ನ್ಯೂಸ್

ಕೃಷಿ ಸಂಹಾರ- ಸರ್ಕಾರ ಹುನ್ನಾರ" ಪ್ರಬಂಧ ಸ್ಪರ್ಧೆಗೆ ಆಹ್ವಾನ

ಚಾಮರಾಜನಗರ: ಎಸ್.ಡಿ.ಪಿ.ಐ ಪಕ್ಷದಿಂದ ಪದವಿ ವಿದ್ಯಾರ್ಥಿಗಳಿಗಾಗಿ "ಕೃಷಿ ಸಂಹಾರ- ಸರ್ಕಾರ ಹುನ್ನಾರ" ವಿಷಯದಡಿ ಪ್ರಬಂಧ ಸ್ಪರ್ಧೆ ಏರ್ಪಡಿಸಿದೆ.

ಕೇಂದ್ರ ಮತ್ತು ರಾಜ್ಯ ಸರ್ಕಾರ‌ ಜಾರಿಗೊಳಿಸಿರುವ ಕೃಷಿ ಮಸೂದೆಗಳನ್ನು ವಿರೋಧಿಸಿ ಜಾಗೋ ಕಿಸಾನ್ ಎಂಬ ಶೀರ್ಷಿಕೆಯಡಿ ಹಮ್ಮಿಕೊಂಡಿರುವ ಜನ ಜಾಗೃತಿ ಅಭಿಯಾನದ ಅಂಗವಾಗಿ ಈ ಪ್ರಬಂಧ ಸ್ಪರ್ಧೆ ನಡೆಯುತ್ತಿದೆ.


ಭಾಗವಹಿಸಲು ಇಚ್ಛಿಸುವ ವಿದ್ಯಾರ್ಥಿಗಳು ಅ. 30ರ ಸಂಜೆ 5 ಗಂಟೆಯೊಳಗೆ ಎಸ್.ಡಿ.ಪಿ.ಐ ಪಕ್ಷದ‌ ಕಚೇರಿ, ಎಸ್.ಎ.ಪಿ ಕಾಂಪ್ಲೆಕ್ಸ್, ಡಿವಿಯೇಷನ್ ರಸ್ತೆ, ಕೆ.ಪಿ.ಮೊಹಲ್ಲಾ, ಚಾಮರಾಜನಗರ ಈ ವಿಳಾಸಕ್ಕೆ ಅಂಚೆ ಅಥವಾ ಖುದ್ದಾಗಿ ಬಂದು ಬರೆದಿರುವ ಪ್ರಬಂಧವನ್ನು ತಲುಪಿಸಬೇಕು. ಉತ್ತಮ ಪ್ರಬಂಧಕ್ಕೆ ಸೂಕ್ತ ಬಹುಮಾನ ನೀಡಲಾಗುವುದು ಎಂದು ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಮಹೇಶ್ (ಮೊ:9036955370) ತಿಳಿಸಿದ್ದಾರೆ.