ನ್ಯೂಸ್

ಕುತ್ತಾರು ಯುವಕರಿಗೆ ಚೂರಿ ಇರಿತ

ಮಂಗಳೂರು: ನಗರದ ಹೊರ ವಲಯದ ಕುತ್ತಾರು ಬಳಿಯ ಅಡು ಎಂಬಲ್ಲಿ ಪಲ್ಸರ್ ಬೈಕ್ ನಲ್ಲಿ ಬಂದ ಇಬ್ಬರು ಯುವಕರಿಬ್ಬರಿಗೆ ಚೂರಿಯಿಂದ ಇರಿದು ಪರಾರಿಯಾಗಿದ್ದಾರೆ.

ಆದಿತ್ಯ ಹಾಗೂ ಪವನ್ ಗಾಯಾಳುಗಳು. ಶುಕ್ರವಾರ ರಾತ್ರಿ ಆದಿತ್ಯ ಅವರ ತಮ್ಮನನ್ನು ಕರೆದುಕೊಂಡು ಬರಲು ಸ್ನೇಹಿತ ಪವನ್ ಜತೆ ಹೋಗುತ್ತಿದ್ದಾಗ ಘಟನೆ ನಡೆದಿದೆ.

ಪವನ್ ದ್ವಿಚಕ್ರ ವಾಹನ ಚಲಾಯಿಸುತ್ತಿದ್ದು, ಹಿಂದಿನಿಂದ ಪಲ್ಸರ್ ಬೈಕ್ ನಲ್ಲಿ ಬಂದು ಚೂರಿಯಿಂದ ಇರಿದು ಪರಾರಿಯಾಗಿದ್ದಾರೆ. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.