ಸೆಪ್ಟೆಂಬರ್ 23 ರಂದು ಸುಮಾರು 48 ವರ್ಷದ ಡಿ.ಪಿ. ರವಿ ಹಾಗೂ 38 ವರ್ಷದ ಲಕ್ಷಿö್ಮ ಅವರು ಕಾಣೆಯಾಗಿದ್ದು, ಮೈಸೂರು ದಕ್ಷಿಣ ಪೊಲೀಸ್ ಪ್ರಕರಣ ದಾಖಲಾಗಿದೆ.
ಚಹರೆ: ಡಿ.ಪಿ ರವಿ, ಸುಮಾರು 48 ವರ್ಷ ವಯಸ್ಸಾಗಿದ್ದು, ದುಂಡುಮುಖ ದೃಡಕಾಯ ಶರೀರ, ಎಣ್ಣೆ ಗೆಂಪುಬಣ್ಣ, ಬಿಳಿ ಮತ್ತು ಕಪ್ಪು ಬಣ್ಣ ಮಿಶ್ರಿತ ತಲೆಕೂದಲು. ಕಾಣೆಯಾದ ಸಂದರ್ಭದಲ್ಲಿ ಬಿಳಿ ಬಣ್ಣದ ಅರ್ಧ ತೋಳಿನ ಶರ್ಟ್ ಮೇಲೆ ಕಪ್ಪು ಜಾಕೇಟ್ ಮತ್ತು ಕಪ್ಪು ಬಣ್ಣದ ಪ್ಯಾಂಟ್ ಧರಿಸಿರುತ್ತಾರೆ. ಹಾಗೂ ಲಕ್ಷ್ಮಿ, ಸುಮಾರು 38 ವರ್ಷ ವಯಸ್ಸಾಗಿದ್ದು, ದುಂಡುಮುಖ ದೃಡಕಾಯ ಶರೀರ, ಎಣ್ಣೆ ಗೆಂಪುಬಣ್ಣ, ಬಲಕೆನ್ನೆಯ ಮೇಲೆ ಕಪ್ಪು ಕಾರೆಹರಳಿನ ಗುರುತು ಇರುತ್ತೆ. ಕಪ್ಪ ಬಣ್ಣ ತಲೆಕೂದಲು, ಕೆಂಪು ರವಿಕೆ ಹಸಿರು ಸೀರೆ ಧರಿಸಿರುತ್ತಾರೆ.
ಕಾಣೆಯಾದ ವ್ಯಕ್ತಿಯ ಬಗ್ಗೆ ಮಾಹಿತಿ ಕಂಡುಬoದಲ್ಲಿ ಮೈಸೂರು ಜಿಲ್ಲಾ ಪೊಲೀಸ್ ಕಂಟ್ರೋಲ್ ರೂಂ: 0821-2418612 ಅಥವಾ ಮೈಸೂರು ಸೌತ್ ಪೊಲೀಸ್ ಠಾಣೆಯ ದೂ.ಸಂ: 0821-2444955, 9480805045 ನ್ನು ಸಂಪರ್ಕಿಸಬಹುದು ಎಂದು ಮೈಸೂರು ದಕ್ಷಿಣ ಪೊಲೀಸ್ ಠಾಣೆಯ ಠಾಣಾಧಿಕಾರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.