ಮೈಸೂರು ತಾಲೂಕಿನ ಸಾಹುಕಾರ ಹುಂಡಿ ಬಳಿ ಸೋಮವಾರ ನವಜಾತ ಶಿಶುವನ್ನು ಬಟ್ಟೆಯಲ್ಲಿ ಸುತ್ತಿ ಕೃಷಿ ಹೊಂಡದಲ್ಲಿ ಎಸೆದ ಘಟನೆ ನಡೆದಿದೆ.
ನವಜಾತ ಗಂಡು ಶಿಶುವನ್ನು ಬಟ್ಟೆ ಸುತ್ತಿ ಜಮೀನಿನ ಕೃಷಿ ಹೊಂಡದಲ್ಲಿ ಬಿಸಾಡಲಾಗಿತ್ತು. ಜಮೀನಿಗೆ ಹೋಗುವಾಗ ಮಗು ಅಳುವಿನ ಶಬ್ದ ಕೇಳಿ ಸ್ಥಳೀಯರು ಶಿಶುವನ್ನು ರಕ್ಷಿಸಿದ್ದಾರೆ. ಬಳಿಕ ಆಸ್ಪತ್ರೆಗೆ ತೆರಳುವ ವೇಳೆ ಶಿಶು ಕೊನೆಯುಸಿರೆಳೆದಿದೆ. ಈ ಸಂಬಂಧ ಇಲವಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.