ಆಗಸ್ಟ್ 12 ರಂದು ಸುಮಾರು 22 ವರ್ಷದ ತಾಮರ ಭರಣಿ ಹಾಗೂ 1 ವರ್ಷದ ಕೃತಿಕ ಎಂಬುವವರು ಕಾಣೆಯಾಗಿದ್ದು, ಮೈಸೂರು ದಕ್ಷಿಣ ಪೊಲೀಸ್ ಪ್ರಕರಣ ದಾಖಲಾಗಿದೆ.
ಚಹರೆ: ತಾಮರ ಭರಣಿ, ಸುಮಾರು 22 ವರ್ಷ ವಯಸ್ಸಾಗಿದ್ದು, 5.5 ಅಡಿ ಎತ್ತರ, ಸಾಧಾರಣ ಮೈಕಟ್ಟು, ಎಣ್ಣೆಗೆಂಪು ಬಣ್ಣ, ಬಲದ ಕೈನಲ್ಲಿ ಇಂಗ್ಲೀಷ್‌ನ K ಹಾಗೂ ಎಡಗೈಯಲ್ಲಿ ಇಂಗ್ಲೀಷ್‌ನ N T ಎಂದು ಹಚ್ಚೆ ಹಾಕಿಸಿರುತ್ತಾಳೆ ಮನೆಯಿಂದ ಹೋಗುವಾಗ ಕ್ರಿಮ್ ಬಣ್ಣದ ಟಾಪ್ ಬಿಳಿ ಬಣ್ಣದ ಪ್ಯಾಂಟದ ಮತ್ತೆ ವೆಲ್ ಧರಿಸಿದ್ದು ಕನ್ನಡ ತಮಿಳು, ತೆಲಗು ಭಾಷೆ ಮಾತನಾಡುತ್ತಾರೆ.
ಕೃತಿಕ ಸುಮಾರು 1 ವರ್ಷ ವಯಸ್ಸಾಗಿದ್ದು, 2.1 ಅಡಿ ಎತ್ತರ, ಎಣ್ಣೆಕೆಂಪು ಬಣ್ಣ, ಕೆಂಪು ಬಣ್ಣದ ಪ್ರಾಕ್ ಧರಿಸಿದ್ದು ತಲೆಯಲ್ಲಿ ಕಾಫಿ ಬಣ್ಣದ ಟೋಪಿ ಧರಿಸಿರುತ್ತಾಳೆ.
ಕಾಣೆಯಾದ ವ್ಯಕ್ತಿಯ ಬಗ್ಗೆ ಮಾಹಿತಿ ಕಂಡುಬoದಲ್ಲಿ ಮೈಸೂರು ಜಿಲ್ಲಾ ಪೊಲೀಸ್ ಕಂಟ್ರೋಲ್ ರೂಂ: 0821-2418612 ಅಥವಾ ಮೈಸೂರು ಸೌತ್ ಪೊಲೀಸ್ ಠಾಣೆಯ ದೂ.ಸಂ:0821-2444955, 9480805045 ನ್ನು ಸಂಪರ್ಕಿಸಬಹುದು ಎಂದು ಮೈಸೂರು ದಕ್ಷಿಣ ಪೊಲೀಸ್ ಠಾಣೆಯ ಠಾಣಾಧಿಕಾರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.