಾತೆಯನ್ನು ಫೋಲೊ ಮಾಡಬಾರದು ಎಂದು ಎಸ್.ಪಿ.ಯವರು ತಮ್ಮ ಇನ್ಸಾ÷್ಟಗ್ರಾಂ ಖಾತೆಯನ್ನು ಕೋರಿದ್ದಾರೆ.
ಇತ್ತೀಚೆಗೆ ಮನೆ ಮನೆಗೆ ಪೋಲಿಸ್ ಎಂಬ ಕಾರ್ಯಕ್ರಮವನ್ನು ಇಲಾಖೆ ಹಮ್ಮಿಕೊಂಡಿತ್ತು. ಕಾರ್ಯಕ್ರಮದ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವ ಅಧಿಕೃತ ವಿಡಿಯೋಗಳನ್ನು ಎಡಿಟ್ ಮಾಡಿದ ಕಿಡಿಗೇಡಿಗಳು ಅದಕ್ಕೆ ಅಶ್ಲೀಲಕರ ಸಂಭಾಷಣೆ ಹೊಂದಿಸಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡಿದರು. ಈ ಸಂಬAಧ ತನಿಖೆ ನಡೆಸಿದ್ದ ಸಿ.ಇ.ಎನ್.ಪೋಲಿಸರು ವಿಡಿಯೋ ಪೋಸ್ಟ್ ಮಾಡಿದ್ದ ಮೈಸೂರು ನಗರದ ಗೌಸ್ ಮತ್ತು ಸಿದ್ಧಿಕ್ ಎಂಬುವವರನ್ನು ಬಂಧಿಸಿದ್ದರು.
ಈ ಪ್ರಕರಣದ ಬೆನ್ನಲ್ಲೇ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಯವರ ಖಾತೆಯನ್ನೇ ನಕಲಿ ಮಾಡಲಾಗಿದೆ ಎನ್ನಲಾಗಿದೆ.