ಬೆಟಗೇರಿ: ಪ್ರಸಕ್ತ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕುಶಲಕರ್ಮಿ ಮಗಳು ಅಮೃತಾ ಕಂಬಾರ ೬೨೫ಕ್ಕೆ ೬೦೧(ಶೇ. ೯೬.೧೬) ಅಂಕ ಪಡೆದು ಉತ್ತಮ ಸಾಧನೆ ಮಾಡಿದ್ದಾಳೆ.
ಕೌಜಲಗಿ ಪಟ್ಟಣದ ಡಾ. ಮಹಾದೇವಪ್ಪ ಮಡ್ಯಪ್ಪ ದಳವಾಯಿ ಪ್ರೌಢಶಾಲೆ ವಿದ್ಯಾರ್ಥಿನಿ ಅಪೂರ್ವ. ಅಮೃತಾಳ ತಂದೆ ಅನಿಲ ಬಡಗಿತನ ಮಾಡುತ್ತಿದ್ದು, ಮಗಳ ಓದಿಗೆ ಸಾಕಷ್ಟು ಶ್ರಮಿಸಿದ್ದಾರೆ. ಬಡತನದ ಮಧ್ಯೆಯೂ ಮಗಳು ಸಾಧನೆ ಮಾಡಲಿ ಎಂಬ ಆಶಯದಿಂದ ಶಿಕ್ಷಣ ನೀಡುತ್ತಿದ್ದಾರೆ. ತಂದೆ ಆಸೆಯಂತೆ ಅಮೃತಾ ಶ್ರಮಪಟ್ಟು ಓದಿ, ಶಿಕ್ಷಕರು ಹೇಳಿದ ಪಾಠ ತಿಳಿದುಕೊಂಡು ಉತ್ತಮ ಫಲಿತಾಂಶ ಪಡೆದಿದ್ದಾಳೆ. ಕನ್ನಡ ವಿಷಯದಲ್ಲಿ ೧೨೫ಕ್ಕೆ ೧೨೫ ಅಂಕ ಗಳಿಸಿದ್ದಾಳೆ. ಮಗಳ ಸಾಧನೆಗೆ ಸಿಹಿ ತಿನ್ನಿಸಿ ಸಂಭ್ರಮಿಸಿದ್ದಾರೆ.