ವಿಜಯವಾಣಿ ಸುದ್ದಿಜಾಲ ಕೋಲಾರ
ರಾಜ್ಯದಲ್ಲಿ ಕುಂಬಾರ ಸಮುದಾಯದಲ್ಲಿ ಕಡಿಮೆ ಜನಸಂಖ್ಯೆ ಇದ್ದಾರೆ ಎಂದು ಸರ್ಕಾರಗಳು ಸಮುದಾಯವನ್ನು ಗುರುತಿಸುತ್ತಿಲ್ಲ ಎಂಬುವುದನ್ನು ಬಿಟ್ಟು ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಪಡೆಯಲು ಸಂಘಟಿತರಾಗಬೇಕು ಎಂದು ಸಂಸದ ಎಂ ಮಲ್ಲೇಶ್ ಬಾಬು ತಿಳಿಸಿದರು.
ನಗರದ ಟಿ.ಚನ್ನಯ್ಯ ರಂಗಮAದಿರದಲ್ಲಿ ಗುರುವಾರ ಜಿಲ್ಲಾಡಳಿತ, ಜಿಪಂ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಆಯೋಜಿಸಿದ್ದ ಸಂತಕವಿ ಸರ್ವಜ್ಞ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಯಾವುದೇ ಸಮುದಾಯವಾಗಲಿ ಜನಸಂಖ್ಯೆ ಮುಖ್ಯವಲ್ಲ. ಸೌಲಭ್ಯ ಪಡೆಯುವ ಶಕ್ತಿಯನ್ನು ರೂಪಿಸಿಕೊಳ್ಳಬೇಕು. ಸಮುದಾಯದ ಬಂಧುಗಳಿಗೆ ಸರ್ಕಾರಿ ಸೌಲಭ್ಯಗಳ ವಿಚಾರವನ್ನು ಮುಟ್ಟಿಸಿದರೆ ಆ ಸಮುದಾಯ ನಿಮ್ಮ ಜೊತೆಗೆ ಗುರುತಿಸಿಕೊಳ್ಳಲು ಸಾಧ್ಯವಾಗುತ್ತದೆ. ಸರ್ಕಾರದಿಂದ ಸಮುದಾಯದ ಒಳಿತಿಗಾಗಿ ಏನಾದರೂ ಆಗಬೇಕಾದರೆ ನಿಮ್ಮೊಂದಿಗೆ ಸದಾ ಸಿದ್ದ ಎಂದರು.
ಎAಎಲ್ಸಿ ಇಂಚರ ಗೋವಿಂದರಾಜು ಮಾತನಾಡಿ, ಕುಂಬಾರಿಕೆ ವೃತ್ತಿಯಲ್ಲಿ ಬಳಸುವ ಮಣ್ಣಿನ ಮಹತ್ವ ಕಳೆದುಕೊಂಡಿದೆ ಎಲ್ಲೋ ಕೆಲವು ಕಡೆ ಅಷ್ಟೇ ಮಣ್ಣು ಸಿಗುವ ಪರಿಸ್ಥಿತಿ ಬಂದಿದೆ. ಅದರಲ್ಲೂ ಆಧುನಿಕತೆ ಬೆಳೆದಂತೆಲ್ಲಾ ಮಣ್ಣಿನ ವಸ್ತುಗಳ ಮಹತ್ವ ಕಳೆದುಕೊಂಡಿದೆ. ಸಮುದಾಯವು ಮುಂದೆ ಬರಲು ಆದಾಯದ ಮೂಲಗಳನ್ನು ಕಂಡುಕೊಳ್ಳಬೇಕಾಗಿದೆ. ಸರ್ಕಾವು ಸಮುದಾಯಕ್ಕೆ ಒಂದು ನಿಗಮ ಮಾಡಿದೇ ಹಣ ಬಿಡುಗಡೆ ಮಾಡಿಲ್ಲ. ಇದರ ಬಗ್ಗೆ ಪ್ರಶ್ನೆ ಮಾಡಬೇಕು. ನಾನು ಸಣ್ಣ ಸಮುದಾಯಗಳ ಧ್ವನಿಯಾಗಿ ಅಧಿವೇಶನದಲ್ಲಿ ಮಾತಾಡತ್ತೇನೆ ಎಂದರು.
ಜಿಲ್ಲಾ ಸರ್ವಜ್ಞ ಜಯಂತಿ ಆಚರಣಾ ಸಮಿತಿ ಪ್ರಧಾನ ಕಾರ್ಯದರ್ಶಿ ಡಾ.ಕೆ. ನಾಗರಾಜ್ ಮಾತನಾಡಿ, ರಾಜ್ಯದಲ್ಲಿ ಕುಂಬಾರ ಸಮುದಾಯದವು ೧೦ ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಇದ್ದರೂ ಸರ್ಕಾರ ಕೇವಲ ೫ ಲಕ್ಷ ಇದೆ ಎಂದು ತೋರಿಸಿದ್ದಾರೆ. ಶೈಕ್ಷಣಿಕವಾಗಿ, ರಾಜಕೀಯವಾಗಿ ಹಿಂದುಳಿದ ಸಮುದಾಯವಾಗಿದೆ. ಸರ್ಕಾರವು ಕುಂಬಾರ ಅಭಿವೃದ್ಧಿ ನಿಗಮಕ್ಕೆ ಅಧ್ಯಕ್ಷರನ್ನು ನೇಮಕ ಮಾಡಿ ೫೦ ರಿಂದ ೭೫ ಕೋಟಿ ಅನುದಾನ ಬಿಡುಗಡೆ ಮಾಡಬೇಕು. ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಸರ್ವಜ್ಞ ಭವನದ ನಿರ್ಮಾಣಕ್ಕೆ ಸರ್ಕಾರವು ಮುಂದಾಗಬೇಕು. ಕುಂಬಾರ ಸಮುದಾಯವನ್ನು ೨ಎ ಮೀಸಲಾತಿಯಲ್ಲಿ ಒಳ ಮೀಸಲಾತಿಗೆ ಸೇರಿಸಬೇಕು. ಕಂಬಾರರು ತಯಾರಿಸುವ ವಸ್ತುಗಳನ್ನು ಸರ್ಕಾರದ ಪ್ರತಿಯೊಂದು ಇಲಾಖೆಯಲ್ಲಿ ಉಪಯೋಗಿಸಬೇಕು. ವಸ್ತುಗಳಿಗೆ ಬೇಡಿಕೆ ಬರುವಂತೆ ಸರ್ಕಾರವೇ ಉತ್ತೇಜನ ನೀಡಬೇಕು ಎಂದು ಒತ್ತಾಯಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಯಂತಿ ಆಚರಣಾ ಸಮಿತಿಯ ಅಧ್ಯಕ್ಷ ತಬಲ ನಾರಾಯಣಪ್ಪ ಮಾತನಾಡಿ, ಸಮುದಾಯದ ಕಷ್ಟಗಳಿಗೆ ಸರ್ಕಾರದಿಂದ ಬೆಂಬಲವಿಲ್ಲವಾಗಿದೆ. ನಮ್ಮ ಸಮಾಜವು ಒಗ್ಗಟ್ಟಿನಿಂದ ಸರ್ಕಾರದ ಸೌಲಭ್ಯಗಳನ್ನು ಪಡೆಯುವ ವಾತಾವರಣವನ್ನು ನಾವೇ ನಿರ್ಮಿಸಿಕೊಳ್ಳಬೇಕು. ಸಮುದಾಯದ ಪರವಾಗಿ ಧ್ವನಿ ಎತ್ತುವ ಜನಪ್ರತಿನಿಧಿ ಇಲ್ಲವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು,
ಕಾರ್ಯಕ್ರಮಕ್ಕೂ ಮುನ್ನ ನಗರದ ಕುವೆಂಪು ಉದ್ಯಾನವನದ ಕುಂಬಾರ ವಸತಿ ನಿಲಯದಿಂದ ಪ್ರಮುಖ ಬೀದಿಗಳಲ್ಲಿ ಪಲ್ಲಕ್ಕಿಗಳ ಮೆರವಣಿಗೆಯೊಂದಿಗೆ ಟಿ.ಚನ್ನಯ್ಯ ರಂಗಮAದಿರಕ್ಕೆ ಬರಲಾಯಿತು ಇದೇ ಸಂದರ್ಭದಲ್ಲಿ ಸಮುದಾಯದಲ್ಲಿ ಸಾಧನೆ ಮಾಡಿದ ಗಣ್ಯರಿಗೆ ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ತಹಶಿಲ್ದಾರ್ ನಯನ, ಕುಂಬಾಕಲಾ ಅಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಕೆ.ವಿ ಶ್ರೀನಿವಾಸ್, ಮುಖಂಡರಾದ ಮಾಲೂರು ಅಪ್ಪಿ ರಾಜು, ರಾಜು ಶ್ರೀನಿವಾಸಪ್ಪ, ನಂದೀಶ್, ಕೆಂಬೋಡಿ ಶ್ರೀನಿವಾಸ್, ರೆಡ್ಡಿಪ್ಪ, ಜ್ಞಾನಮೂರ್ತಿ, ಚಿಕ್ಕರೆಡ್ಡಪ್ಪ, ಡಾ ಸಹನಾ, ಸರೋಜ, ಮುಂತಾದವರು ಇದ್ದರು.
ಚಿತ್ರ ೨೦ ಕೆ.ಎಲ್.ಆರ್. ೦೧ : ನಗರದ ಚನ್ನಯ್ಯ ರಂಗಮAದಿರದಲ್ಲಿ ಏರ್ಪಡಿಸಲಾಗಿದ್ದ ಸರ್ವಜ್ಞ ಜಯಂತಿ ಕಾರ್ಯಕ್ರಮವನ್ನು ಸಂಸದ ಎಂ.ಮಲ್ಲೇಶ್ ಬಾಬು ಉದ್ಘಾಟಿಸಿ ಮಾತನಾಡಿದರು. ಎಂ.ಎಲ್.ಸಿ. ಇಂಚರ ಗೋವಿಂದರಾಜು ತಹಶೀಲ್ದಾರ್ ನಯನ ಮುಂತಾದವರಿದ್ದರು.