ಮೈಸೂರು: ಅಂತಾರಾಷ್ಟ್ರೀಯ ಲಿಂಗಾಯತ್ ಯೂತ್ ಫೋರಂ ವತಿಯಿಂದ ನಗರದಲ್ಲಿ ಮೂರು ದಿನಗಳ ಕಾಲ ಆಯೋಜಿಸಿರುವ ವೀರಶೈವ-ಲಿಂಗಾಯತ ಗ್ಲೋಬಲ್ ಕಾನ್‌ಕ್ಲೇವ್ ಕಾರ್ಯಕ್ರಮದ ಯಶಸ್ಸಿಗೆ ಎಲ್ಲರೂ ಸಹಕಾರ ನೀಡಬೇಕು ಎಂದು ಅಖಿಲ ಭಾರತ ವೀರಶೈವ ಮಹಾಸಭಾದ ಸಂಘಟನಾ ಕಾರ್ಯದರ್ಶಿ ಪ್ರತಿಧ್ವನಿ ಪ್ರಸಾದ್ ಮನವಿ ಮಾಡಿದ್ದಾರೆ.
ಆರ್ಥಿಕ ಮಾರ್ಗದರ್ಶನ, ಬೃಹತ್ ಆರೋಗ್ಯ ಸಮಾವೇಶ, ಬೃಹತ್ ಆಹಾರ ಮೇಳ, ಉಚಿತ ಸಿಪಿಆರ್ ಟ್ರೈನಿಂಗ್ ಕಾರ್ಯಕ್ರಮ ಪ್ರಮುಖ ಆಕರ್ಷಣೆಯಾಗಿದ್ದು, ಸಾರ್ವಜನಿಕರು ಹಾಗೂ ಉದ್ಯಮಿಗಳಿಗೆ ಈ ಕಾನ್‌ಕ್ಲೇವ್ ಸಹಕಾರಿಯಾಗಲಿದೆ. ಇಂತಹ ಕಾರ್ಯಕ್ರಮ ಎಲ್ಲರೂ ಹಾಜರಾಗಿ ಅನುಕೂಲ ಪಡೆಯಬಹುದಾಗಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ವೀರಶೈವ ಲಿಂಗಾಯತ ಸಮಾಜದವರಿಗೆಂದೇ ಗ್ಲೋಬಲ್ ಬ್ಯುಸಿನೆಸ್ ಕಾನ್‌ಕ್ಲೇವ್ ಆಯೋಜನೆ ಮಾಡಿರುವುದು ಒಳ್ಳೆಯ ಬೆಳವಣಿಗೆ. ಎಕ್ಸಿಬಿಷನ್‌ನಲ್ಲಿ ವಿವಿಧ ಉದ್ಯಮಗಳ 150ಕ್ಕೂ ಹೆಚ್ಚು ಮಳಿಗೆಗಳು ಇದಲಿದ್ದು, ದಿಗ್ಗಜ ಉದ್ಯಮಿಗಳು, ಅಧಿಕಾರಿಗಳು ಹಾಗೂ ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿರುವವರು ಭಾಷಣ ಮಾಡಲಿದ್ದಾರೆ. ಅಲ್ಲದೆ ಶೈಕ್ಷಣಿಕ ಸಂಸ್ಥೆಗಳಿಗೆಂದೇ ವಿಶೇಷ ಪೆವಿಲಿಯನ್ ಇದ್ದು, ಇದರಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ.
ಉದ್ಯಮದಲ್ಲಿ ಆಸಕ್ತಿ ಇರುವವರನ್ನು ಉತ್ತೇಜಿಸಲು ಸ್ಟಾರ್ಟ್‌ಪ್ ಸೆಲ್ ಎಂಬ ವಿಶೇಷ ಪೆವಿಲಿಯನ್ ಇದ್ದು, ವಿವಿಧ ವಿಷಯಾಧಾರಿತ ಸೆಮಿನಾರ್‌ಗಳೂ ಇರಲಿವೆ ಎಂದು ಮಾಹಿತಿ ನೀಡಿದ್ದಾರೆ.