ನ್ಯೂಸ್

ಕಾರ್ಯಕ್ರಮ ಅನುಷ್ಠಾನಕ್ಕೆ ಸ್ಮಾರ್ಟ್‌ೆನ್

ಎನ್.ವೆಂಕಟೇಶ್ ಚಿಕ್ಕಬಳ್ಳಾಪುರ

ಅಂಗನವಾಡಿ ಕಾರ್ಯಕರ್ತೆಯರಿಗೆ ಸ್ಮಾರ್ಟ್ ಫೋನ್ ವಿತರಣೆಯು ರಾಷ್ಟ್ರೀಯ ಪೋಷಣ್ ಅಭಿಯಾನ್ ಸೇರಿ ಸರ್ಕಾರದ ವಿವಿಧ ಕಾರ್ಯಕ್ರಮಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಸಹಕಾರಿಯಾಗಿದೆ.

ಜಿಲ್ಲೆಯಲ್ಲಿ 1961 ಅಂಗನವಾಡಿ ಕೇಂದ್ರಗಳಿದ್ದು ಈಗಾಗಲೇ 2035 ಕಾರ್ಯಕರ್ತೆಯರಿಗೆ ಸ್ಮಾರ್ಟ್ ಪೋನ್, ಸಿಮ್ ಕಾರ್ಡ್, ಪವರ್ ಬ್ಯಾಂಕ್ ಮತ್ತು ಇತರ ಪರಿಕರಗಳನ್ನು ವಿತರಿಸಲಾಗಿದೆ. ಜತೆಗೆ ಇದರ ಬಳಕೆ, ದತ್ತಾಂಶ ಸಂಗ್ರಹ ಸೇರಿ ಮಹತ್ವದ ವಿಚಾರಗಳ ಬಗ್ಗೆ ಕುರಿತು ತರಬೇತಿ ನೀಡಲಾಗಿದೆ. ಇದರಿಂದ ಅಭಿಯಾನದ ಲಾನುಭವಿಗಳ ಆರೈಕೆ ಮತ್ತಷ್ಟು ಸುಗಮ, ಉತ್ತಮ ಕಾರ್ಯ ನಿರ್ವಹಣೆಗೆ ಅನುಕೂಲವಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ರಾಷ್ಟ್ರೀಯ ಪೋಷಣ್ ಅಭಿಯಾನದ ಮುಖ್ಯ ಉದ್ದೇಶವು ಶಿಶು ಮತ್ತು ತಾಯಂದಿರ ಆರೋಗ್ಯ ಕಾಪಾಡುವುದಾಗಿದೆ. ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳ ವಿವರ, ಅವರ ತೂಕ, ಎತ್ತರ, ನೀಡಿದ ಆಹಾರ ಮತ್ತು ಕೇಂದ್ರ ವ್ಯಾಪ್ತಿಯಲ್ಲಿರುವ ಗರ್ಭಿಣಿಯರು, ಬಾಣಂತಿಯರ ಸಂಖ್ಯೆ ಸೇರಿ ಹಲವು ಮಾಹಿತಿಯನ್ನು ಆಗಿಂದಾಗಲೇ ಸ್ಮಾರ್ಟ್ ಫೋನ್ ಮೂಲಕ ದಾಖಲಿಸಲಾಗುತ್ತದೆ. ಮಕ್ಕಳಿಗೆ ಚುಚ್ಚುಮದ್ದು, ಮಾತೃಪೂರ್ಣ, ಮಾತವಂದನಾ ಸೇರಿ 40 ಬಗೆಯ ಕಾರ್ಯಕ್ರಮ ದತ್ತಾಂಶ ಸಂಗ್ರಹ ಮತ್ತು ವರದಿ ಸಲ್ಲಿಸಲಾಗುತ್ತದೆ. ಸ್ಮಾರ್ಟ್ ಫೋನ್‌ಗಳಿಗೆ ಸಿಎಎಸ್, ಸ್ನೇಹ ಮತ್ತು ಇಂಟಗ್ರೇಟೆಡ್ ಚೈಲ್ಡ್ ಡೆವಲಪ್‌ಮೆಂಟ್ ಸರ್ವೀಸಸ್ ಕಾಮನ್ ಅಪ್ಲಿಕೇಶನ್ ತಂತ್ರಾಂಶ ಅಳವಡಿಸಲಾಗಿದೆ. ಇದರ ಮೂಲಕ ಅಂಗನವಾಡಿ ಕಾರ್ಯಕರ್ತೆಯರು ರವಾನಿಸಿರುವ ಪ್ರತಿಯೊಂದು ಮಾಹಿತಿಯನ್ನೂ ನೇರವಾಗಿ ಜಿಲ್ಲಾ, ರಾಜ್ಯ ಮತ್ತು ಕೇಂದ್ರ ಮಟ್ಟದ ಅಧಿಕಾರಿಗಳು ಮೇಲ್ವಿಚಾರಣೆ ನಡೆಸಲಿದ್ದಾರೆ.

ಲಾನುಭವಿಗೂ ಮಾಹಿತಿ! : ಅಂಗನವಾಡಿ ಕಾರ್ಯಕರ್ತೆಯರು ಸ್ಮಾರ್ಟ್‌ಫೋನ್‌ನಲ್ಲಿರುವ ತಂತ್ರಾಂಶಗಳಲ್ಲಿ ಗರ್ಭಧಾರಣೆಯಿಂದ ಹಿಡಿದು ಶಿಶು ಮತ್ತು ತಾಯಂದಿರ ಆರೋಗ್ಯ ಹಾಗೂ ಪೌಷ್ಟಿಕ ಬೆಳವಣಿಗೆ ಹಾಗೂ ಸೇವೆಗಳ ಕುರಿತು ದಾಖಲಿಸುವ ಮಾಹಿತಿಯು ಸಂಬಂಧಪಟ್ಟ ಆಯಾ ಲಾನುಭವಿಗಳ ಮೊಬೈಲ್ ಸಂಖ್ಯೆಗೆ ಎಸ್‌ಎಂಎಸ್ ಮೂಲಕ ತಿಳಿಯುತ್ತದೆ.