ನ್ಯೂಸ್

ಕುಮಾರಣ್ಣ ಸಿಎಂ ಆಗುವುದು ಶತಸಿದ್ಧ

ಯಾದಗಿರಿ: ರಾಜ್ಯದ ಸಮಗ್ರ ಅಭಿವೃದ್ಧಿ, ರೈತರ ಸಮಸ್ಯೆಗಳಿಗೆ ಸ್ಪಂದನೆ ಸೇರಿ ಹಲವು ವಿಶಿಷ್ಟ ಕಾರ್ಯಕ್ರಮಗಳನ್ನು ಹೊಂದಿರುವ ಪಂಚರತ್ನ ಯೋಜನೆ ಜಾರಿಯಾದರೆ ದೇಶದಲ್ಲೇ ಕನರ್ಾಟಕ ಮಾದರಿಯಾಗಲಿದೆ ಎಂದು ಶಾಸಕ ನಾಗನಗೌಡ ಕಂದಕೂರ ಹೇಳಿದರು.
ನಗರದಲ್ಲಿ ಭಾನುವಾರ ಗುರುಮಠಕಲ್ ಕಾಂಗ್ರೆಸ್ ಹಿರಿಯ ಮುಖಂಡ ನವಾಜರಡ್ಡಿ ಚೆಪೇಟ್ಲಾ ಅವರನ್ನು ಜೆಡಿಎಸ್ಗೆ ಬರಮಾಡಿಕೊಂಡ ಅವರು, 2018ರಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿ ಆದ ತಕ್ಷಣ ರೈತರ ಸಂಪೂರ್ಣ ಸಾಲ ಮನ್ನಾ ಮಾಡಿದರು. ಕಾಂಗ್ರೆಸ್ನ ಒತ್ತಡ ಸಾಕಷ್ಟಿದ್ದರೂ ಸೊಪ್ಪು ಹಾಕಲಿಲ್ಲ. ರೈತರ ಸಮಸ್ಯೆ ಅರಿತಿರುವ ಏಕೈಕ ನಾಯಕ ಕುಮಾರಸ್ವಾಮಿ ಎಂದರು.
ಬರುವ ಚುನಾವಣೆಯಲ್ಲಿ ಕುಮಾರಸ್ವಾಮಿ ಸಿಎಂ ಆಗುವುದು ಶತಸಿದ್ಧ. ಪಂಚರತ್ನ ಯೋಜನೆ ಜಾರಿ ಮೂಲಕ ಯುವಕರು, ರೈತರು, ದುರ್ಬಲರು, ಮಹಿಳೆಯರು ಸೇರಿ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಲಾಗುವುದು. ಐದು ವರ್ಷಗಳಲ್ಲಿ ಗುರುಮಠಕಲ್ ಕ್ಷೇತ್ರದಲ್ಲಿ ಸಾಕಷ್ಟು ಪ್ರಗತಿಪರ ಕಾರ್ಯ ಕೈಗೊಂಡಿದ್ದೇನೆ. ಆದರೆ ನಮ್ಮ ಸಕರ್ಾರ ಬಿದ್ದ ಕಾರಣ ನಾವು ಕಂಡ ಸಾಕಷ್ಟು ಕನಸುಗಳು ಈಡೇರಿಲ್ಲ. ಪಕ್ಷದ ಅಭ್ಯಥರ್ಿ ಶರಣಗೌಡ ಕಂದಕೂರ ಅವರನ್ನು ಮತದಾರರು ಈ ಬಾರಿ ಗೆಲ್ಲಿಸಿ ವಿಧಾನಸಭೆಗೆ ಕಳಿಸುವ ಮೂಲಕ ಕ್ಷೇತ್ರದ ಅಭಿವೃದ್ಧಿ ರೂವಾರಿಗಳಾಗಬೇಕು ಎಂದು ಮನವಿ ಮಾಡಿದರು.
ನವಾಜರಡ್ಡಿ ಮಾತನಾಡಿ, ಯುವ ನಾಯಕ ಶರಣಗೌಡ ಸಾಮಾನ್ಯರಲ್ಲಿ ಸಾಮಾನ್ಯರಾಗಿ ಕ್ಷೇತ್ರದ ಅಭಿವೃದ್ಧಿಗೆ ದುಡಿಯುತ್ತಿದ್ದಾರೆ. ನಮಗೆ ವಯಸ್ಸಾಗಿದೆ. ನಾವೇನಿದ್ದರೂ ಮಾರ್ಗದರ್ಶನ ಮಾಡುವ ಸ್ಥಾನದಲ್ಲಿ ಇರುತ್ತೇವೆ. ಆದರೆ ಯುವಕರು ಹೆಚ್ಚಿನ ಪ್ರಮಾಣದಲ್ಲಿ ರಾಜಕೀಯ ಕ್ಷೇತ್ರಕ್ಕೆ ಬರುವ ಮೂಲಕ ನಾಯಕತ್ವದ ಗುಣ ಹೊಂದಬೇಕಿದೆ. ಈ ಬಾರಿ ಗುರುಮಠಕಲ್ನಲ್ಲಿ ಮತ್ತೊಮ್ಮೆ ಜೆಡಿಎಸ್ ಜಯಭೇರಿ ಬಾರಿಸುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಜಿಲ್ಲಾಧ್ಯಕ್ಷ ಚನ್ನಪ್ಪಗೌಡ ಮೋಸಂಬಿ, ಪ್ರಮುಖರಾದ ವಿಶ್ವನಾಥ ಸಿರವಾರ, ಮಲ್ಲನಗೌಡ ಹಳಿಮನಿ ಕೌಳೂರು, ಸೋಮಗೌಡ ಬೆಳಬೇರಾ, ಭೋಜನಗೌಡ ಯಡ್ಡಳ್ಳಿ ಇದ್ದರು.