ಮಂಗಳೂರು:ಕೂಳೂರಿನಲ್ಲಿ ಕರ್ತವ್ಯ ನಿರತ ಇಬ್ಬರು ಕಾವೂರು ಪೊಲೀಸರ ಮೇಲೆ ಶುಕ್ರವಾರ ಯುವಕರ ತಂಡ ಹಲ್ಲೆ ನಡೆಸಿದೆ.
ಕೂಳೂರಿನಲ್ಲಿ ಯುವಕರು ಜಮಾಯಿಸಿ ಗಲಾಟೆ ಮಾಡುತ್ತಿದ್ದಾಗ ಅದನ್ನು ಬಿಡಿಸಲು ಸ್ಥಳಕ್ಕೆ ತೆರಳಿದ ಪೊಲೀಸರ ಮೇಲೆಯೇ ಹಲ್ಲೆ ನಡೆದಿದೆ. ಗಾಯಗೊಂಡ ಪೊಲೀಸರು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಎರಡು ದಿನಗಳ ಹಿಂದೆ ಅಳಕೆಯಲ್ಲಿ ಬಂದರು ಪೊಲೀಸ್ ಹೆಡ್ ಕಾನ್ ಸ್ಟೇಬಲ್ ಗಣೇಶ್ ಕಾಮತ್ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆದಿತ್ತು.
ಮಂಗಳೂರು ಗಲಭೆ ನಡೆದು ವರ್ಷವಾಗುತ್ತಿರುವ ಹಿನ್ನೆಲೆಯಲ್ಲಿ ಅಶಾಂತಿ ಉಂಟು ಮಾಡಲು ಯತ್ನ ನಡೆಸಿರುವ ಬಗ್ಗೆ ಲಭಿಸಿದ ಮಾಹಿತಿ ಮೇರೆಗೆ ನಗರದಲ್ಲಿ ಪೊಲೀಸರು ಬಿಗು ಬಂದೋಬಸ್ತು ಏರ್ಪಡಿಸಿದ್ದಾರೆ.