ಶೃಂಗೇರಿ: ಮಲೆನಾಡಿನಲ್ಲಿ ಪ್ರಸ್ತುತ ನಕ್ಸಲ್ ಸಮಸ್ಯೆ ಇದೆ. ನಕ್ಸಲ್ ಹಾಗೂ ಈಶ್ಯಾನಭಾರತದ ಜನರು ಕೆಲಸ ಅರಸಿ ಮಲೆನಾಡಿಗೆ ವಲಸೆ ಬರುವುದು ಹೆಚ್ಚಾಗಿದೆ. ಹಾಗಾಗಿ ಗುತ್ತಿಗೆದಾರರು ಮತ್ತು ರೈತರು ಕೆಲಸ ನೀಡುವಾಗ ಅವರ ಆಧಾರ್ ಕಾರ್ಡ್, ರೇಷನ್ ಕಾರ್ಡ್ ಹಾಗೂ ಸಂಪೂರ್ಣ ಮಾಹಿತಿ ಪಡೆದು ಪೊಲೀಸ್ ಇಲಾಖೆಗೆ ನೀಡಬೇಕು ಎಂದು ಕೊಪ್ಪ ವೃತ್ತದ ಪೊಲೀಸ್ ಉಪಅಧೀಕ್ಷಕ ಬಾಲಾಜಿಸಿಂಗ್ ತಿಳಿಸಿದರು.
ಪ್ರವಾಸಿ ಮಂದಿರದಲ್ಲಿ ಮಂಗಳವಾರ ಪೊಲೀಸ್ ಇಲಾಖೆ ಆಯೋಜಿಸಿದ್ದ ರೈತರು ಹಾಗೂ ಗುತ್ತಿಗೆದಾರರ ಸಭೆಯಲ್ಲಿ ಮಾತನಾಡಿದರು. ಬಾಂಗ್ಲಾದೇಶದಿಂದ ಗಡಿದಾಟಿ ಭಾರತಕ್ಕೆ ವಲಸೆ ಬರುವವರ ಸಂಖ್ಯೆ ಹೆಚ್ಚುತ್ತಿದೆ. ಸುರಕ್ಷಿತ ಸ್ಥಳವೆಂದು ಮಲೆನಾಡಿಗೆ ಬರುತ್ತಿದ್ದಾರೆ. ಅವರಲ್ಲಿ ಗುಂಪು ಘರ್ಷಣೆ ಸಾಮಾನ್ಯವಾಗಿದೆ. ರೈತರು ತಮ್ಮ ಸುರಕ್ಷತೆಗಾಗಿ ತೋಟ ಮತ್ತು ಮನೆಗಳಲ್ಲಿ ಸಿಸಿ ಕ್ಯಾಮರ ಅಳವಡಿಸಿಕೊಳ್ಳಬೇಕು. ಯಾವುದೇ ಅಹಿತಕರ ಘಟನೆ ನಡೆದಾಗ ಕೂಡಲೇ ಇಲಾಖೆಗೆ ಮಾಹಿತಿ ನೀಡಬೇಕು ಎಂದರು. ಸಭೆಯಲ್ಲಿ ಪೊಲೀಸ್ ಉಪನಿರೀಕ್ಷಕ ಮಹೇಶ್ ಮೇಲ್‌ಗಿರಿ, ಉಪಠಾಣಾಧಿಕಾರಿ ಡಾ. ಮೋಹನ್ ಕುಮಾರ್, ಕೃಷಿಕರಾದ ಮಲ್ಲಪ್ಪಹೆಗಡೆ, ಭರತ್‌ರಾಜ್, ಬೇಗಾನೆ ಪ್ರಸನ್ನ, ಗೋಪಾಲ ಹೆಗಡೆ, ಸುರೇಶ್ ತಲಗಾರು, ಹೆಚ್ಗುಂದ ವೆಂಕಟೇಶ್ ಇದ್ದರು.