ನ್ಯೂಸ್

ಕಾಣಿಕೆ ಡಬ್ಬಿಯಲ್ಲಿ ಪತ್ತೆಯಾದ ನಕಲಿ ನೋಟಿನಲ್ಲಿ ಅವಹೇಳನ ಬರಹ

ಮಂಗಳೂರು: ನಗರದ ವಿವಿಧ ದೈವಸ್ಥಾನದ ಕಾಣಿಕೆ ಹುಂಡಿಗಳಲ್ಲಿ ನಕಲಿ ನೋಟುಗಳಲ್ಲಿ ಅವಹೇಳನ ಬರಹ ಬರೆದು ಹಾಕಿರುವ ಘಟನೆ ಬೆಳಕಿಗೆ ಬಂದಿದೆ.

ಬಾಬುಗುಡ್ಡೆ ಬಬ್ಬುಸ್ವಾಮಿ ಕ್ಷೇತ್ರ ಹಾಗು ಕೊಟ್ಟಾರದ ಕಲ್ಲುರ್ಟಿ ದೈವಸ್ಥಾನದಲ್ಲಿ ಪ್ರಕರಣ ನಡೆದಿರುವ ಕುರಿತು ಮಾಹಿತಿ ಲಭ್ಯವಾಗಿದೆ. ಕ್ರೈಸ್ತ ಧರ್ಮ ಪ್ರತಿಪಾದಿಸಿ ಬರಹ ಬರೆದಿರುವ ದುಷ್ಕರ್ಮಿಗಳು , ಹಿಂದೂ ಧರ್ಮವನ್ನು ಅವಹೇಳ ಮಾಡುವುದರ ಜೊತೆಗೆ ಬಳಸಿದ ಕಾಂಡೋಮ್ ನ್ನು ಕಾಣಿಕೆ ಡಬ್ಬಿಗೆ ಹಾಕುವ ಮೂಲಕ ವಿಕೃತಿ ಮರೆದಿದ್ದಾರೆ. ಮೊದಲೇ ಕೋಮು ಸೂಕ್ಷ್ಮ ಪ್ರದೇಶವಾಗಿರುವ ಮಂಗಳೂರಿನಲ್ಲಿ ಇಂತಹ ದುಷ್ಕೃತ್ಯ ನಡೆದಿರುವುದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಕೀಡಿಗೇಡಿ ಕೃತ್ಯ ನಡೆಸಿರುವ ದುಷ್ಕರ್ಮಿಗಳ, ಬಂಧವಾಗುವರೆಗೂ ಹೋರಾಟ ಮುಂದುವರೆಸುವುದಾಗಿ ದೈವಸ್ಥಾನಗಳ ಮುಖ್ಯಸ್ಥರು ತಿಳಿಸಿದ್ದಾರೆ.