ನ್ಯೂಸ್

ಕುತ್ತಿಗೆ ಕೊಯ್ದುಕೊಂಡು ಗೃಹಿಣಿ ಆತ್ಮಹತ್ಯೆ



ಯಾದಗಿರಿ: ಮಕ್ಕಳಾಗಿಲ್ಲ ಎಂಬ ಕಾರಣಕ್ಕೆ ಮನನೊಂದ ಗೃಹಿಣಿ ಇಳಿಗೆಯಿಂದ ಕುತ್ತಿಗೆ ಕೊಯ್ದಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಗುರುವಾರ ನಗರದ ಅಜೀಜ್ ಕಾಲೋನಿಯಲ್ಲಿ ನಡೆದಿದೆ.
ತಾಯಮ್ಮ ವೆಂಕಟೇಶ ಮೇದಾರ (38) ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ತಾಯಮ್ಮಳ ಜತೆ ವೆಂಕಟೇಶಗೆ ಕಳೆದ 8 ವರ್ಷದ ಹಿಂದೆ ಮದುವೆ ಮಾಡಿಕೊಡಲಾಗಿತ್ತು. ಯಾದಗಿರಿಯಲ್ಲಿ ಆಕೆಯ ಸಹೋದರಿಯರ ಜತೆ ವಾಸವಿದ್ದಳು.‌ ಆದರೆ, ಮಕ್ಕಳಾಗಿಲ್ಲ ಎಂಬ ಕೊರಗಿನಿಂದ ಮಾನಸಿಕ‌ ಖಿನ್ನತೆಗೆ ಒಳಗಾಗಿದ್ದಳು.
ಗುರುವಾರ ಮಧ್ಯಾಹ್ನ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಈಳಿಗೆಯಿಂದ ಕುತ್ತಿಗೆ ಕೊಯ್ದುಕೊಂಡಿದ್ದಾಳೆ.
ಸಹೋದರಿಯರು ಮನೆಗೆ ಬಂದಾಗಲೇ ಈ ಘಟನೆ ಬೆಳಿಕಿಗೆ ಬಂದಿದ್ದು, ರಕ್ತದ ಮಡುವಿನಲ್ಲಿ ಒದ್ದಾಡುತ್ತಿದ್ದಳು. ತಕ್ಷಣ ಕಲಬುರಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾಳೆ.
ಯಾದಗಿರಿ ನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.