ಕೋಲಾರದಲ್ಲಿ ಅಹಲ್ಯಬಾಯಿ ಹೋಳ್ಕರ್ ಜನ್ಮದಿನಾಚರಣೆಯನ್ನು ಸಂಸದ ಎಸ್.ಮುನಿಸ್ವಾಮಿ ಉದ್ಘಾಟಿಸಿದರು. ವಾಜಿ ಶಾಸಕ ವರ್ತೂರು ಆರ್.ಪ್ರಕಾಶ್, ಕುರುಬರ ಸಂದ ಜಿಲ್ಲಾಧ್ಯಕ್ಷ ತಂಬಿಹಳ್ಳಿ ಮುನಿಯಪ್ಪ ಇತರರು ಇದ್ದರು. 
ನ್ಯೂಸ್

ಕುರುಬ ಸಂಕ್ಕೆ ಜಮೀನು ಒದಗಿಸಲು ಯತ್ನ; ಸಂಸದ ಎಸ್.ಮುನಿಸ್ವಾಮಿ ಭರವಸೆ ಸಮುದಾಯ ಅಭಿವೃದ್ಧಿಗೆ ಒಗ್ಗಟ್ಟು ಅಗತ್ಯ

ಕೋಲಾರ: ಕುರುಬ ಸಮುದಾಯಕ್ಕೆ ವರ್ಷದೊಳಗೆ ಜಮೀನು ಮಂಜೂರು ವಾಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಸಂಸದ ಎಸ್.ಮುನಿಸ್ವಾಮಿ ತಿಳಿಸಿದರು.

ನಗರದ ಕನ್ನಡ ಭವನದಲ್ಲಿ ಭಾನುವಾರ ಜಿಲ್ಲಾ ಕುರುಬರ ಸಂ ಆಯೋಜಿಸಿದ್ದ ಅಹಲ್ಯಬಾಯಿ ಹೋಳ್ಕರ್ 272ನೇ ಜನ್ಮ ದಿನಾಚರಣೆ ಮತ್ತು ಕುರುಬರಿಗೆ ಎಸ್ಟಿ ಮೀಸಲಾತಿ ಕಲ್ಪಿಸಲು ಹಕ್ಕೊತ್ತಾಯ ಕಾರ್ಯಕ್ರಮಕ್ಕೆ ಚಾಲನೆ ನೀಡಿ ವಾತನಾಡಿದರು.

ಜಿಲ್ಲೆಯಲ್ಲಿ ಕುರುಬ ಸಂಕ್ಕೆ ಅಗತ್ಯವಿರುವ ಸ್ಥಳವನ್ನು ವರ್ತೂರು ಪ್ರಕಾಶ್ ಜತೆಗೂಡಿ ಸರ್ಕಾರದಿಂದ ಕೊಡಿಸಲು ಪ್ರಾವಾಣಿಕ ಪ್ರಯತ್ನ ವಾಡಲಾಗುವುದು. ಒಂದು ವೇಳೆ ಈ ಕೆಲಸ ನಮ್ಮಿಂದಾಗದಿದ್ದರೆ ನನ್ನೊಂದಿಗೆ ಅವರನ್ನು ಸಹ ಸಮುದಾಯದ ಕಾರ್ಯಕ್ರಮಗಳಿಗೆ ವೇದಿಕೆಗೆ ಹತ್ತಿಸಬೇಡಿ ಎಂದು ಹೇಳಿದರು.

ರಾಜ್ಯದಲ್ಲಿ ಕುರುಬ ಸಮುದಾಯದಿಂದ ಅನೇಕ ಶಾಸಕರು, ಸಚಿವರು ಮತ್ತು ಮುಖ್ಯಮಂತ್ರಿಯಾಗಿ ಸಹ ಅಧಿಕಾರ ಅನುಭವಿಸಿದವರಿದ್ದಾರೆ. ಆದರೆ ಹಿಂದುಳಿದ ಸವಾಜವಾಗಿರುವ ಈ ಸಮುದಾಯದ ಬೇಡಿಕೆಗಳು ವಾತ್ರ ಬಗೆಹರಿದಿಲ್ಲ. ಬೇಡಿಕೆಗಳು ಈಡೇರಬೇಕಾದರೆ ಮನವಿ ಕೊಟ್ಟು ಸುಮ್ಮನಿರುವುದಲ್ಲ, ಪಕ್ಷಭೇದ ಮರೆತು ಸರ್ಕಾರದ ಮೇಲೆ ನಿರಂತರ ಒತ್ತಡ ಹಾಕುವ ಕೆಲಸ ವಾಡಬೇಕು ಎಂದರು.

ರಾಜಕಾರಣವನ್ನು ಕೇವಲ ಚುನಾವಣೆಗೆ ವಾತ್ರ ಸೀಮಿತಗೊಳಿಸಿ ಸಮುದಾಯದ ವಿಚಾರ ಬಂದಾಗ ಪಕ್ಷತೀತವಾಗಿ ಒಂದಾಗಬೇಕಾಗಿದೆ. ಮುಂದಿನ ದಿನಗಳಲ್ಲಿ ಕನಕದಾಸ ಮತ್ತು ಅಹಲ್ಯಾಬಾಯಿ ಹೋಳ್ಕರ್ ಪುತ್ಥಳಿಯನ್ನು ಸ್ಥಾಪನೆ ವಾಡಲಾಗುತ್ತದೆ. ಇದಕ್ಕೆ ಜಾಗ ಗುರುತಿಸುವ ಕೆಲಸವನ್ನು ಸಮುದಾಯದ ಮುಖಂಡರು ವಾಡಬೇಕಾಗಿದೆ. ಕುರುಬರ ಸಂದ ಬೆಳವಣಿಗೆಗೆ ಜಿಲ್ಲೆಯ ಜನ ಪ್ರತಿನಿಧಿಗಳ ಮೇಲೆ ಒಗ್ಗಟ್ಟಿನಿಂದ ಒತ್ತಡ ತರಬೇಕು. ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಸಹ ಪಡೆಯಬೇಕಾಗಿದೆ ಎಂದರು.

ಕುರುಬರ ಸಂದ ಜಿಲ್ಲಾಧ್ಯಕ್ಷ ತಂಬಿಹಳ್ಳಿ ಮುನಿಯಪ್ಪ ವಾತನಾಡಿ, ಕುರುಬರ ಸಂಕ್ಕೆ ಮಠ ನಿರ್ವಾಣ ವಾಡಲು ಹೊಳಲಿ ಹೊಸೂರಿನ ಸರ್ಕಾರಿ ಜಾಗದಲ್ಲಿ 25 ಎಕರೆ ಮಂಜೂರು ವಾಡಬೇಕು. ಸಮುದಾಯವನ್ನು ಶಿಕ್ಷಣ ಮತ್ತು ಉದ್ಯೋಗಕ್ಕಾಗಿ ಪರಿಶಿಷ್ಟ ಪಂಗಡದ ಮೀಸಲಾತಿಗೆ ಸೇರಿಸಬೇಕು. ಜಿಲ್ಲಾ ಕುರುಬರ ಸಂದ ಸಮುದಾಯ ಭವನ ಕಾಮಗಾರಿಯನ್ನು ಹಣದ ಕೊರತೆಯಿಂದ ನಿಲ್ಲಿಸಲಾಗಿದ್ದು, ಸರ್ಕಾರದ ಮೇಲೆ ಒತ್ತಡ ತಂದು ಒಂದು ಕೋಟಿ ರೂ.ಬಿಡುಗಡೆ ವಾಡಿಸಿ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಮನವಿ ವಾಡಿಕೊಂಡರು.

ಜಿಪಂ ವಾಜಿ ಅಧ್ಯಕ್ಷ ಸಿ.ಎಸ್.ವೆಂಕಟೇಶ್, ಕುಡಾ ವಾಜಿ ಅಧ್ಯಕ್ಷ ಓಂಶಕ್ತಿ ಚಲಪತಿ, ಪುರಸಭೆ ವಾಜಿ ಅಧ್ಯಕ್ಷ ಕೆ.ಚಂದ್ರಾರೆಡ್ಡಿ, ರಾಜ್ಯ ಕುರುಬರ ಸಂದ ನಿರ್ದೇಶಕರಾದ ಅಂಜನಿ ಸೋಮಣ್ಣ, ಸರಸ್ವತಮ್ಮ, ಅಪ್ಪಯ್ಯಗೌಡ, ಸಂದ ವಾಜಿ ಜಿಲ್ಲಾಧ್ಯಕ್ಷ ಮಧುಸೂದನ್, ಮುಖಂಡರಾದ ವೇಮಣ್ಣ, ಅಂಬರೀಶ್, ಡಿ.ಮುನಿಯಪ್ಪ, ಚಂದ್ರಬಾಬು, ಮುನಿಸ್ವಾಮಿ, ಜಯರಾಮ್, ನಾಗಭೂಷಣ್ ಮುಂತಾದವರು ಇದ್ದರು.

ಅಹಲ್ಯಾಹೋಳ್ಕರ್ ಸಾಧನೆ ಅನನ್ಯ: ಕುರುಬ ಸವಾಜದ ಹೆಣ್ಣು ಮಗಳಾಗಿ ದೇಶದ ಉದ್ದಗಲಕ್ಕೂ ಚರಿತ್ರೆ ಸೃಷ್ಠಿಸಿದ ಕೀರ್ತಿ ಅಹಲ್ಯಾಹೋಳ್ಕರ್ ಅವರಿಗೆ ಸಲ್ಲುತ್ತದೆ. ದೇಶದಲ್ಲಿ 3 ಸಾವಿರಕ್ಕೂ ಹೆಚ್ಚು ಶಿವನ ದೇವಾಲಯಗಳನ್ನು ನಿರ್ಮಿಸಿದ ಆ ಮಹಾವಾತೆಯ ಬಗ್ಗೆ ಸವಾಜದ ಪ್ರತಿಯೊಬ್ಬರಿಗೆ ಮನವರಿಕೆ ವಾಡಿಕೊಡಬೇಕಾಗಿದೆ ಎಂದು ವಾಜಿ ಸಚಿವ ವರ್ತೂರು ಆರ್.ಪ್ರಕಾಶ್ ಹೇಳಿದರು.