ತ್ಯಾಗರ್ತಿ ಗ್ರಾಪಂ ಆವರಣದಲ್ಲಿ ಕಾರ್ಮಿಕ ಇಲಾಖೆಯಿಂದ ಆಯೋಜಿಸಿದ್ದ ಆರೋಗ್ಯ ತಪಾಸಣಾ ಶಿಬಿರದಲ್ಲಿ ಪಿಡಿಒ ರಾಜು, ಡಾ. ಸಂಪತ್, ರಕ್ಷಾ, ಕೀರಯ್ಯ, ನವ್ಯಾ, ಸಿಂಧು ಇತರರಿದ್ದರು. 
ನ್ಯೂಸ್

ಕಾರ್ಮಿಕರು ಆರೋಗ್ಯ ಕಾಳಜಿ ವಹಿಸಲಿ

ತ್ಯಾಗರ್ತಿ: ಗ್ರಾಮೀಣ ಭಾಗದ ಶ್ರಮಿಕ ವರ್ಗದವರು ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಆರೋಗ್ಯದಲ್ಲಿ ತೊಂದರೆ ಕಂಡು ಬಂದರೆ ತಕ್ಷಣ ಹತ್ತಿರದ ಆರೋಗ್ಯ ಕೇಂದ್ರದಲ್ಲಿ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಪಿಡಿಒ ರಾಜು ಹೇಳಿದರು.

ಇಲ್ಲಿನ ಗ್ರಾಪಂ ಆವರಣದಲ್ಲಿ ಮಂಗಳವಾರ ಕರ್ನಾಟಕ ಕಟ್ಟಡ ಹಾಗೂ ಇತರ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ಕಾರ್ಮಿಕರಿಗೆ ಹಾಗೂ ಅವರ ಅವಲಂಬಿತರಿಗೆ ಏರ್ಪಡಿಸಿದ್ದ ಉಚಿತ ಆರೋಗ್ಯ ತಪಾಸಣಾ ಅಭಿಯಾನದಲ್ಲಿ ಅವರು ಮಾತನಾಡಿದರು.

ಖಾಸಗಿ ಆಸ್ಪತ್ರೆಯಲ್ಲಿ ಆರೋಗ್ಯ ಸೇವೆಗಳು ದುಬಾರಿಯಾಗಿದೆ. ಇಂತಹ ಸಂದರ್ಭದಲ್ಲಿ ಸರ್ಕಾರ ಉಚಿತವಾಗಿ ಹಳ್ಳಿಯ ಜನರಿಗೆ ಆರೋಗ್ಯ ತಪಾಸಣಾ ಸೌಲಭ್ಯ ಒದಗಿಸುತ್ತಿದೆ. ನರೇಗಾ ಕೂಲಿ ಕಾರ್ಮಿಕರು, ಕಟ್ಟಡ ಕಾರ್ಮಿಕರು ಕೆಲಸದ ವೇಳೆಯಲ್ಲಿ ಸಾಕಷ್ಟು ಮುನ್ನೆಚ್ಚರಿಕೆ ವಹಿಸಬೇಕು. ಕೆಲವು ಕಾಯಿಲೆಗಳನ್ನು ಪ್ರಾರಂಭ ಹಂತದಲ್ಲಿಯೆ ಗುರುತಿಸಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದರು.

ವೈದ್ಯಕೀಯ ತಂಡದ ಪ್ರಮುಖ ಡಾ. ಸಂಪತ್ ನಾಯ್ಕ ಮಾತನಾಡಿ, ಕಾರ್ಮಿಕರಿಗೆ ಮತ್ತು ಅವರ ಅವಲಂಬಿತರಿಗೆ ನುರಿತ ವೈದ್ಯಕೀಯ ಶುಶ್ರೂಷಕರ ತಂಡದಿಂದ ಆಧುನಿಕ ಉಪಕರಣಗಳನ್ನು ಬಳಸಿಕೊಂಡು ವಿವಿಧ ರೀತಿಯ ಲಿವರ್ ಂಕ್ಷನ್, ಬಿಪಿ, ಡಯಾಬಿಟಿಸ್, ಮೂತ್ರ, ಕಣ್ಣು, ಕಿವಿ ಪರೀಕ್ಷೆ ನಡೆಯಲಿದೆ. ಯಾವುದೇ ಗಂಭೀರ ಕಾಯಿಲೆ ಇದ್ದರೂ ಗುರುತಿಸಿ ಮುಂದಿನ ಚಿಕಿತ್ಸೆಗೆ ಸಹಾಯ ಮಾಡಲಾಗುತ್ತದೆ ಎಂದು ಹೇಳಿದರು. ವೈದ್ಯಕೀಯ ತಂಡದ ಪ್ರಮುಖರಾದ ಖಿರಯ್ಯ, ನವ್ಯಾ, ಎನ್.ಜಿ.ರಕ್ಷಾ, ಸಿಂಧು, ರವಿಕುಮಾರ್, ಗ್ರಾಪಂ ಕಾರ್ಯದರ್ಶಿ ಆರ್.ರಿತ್ತೇಶ್ ಇತರರಿದ್ದರು.