ನ್ಯೂಸ್

ಕಾಲ್ಚೆಂಡು ಪಂದ್ಯಾಟಕ್ಕೆ ಚಾಲನೆ

ವಿರಾಜಪೇಟೆ : ಇಲ್ಲಿನ ತಾಲೂಕು ಮೈದಾನದಲ್ಲಿ ಕಂಪಾನಿಯನ್ಸ್ ತಂಡ ವತಿಯಿಂದ ಆಯೋಜಿಸಿದ್ದ 5’ಸ್ ಕಾಲ್ಚೆಂಡು ಪಂದ್ಯಾಟಕ್ಕೆ ಶಾಸಕ ಎ.ಎಸ್.ಪೊನ್ನಣ್ಣ ಶನಿವಾರ ಚಾಲನೆ ನೀಡಿದರು. ನಶೆಯಿಂದಾಗುವ ದುಷ್ಪರಿಣಾಮ ಹಾಗೂ ಯುವ ಜನತೆ ಡ್ರಗ್ಸ್‌ನಿಂದ ದೂರವಿರಬೇಕು ಎಂಬ ಸಂದೇಶ ಸಾರುವ ಉದ್ದೇಶದಿಂದ ಸಾಂಕೇತಿಕವಾಗಿ ನಶೆಯ ನಕಲನ್ನು ಶಾಸಕರು ಸುಟ್ಟರು.

ಜಗತ್ತಿನಾದ್ಯಂತ ಬಹುತೇಕ ಎಲ್ಲ ರಾಷ್ಟ್ರಗಳು ಫುಟ್ಬಾಲ್ ಕ್ರೀಡೆಗೆ ವಿಶೇಷ ಆದ್ಯತೆ ನೀಡುತ್ತಿದೆ. ನಮ್ಮ ದೇಶದಲ್ಲಿಯೂ ಫುಟ್ಬಾಲ್ ಕ್ರೀಡೆ ಜನಪ್ರಿಯಗೊಳ್ಳುತ್ತಿದ್ದು, ಇಂದು ಸಾಮಾಜಿಕ ಕಳಕಳಿ ಉದ್ದೇಶದಿಂದ ಆಯೋಜನೆಗೊಂಡಿರುವ ಈ ಪಂದ್ಯಾವಳಿಯು ನಾಡಿಗೆ ಉತ್ತಮ ಫುಟ್ಬಾಲ್ ಪಟುಗಳನ್ನು ನೀಡುವಂತಾಗಲಿ ಎಂದು ಹಾರೈಸಿದರು.

ಪುರಸಭೆ ಸದಸ್ಯ ಮಹಮ್ಮದ್ ರಫಿ, ಡಿಸಿಸಿ ಸದಸ್ಯ ಸತೀಶ್, ಮಂಜುನಾಥ್ ಇತರರಿದ್ದರು.