ರಾಯಚೂರು
ಚಾಲಕನ ಹಿಡಿತ ತಪ್ಪಿ ತುಂಗಭದ್ರಾ ಎಡದಂಡೆ ಕಾಲುವೆಗೆ ಕಾರ್ ಉರುಳಿ ಬಿದ್ದು ಇಬ್ಬರು ಮೃತಪಟ್ಟಿದ್ದಾರೆ.
ರಾಯಚೂರು ಜಿಲ್ಲೆ ಮಸ್ಕಿ ತಾಲೂಕಿನ ಗುಡದೂರು ಬಳಿಯ ತುಂಗಭದ್ರಾ ಎಡದಂಡೆ ಕಾಲುವೆಯಲ್ಲಿ ಘಟನೆ ಜರುಗಿದೆ.
ಆಂಧ್ರದ ನೋಂದಣಿ ಇರುವ ಕಾರು ನೆಕ್ಕುಂಟಿ ಶ್ರೀನಿವಾಸ ಎನ್ನುವವರಿಗೆ ಸೇರಿದ್ದು ಎನ್ನಲಾಗುತ್ತಿದೆ.
ಪೊಲೀಸರು ಕಾಲುವೆಯಿಂದ ಕಾರ್ ತೆಗೆಯಲು ಪ್ರಯತ್ನ ನಡೆಸಿದ್ದಾರೆ.