???????????????????????????????????? 
ನ್ಯೂಸ್

ಕೆ.ಆರ್.ನಗರ ಮಹಿಳಾ ಕಾಲೇಜಿಗೆ ಎ ಗ್ರೇಡ್

ಕೆ.ಆರ್.ನಗರ: ಪಟ್ಟಣದ ಸರ್ಕಾರಿ ಮಹಿಳಾ ಪ್ರಥಮದರ್ಜೆ ಕಾಲೇಜು ಮೈಸೂರು ವಿಶ್ವವಿದ್ಯಾಲಯದ ವ್ಯಾಪ್ತಿಗೆ ಬರುವ 67 ಸರ್ಕಾರಿ ಕಾಲೇಜುಗಳ ಪೈಕಿ ಮೊದಲನೇ ಸ್ಥಾನ ಮತ್ತು ರಾಜ್ಯದ 412 ಕಾಲೇಜುಗಳಲ್ಲಿ 3ನೇ ಸ್ಥಾನ ಪಡೆದು ಎ ಗ್ರೇಡ್ ಮೂಲಕ ನ್ಯಾಕ್ ಪ್ರಕ್ರಿಯೆಗೆ ಒಳಪಟ್ಟಿರ. ಈ ಹಿನ್ನೆಲೆಯಲ್ಲಿ ಬುಧವಾರ ಕಾಲೇಜಿನಲ್ಲಿ ಸಿಹಿ ಹಂಚಿ ಸಂಭ್ರಮಾಚರಣೆ ಮಾಡಲಾಯಿತು.

ಪಟ್ಟಣದ ಸರ್ಕಾರಿ ಮಹಿಳಾ ಪ್ರಥಮದರ್ಜೆ ಕಾಲೇಜಿನ ಆವರಣದಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಮತ್ತು ಆಡಳಿತ ಮಂಡಳಿ ಶಿಕ್ಷಕರ ಜತೆ ವಿಜಯೋತ್ಸವ ಆಚರಿಸಿದ ನಂತರ ಶಾಸಕ ಸಾ.ರಾ.ಮಹೇಶ್ ಮಾತನಾಡಿ, ಪಟ್ಟಣಕ್ಕೆ ನನ್ನ ಅಧಿಕಾರದ ಅವಧಿಯಲ್ಲಿ ಮಹಿಳಾ ಪ್ರಥಮ ದರ್ಜೆ ಕಾಲೇಜುನ್ನು ಪ್ರಾರಂಭಿಸಿದ 11 ವರ್ಷಗಳಲ್ಲಿ ಈ ಸಾಧನೆ ಮಾಡಿರುವುದಕ್ಕೆ ಕಾಲೇಜಿನ ಆಡಳಿತ ಮಂಡಳಿ, ಶಿಕ್ಷಕವೃಂದ ಮತ್ತು ವಿದ್ಯಾರ್ಥಿನಿಯರನ್ನು ಅಭಿನಂದಿಸುತ್ತೇನೆ ಎಂದರು.

ಕಾಲೇಜು ನ್ಯಾಕ್ ಪ್ರಕ್ರಿಯೆಗೆ ಒಳಪಟ್ಟಿರುವುದರಿಂದ 5 ವರ್ಷಗಳ ಅವಧಿಯಲ್ಲಿ ಕೇಂದ್ರದಿಂದ ವರ್ಷಕ್ಕೆ 1 ಕೋಟಿ ರೂ.ಗೂ ಹೆಚ್ಚು ಅನುದಾನ, ಇನ್ನಿತರ ಸೌಕರ್ಯಗಳ ಜತೆಗೆ ಕಾಲೇಜು ಸ್ವಾಯತ್ತೆಯಿಂದ ಕರ್ತವ್ಯ ನಿರ್ವಹಿಸಬಹುದಾಗಿದೆ ಎಂದರು.

ಕಾಲೇಜಿನ ಸದಸ್ಯ ಕಾರ್ಯದರ್ಶಿ ಕೆ.ಟಿ. ರಮೇಶ್, ಪುರಸಭಾ ಸದಸ್ಯ ಕೆ.ಪಿ. ಪ್ರಭುಶಂಕರ್, ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯ ಸಿದ್ದರಾಮೇಗೌಡ, ಪ್ರಾಂಶುಪಾಲ ಡಾ.ವಿಜಯಕುಮಾರ್ ಮಾತನಾಡಿದರು. ಪ್ರಾಂಶುಪಾಲ ಡಾ.ಎ.ಆರ್. ಮದನ್‌ಕುಮಾರ್, ಪುರಸಭಾ ಸದಸ್ಯ ಉಮೇಶ್, ತಾಲೂಕು ಜೆಡಿಎಸ್ ವಕ್ತಾರ ಕೆ.ಎಲ್. ರಮೇಶ್, ಸಿಡಿಸಿ ಸದಸ್ಯರು ಇದ್ದರು.