ನ್ಯೂಸ್

ಕಾಲುಬಾಯಿ, ಚರ್ಮಗಂಟು ರೋಗ ಹರಡದಂತೆ ಲಸಿಕೆ ಅಭಿಯಾನ / ಜಾನುವಾರುಗಳಿಗೆ ಲಸಿಕೆ ಕಡ್ಡಾಯ / ಡಾ. ನಿತಿನ್

ವಿಜಯವಾಣಿ ಸುದ್ದಿಜಾಲ ಕೋಲಾರ

ಜಾನುವಾರುಗಳಿಗೆ ಆಗಿಂದಾಗ್ಗೆ ಕಾಲು ಬಾಯಿ ಜ್ವರ ಹಾಗು ಚರ್ಮ ಗಂಟು ರೋಗಗಳು ಹರಡುತ್ತಿರುತ್ತವೆ. ಆದ್ದರಿಂದ ಮುಂಜಾಗ್ರತಾ ಕ್ರಮವಾಗಿ ಜಾನುವಾರುಗಳಿಗೆ ಲಸಿಕೆ ಹಾಕಲಾಗುತ್ತದೆ. ಎಲ್ಲರು ತಮ್ಮ ಜಾನುವಾರುಗಳಿಗೆ ಲಸಿಕೆ ಹಾಕಿಸಿಕೊಳ್ಳಬೇಕು ಎಂದು ಪಶು ಆರೋಗ್ಯಾಧಿಕಾರಿ ಡಾ.ನಿತಿನ್ ತಿಳಿಸಿದರು.

ಕೋಲಾರ ತಾಲ್ಲೂಕಿನ ಅರಾಭಿಕೊತ್ತನೂರು ಗ್ರಾಮದಲ್ಲಿ ಜಾನುವಾರುಗಳಿಗೆ ಲಸಿಕೆ ನೀಡಿ ಮಾತನಾಡಿ, ಕಾಲು ಬಾಯಿ ಜ್ವರ ಹಾಗು ಚರ್ಮ ಗಂಟು ರೋಗಗಳು ಅತೀ ವೇಗವಾಗಿ ಜಾನುವಾರುಗಳಿಗೆ ಹರಡುವ ರೋಗಗಳಾಗಿದ್ದು, ರೋಗ ಹರಡುವ ಮೊದಲೇ ರೈತರು ಜಾನುವಾರುಗಳಿಗೆ ಲಸಿಕೆಗಳನ್ನು ಹಾಕಿಸಿದರೆ ರೋಗಗಳನ್ನು ತಡೆಗಟ್ಟಬಹುದು, ೪ ತಿಂಗಳ ವಯಸ್ಸಿನ ಒಳಗಿನ ಹಾಗು ೯ ತಿಂಗಳ ಗರ್ಭಿಣಿ ಜಾನುವಾರುಗಳನ್ನು ಹೊರೆತುಪಡಿಸಿ ಉಳಿದ ಎಲ್ಲಾ ಜಾನುವಾರುಗಳಿಗೆ ಲಸಿಕೆಯನ್ನು ಉಚಿತವಾಗಿ ಹಾಕಲಾಗುತ್ತಿದೆ. ರೈತರು ಹತ್ತಿರದ ಪಶು ಆರೋಗ್ಯ ಕೇಂದ್ರಗಳಿಗೆ ಭೇಟಿ ಅಲ್ಲಿ ಲಸಿಕೆಗಳನ್ನು ಹಾಕಿಸಿಕೊಳ್ಳಬೇಕು ಎಂದರು.

ಲಸಿಕೆ ಕಾರ್ಯಕ್ರಮದಲ್ಲಿ ಅರಾಭಿಕೊತ್ತನೂರು ಹಾಲು ಉತ್ಪಾದಕರರ ಸಹಕಾರ ಸಂಘದ ಕಾರ್ಯದರ್ಶಿ ಶಿವಣ್ಣ, ಪಶು ಆರೋಗ್ಯ ಕೇಂದ್ರದ ಮುನಿರಾಜು, ಗ್ರಾಮಸ್ಥರು ಹಾಜರಿದ್ದರು.

ಚಿತ್ರ ೨೪ ಕೆ.ಎಲ್.ಆರ್. ೦೬ : ಅರಾಭಿಕೊತ್ತನೂರು ಗ್ರಾಮದಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ರಾಸುಗಳಿಗೆ ಕಾಲುಬಾಯಿ ಜ್ವರ ಹಾಗೂ ಚರ್ಮ ರೋಗಗಳು ಹರಡದಂತೆ ಲಸಿಕೆ ಅಭಿಯಾನವನ್ನು ಕೈಗೊಳ್ಳಲಾಯಿತು. ಪಶು ಆರೋಗ್ಯಾಧಿಕಾರಿ ಡಾ.ನಿತಿನ್ ಹಾಲು ಉತ್ಪಾದಕರ ಸಹಕಾರ ಸಂಘ ಕಾರ್ಯದರ್ಶಿ ಶಿವಣ್ಣ ಮುಂತಾದವರು ಇದ್ದಾರೆ.