ನ್ಯೂಸ್

ಕುಡಿದ ಅಮಲಿನಲ್ಲಿ ರೈಲ್ವೇ ಫ್ಲಾಟ್‌ಫಾರಂಗೆ ಕಾರು ನುಗ್ಗಿಸಿದ ಭೂಪ

ವಿಜಯವಾಣಿ ಸುದ್ದಿಜಾಲ ಕೋಲಾರ

ಕುಡಿದ ಮತ್ತಿನಲ್ಲಿ ರೈಲ್ವೆ ನಿಲ್ದಾಣದೊಳಕ್ಕೆ ಭೂಪನೊಬ್ಬ ಕಾರು ನುಗ್ಗಿಸಿದ ಘಟನೆ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಟೇಕಲ್ ರೈಲ್ಚೆ ನಿಲ್ದಾಣದಲ್ಲಿ ತಡರಾತ್ರಿಯಲ್ಲಿ ನಡೆದಿದೆ.

ಕಂಠಪೂರ್ತಿ ಕುಡಿದ ಭೂಪನೊಬ್ಬ ಮತ್ತಿನಲ್ಲಿ ತನ್ನ ಮಾರುತಿ ಶಿಪ್ಟ್ ಕಾರನ್ನು ತಡರಾತ್ರಿ ರೈಲ್ವೆ ನಿಲ್ದಾಣದೊಳಕ್ಕೆ ಕಾರು ನುಗ್ಗಿಸಿದ್ದಾನೆ. ರೈಲ್ವೆ ಪ್ಲಾಟ್ ಪಾರ್ಮ್ ಒಳಗೆ ನುಗ್ಗಿದ್ದ ಕಾರು ನಂತರ ರೈಲ್ವೆ ಹಳಿಗಳಿಗೆ ಅಪ್ಪಳಿಸಿದೆ.

ಅದೃಷ್ಟವಶಾತ್ ಯಾವುದೇ ಪ್ರಾಣಪಾಯವಿಲ್ಲದೆ ಪಾರಾಗಿದ್ದು, ಕುಡಿತದ ಮತ್ತಿನಲ್ಲಿ ಕಾರು ಚಲಾಯಿಸಿದ ರಾಕೇಶ್ ಎಂಬುವರು ಈ ಅವಾಂತರ ಸೃಷ್ಟಿಸಿದ್ದಾನೆ.

ಕೂಡಲೇ ಎಚ್ಚೇತ್ತ ರೈಲ್ವೆ ಅಧಿಕಾರಿಗಳು ಜೆಸಿಬಿ ಸಹಾಯದಿಂದ ಕಾರು ತೆರವುಗೊಳಿಸಿದ್ದಾರೆ. ಟೇಕಲ್ ಸಾಕಷ್ಟು ರೈಲ್ವು ಸಂಚಾರವನ್ನು ಹೊಂದಿರುವ ಜಂಕ್ಷನ್ ಆಗಿದ್ದು, ಒಂದು ವೇಳೆ ರೈಲು ಬಂದಿದ್ದರೆ ಸಾಕಷ್ಟು ಅನಾಹುತವಾಗುತ್ತಿತ್ತು.

ಅದೃಷ್ಟವಶಾತ್ ಯಾವುದೇ ರೈಲ್ವೆ ಬಂದಿಲ್ಲ, ಅಷ್ಟೋತ್ತಿಗೆ ಅಧಿಕಾರಿಗಳು ತಡರಾತ್ರಿಯಲ್ಲಿ ಜೆಸಿಬಿಯನ್ನು ತರಸಿ ಕಾರನ್ನು ರೈಲ್ವೆ ಹಳಿಯಿಂದ ಹೊರ ತೆಗೆಯಲಾಯಿತು. ಕಾರು ಮಾಲೀಕ ರಾಕೇಶ್ ಬಂಗಾರಪೇಟೆ ರೈಲ್ವೆ ಪೊಲೀಸರ ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದು, ಬಂಗಾರಪೇಟೆ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

ಚಿತ್ರ ೦೨ ಕೆ.ಎಲ್.ಆರ್. ೦೧ : ಟೇಕಲ್ ರೈಲ್ವೆ ಫ್ಲಾಟ್‌ಫಾರಂನಿAದ ರೈಲ್ವೇ ಹಳಿಗೆಳಿಗೆ ಕಾರನ್ನು ಕುಡಿದ ಅಮಲಿನಲ್ಲಿ ನುಗ್ಗಿಸಿರುವುದು.