ವಿಜಯವಾಣಿ ಸುದ್ದಿಜಾಲ ಕೋಲಾರ
ಶಾಲೆಯ ಅಡುಗೆ ಕೋಣೆಯಲ್ಲಿ ಬಿಸಿಯೂಟ ತಯಾರು ಮಾಡುತ್ತಿದ್ದ ಸಂದರ್ಭದಲ್ಲಿ ಕುಕ್ಕರ್ ಸಿಡಿದು ಅಡುಗೆ ಸಿಬ್ಬಂದಿ ಸುನಂದಮ್ಮನಿಗೆ ಕಾಲು ಮತ್ತು ಕುತ್ತಿಗೆಯ ಸುಟ್ಟ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೂ ಬಿಸಿಯೂಟ ಅಧಿಕಾರಿಗಳು ಮತ್ತು ಶಿಕ್ಷಣ ಇಲಾಖೆ ಅಧಿಕಾರಿಗಳು ಅಡುಗೆ ಸಿಬ್ಬಂದಿಯ ಯೋಗಕ್ಷೇಮವನ್ನು ವಿಚಾರಿಸಿಲ್ಲ ಎಂದು ರೈತ ಸಂಘದ ಯುವ ಘಟಕದ ಅಧ್ಯಕ್ಷ ಕಲ್ವಮಂಜಲಿ ರಾಮುಶಿವಣ್ಣ ಆರೋಪಿಸಿದ್ದಾರೆ.
ಕೋಲಾರ ನಗರದ ನೂತನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢ ಶಾಲಾ ವಿಭಾಗದ ಅಡುಗೆ ಸಿಬ್ಬಂದಿಯಾದ ಸುನಂದಮ್ಮ ರವರು ಸ್ಥಳೀಯ ಖಾದ್ರಿಪುರ ನಿವಾಸಿಯಾಗಿದ್ದು, ಶಾಲೆಯ ಅಡುಗೆ ಕೋಣೆಯಲ್ಲಿ ಶುಕ್ರವಾರ ಅಡುಗೆ ತಯಾರಿಸುತ್ತಿರುವ ಸಂದರ್ಭದಲ್ಲಿ ಕುಕ್ಕರ್ ಸಿಡಿದು ಕಾಲಿನಿಂದ ಹಿಡಿದು ಕತ್ತಿನವರೆಗೂ ಸುಟ್ಟು ಹೋಗಿದ್ದು. ಬಹಳಷ್ಟು ತೀರ್ವವಾಗಿ ಗಾಯಗೊಂಡಿದ್ದು, ಅಡುಗೆ ಸಿಬ್ಬಂದಿಯಾದ ಕೋಕಿಲಮ್ಮ ಮತ್ತು ರತ್ನಮ್ಮ ಖಾಸಗಿ ನಗರದ ಚೌಡೇಶ್ವರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದಾರೆ.
ಘಟನೆ ನಡೆದಿರುವುದು ಬೆಳ್ಳಿಗ್ಗೆ ೧೧.೩೦ರ ಸಮಯದಲ್ಲಿ ಬಿಸಿಯೂಟದ ಸಹಾಯಕ ನಿರ್ದೇಶಕ ಸುಬ್ರಮಣಿ, ಜಿಲ್ಲಾ ಬಿಸಿಯೂಟ ಕ್ಷೇತ್ರ ಶಿಕ್ಷಣಾಧಿಕಾರಿ ತಿಮ್ಮರಾಯಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಕನ್ನಯ್ಯ ಹಾಗೂ ಡಿ.ಡಿ.ಪಿ.ಐ. ಕೃಷ್ಣಮೂರ್ತಿಯವರು ಆಸ್ಪತ್ರೆಗೆ ಭೇಟಿ ನೀಡಿ, ಸುಟ್ಟ ಗಾಯಗಳಾಗಿರುವ ಸುನಂದಮ್ಮನ ಯೋಗಕ್ಷೇಮವನ್ನು ವಿಚಾರಣೆ ಮಾಡಿಲ್ಲ ಎಂದು ಆಸ್ಪತ್ರೆಗೆ ಭೇಟಿ ನೀಡಿದ ರೈತ ಸಂಘದ ಯುವ ಘಟಕದ ಅಧ್ಯಕ್ಷ ಕಲ್ವಮಂಜಲಿ ರಾಮಶಿವಣ್ಣ ಆರೋಪಿಸಿ ಅಧಿಕಾರಿಗಳ ನಿರ್ಲಕ್ಷತನವನ್ನು ಖಂಡಿಸಿದ್ದಾರೆ.
ಶಾಲೆಯ ಎಸ್.ಡಿ.ಎಂ.ಸಿ. ಅಧ್ಯಕ್ಷೆ ವಿಭೂತಿಪುರ ಜಯಂತಿ, ಬಿಸಿಊಟ ನೌಕರರ ಮುಖಂಡರುಗಳಾದ ಕೋಲಾರ ಮಮತಾ, ಆಶಾ ವರಲಕ್ಷ್ಮಿ, ರಾಧಮ್ಮ, ನಾರಾಯಣಮ್ಮ ರವರುಗಳು ಗಾಯಗೊಂಡಿರುವ ಸುನಂದÀಮ್ಮ ರವರನ್ನು ಭೇಟಿ ಮಾಡಿ ಯೋಗ ಕ್ಷೇಮ ವಿಚಾರಿಸಿ ಧೈರ್ಯ ತುಂಬಿ ಸಂಘಟನೆ ಜೊತೆ ಇದ್ದೇವೆ ಎಂದು ದೈರ್ಯ ತುಂಬುವ ಕೆಲಸ ಮಾಡಿದರು.
ಚಿತ್ರ ೨೨ ಕೆ.ಎಲ್.ಆರ್. ೦೮ : ಶಾಲೆಯಲ್ಲಿ ಬಿಸಿಯೂಟ ತಯಾರು ಮಾಡುವ ಸಂದರ್ಭದಲ್ಲಿ ಕುಕ್ಕರ್ ಸಿಡಿದು ಗಾಯಗೊಂಡ ಸುನಂದಮ್ಮನ ಯೋಗಕ್ಷೇಮವನ್ನು ವಿಚಾರಿಸಿದ ರೈತ ಸಂಘದ ಮುಖಂಡರು.