ಕೊಪ್ಪ ಗ್ರಾಮದ ಬಿ.ಎಂ. ರಸ್ತೆ ಪಕ್ಕದಲ್ಲಿರುವ ಕಾವೇರಿ ಮಾತೆಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಪ್ರಸಾದ್, ಸುನಂದಾ ಕೌಶಿಕ್, ಪ್ರಸನ್ನ ಭಟ್, ರವೀಂದ್ರ ಪ್ರಸಾದ್, ವಿಜೇಂದ್ರ ಪ್ರಸಾದ್, ಜಯಂತಿ ಸೋಮಶೇಖರ್ ಇದ್ದರು.  
ನ್ಯೂಸ್

ಕಾವೇರಿ ಮಾತೆಗೆ ವಿಶೇಷ ಪೂಜೆ

ಬೈಲಕುಪ್ಪೆ: ಹುಣ್ಣಿಮೆ ಅಂಗವಾಗಿ ಕಾವೇರಿ ಮಾತೆಗೆ ಕಾವೇರಿ ಕನ್ನಡ ಸಂಘದಿಂದ ಮಂಗಳವಾರ ವಿಶೇಷ ಪೂಜೆ ಸಲ್ಲಿಸಲಾಯಿತು.

ಪಿರಿಯಾಪಟ್ಟಣ ತಾಲೂಕಿನ ಕೊಪ್ಪ ಗ್ರಾಮದ ಬಿ.ಎಂ. ರಸ್ತೆ ಪಕ್ಕದಲ್ಲಿರುವ ಕಾವೇರಿ ಮಾತೆ ಪ್ರತಿಮೆಗೆ ಸಂಘದ ಅಧ್ಯಕ್ಷ ಪ್ರಸಾದ್ ಅವರ ನೇತೃತ್ವದಲ್ಲಿ 124ನೇ ವಿಶೇಷ ಪೂಜೆ ನೆರವೇರಿಸಲಾಯಿತು.

ಬೆಂಗಳೂರಿನ ಸೇವಾರ್ಥದಾರರಾದ ಸುನಂದಾ ಕೌಶಿಕ್, ಅರ್ಚಕ ಪ್ರಸನ್ನ ಭಟ್ ಪ್ರತಿಮೆಯನ್ನು ಸ್ವಚ್ಛಗೊಳಿಸಿ ಹೊಸ ಸೀರೆ, ಒಡವೆಗಳನ್ನು ಧರಿಸಿ ವಿವಿಧ ಹೂಗಳಿಂದ ಅಲಂಕರಿಸಿದರು. ಬಳಿಕ ಹೋಮ, ಮಹಾಮಂಗಳಾರತಿ ನೆರವೇರಿಸಲಾಯಿತು. ನಂತರ ಭಕ್ತರಿಗೆ ಪ್ರಸಾದ ವಿನಿಯೋಗ ಮಾಡಲಾಯಿತು.

ಸಂಘದ ಸದಸ್ಯರಾದ ರವೀಂದ್ರ ಪ್ರಸಾದ್, ವಿಜೇಂದ್ರ ಪ್ರಸಾದ್, ತಾಲೂಕ ಪಂಚಾಯತಿ ಮಾಜಿ ಸದಸ್ಯೆ ಜಯಂತಿ ಸೋಮಶೇಖರ್, ಅವರ್ತಿ ಗ್ರಾಮ ಪಂಚಾಯಿತಿ ಸದಸ್ಯ ಮಂಜು, ಚಂದ್ರು, ಪುಟ್ಟರಾಜ್, ವಿಜಯಕುಮಾರ್ ಇತರರಿದ್ದರು