ನಾಪೋಕ್ಲು : ಸಮೀಪದ ಕಕ್ಕುಂದ ಕಾಡು ವೆಂಕಟೇಶ್ವರ ದೇವಾಲಯದಲ್ಲಿ ಹುತ್ತರಿ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಗದ್ದೆಯಿಂದ ಭತ್ತದ ಕದಿರು ತಂದ ಬಳಿಕ ದೇವಾಲಯದ ನಮಸ್ಕಾರ ಮಂಟಪದಲ್ಲಿ ಇರಿಸಿ ಮುಖ್ಯ ಅರ್ಚಕ ಸುಧೀರ್ ಅವರು ಧಾನ್ಯಲಕ್ಷ್ಮೀ ಪೂಜೆ ನಡೆಸಿದರು. ಬಳಿಕ ತೀರ್ಥ ಪ್ರಸಾದ ಹಾಗೂ ಕದಿರನ್ನು ಭಕ್ತರಿಗೆ ವಿತರಿಸಲಾಯಿತು. ಈ ವೇಳೆ ದೇವಾಲಯದ ಆಡಳಿತ ಮಂಡಳಿ ಪದಾಧಿಕಾರಿಗಳು, ಸದಸ್ಯರು ಹಾಗೂ ಗ್ರಾಮಸ್ಥರು ಹಾಜರಿದ್ದರು.