ಹನಗೋಡು: ಹೋಬಳಿಯ ಕಿರಂಗೂರು ಗ್ರಾಮ ಪಂಚಾಯಿತಿಗೆ ಎರಡನೇ ಅವಧಿಗೆ ಅಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ಕಿರಂಗೂರು ಮಧು (ಶುಂಠಿ ಚಿಕ್ಕಣ್ಣ) ಹಾಗೂ ಉಪಾಧ್ಯಕ್ಷರಾಗಿ ಹರಳಹಳ್ಳಿ ಅಣ್ಣಯ್ಯ ಅವಿರೋಧ ಆಯ್ಕೆಯಾದರು.
ಗ್ರಾಪಂ ಕಚೇರಿಯಲ್ಲಿ ಮಂಗಳವಾರ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ 10 ಜನ ಸದಸ್ಯರು ಪಾಲ್ಗೊಂಡಿದ್ದು, ಮೂವರು ಗೈರಾಗಿದ್ದರು. ಚುನಾವಣಾಧಿಕಾರಿಯಾಗಿ ಎನ್.ಉಮೇಶ್ ಕಾರ್ಯ ನಿರ್ವಹಿಸಿದರು.
ಜೆಡಿಎಸ್ ಮುಖಂಡರಾದ ಕಿರಂಗೂರು ಬಸವರಾಜು, ಶಿವರಾಜ್, ಚಿನ್ನಣ್ಣ, ರಾಧಾಕೃಷ್ಣ , ಮಂಜು, ಮಾಧು, ಗಿರೀಶ್, ಸುಂದರ್ ಹರಳಹಳ್ಳಿ, ಮಾದೇಗೌಡ, ಶ್ರೀನಿವಾಸ್, ಪಿಡಿಒ ರಾಮಣ್ಣ ಇತರರು ಹಾಜರಿದ್ದರು.